
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯ ಭಾಗಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ ಸಂಜೆ ಭೇಟಿ ನೀಡಿ ಜಲಾಶಯದ ವೀಕ್ಷಣೆ ಮಾಡಿದರು. BRP ಜಂಗಲ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ದರ್ಶನ್, ಇಂದು ಭದ್ರ ಅಭಯಾರಣ್ಯದಲ್ಲಿ ಸಫಾರಿ ನಡೆಸಿ ವನ್ಯಜೀವಿಗಳ ಫೋಟೋ ಕ್ಲಿಕ್ಕಿಸಲಿದ್ದಾರೆ.
ದರ್ಶನ್ ಎರಡು ದಿನಗಳ ಕಾಲ ಜಂಗಲ್ ರೆಸಾರ್ಟ್‌ನಲ್ಲಿ ಉಳಿಯಲಿದ್ದಾರೆ. ದಚ್ಚುಗೆ ಹಾಸ್ಯ ನಟ ಚಿಕ್ಕಣ್ಣ ಸಾಥ್ ನೀಡಿದ್ದಾರೆ. ಜೊತೆಗೆ, 10ಕ್ಕೂ ಹೆಚ್ಚು ಇತರೆ ಸ್ನೇಹಿತರೊಂದಿಗೆ ದರ್ಶನ್ ಅಭಯಾರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ.
Published On - 10:14 am, Sat, 8 August 20