ಧಾರವಾಹಿಗಳಲ್ಲಿ ನಟಿಸುತ್ತಿದ್ದ ಸಮೀರ ಮತ್ತು ಅನುಪಮಾ ಆತ್ಮಹತ್ಯೆ
ನಟ-ನಟಿಯರಲ್ಲಿ ಆತ್ಮಹತ್ಯೆಗೆ ಶರಣಾಗುವ ಪ್ರವೃತ್ತಿ ಇತ್ತೀಚಿಗೆ ಜಾಸ್ತಿಯಾಗಿರುವಂತಿದೆ. ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮೂಲಕ ಸಾವು ಕಂಡುಕೊಂಡ ನಂತರ ಮತ್ತಷ್ಟು ಜನ ಹಾಗೆ ಸತ್ತಿದ್ದಾರೆ ಇಲ್ಲವೆ ಸಾಯುವ ಪ್ರಯತ್ನ ಮಾಡಿದ್ದಾರೆ. ಈ ಪಟ್ಟಿಗೀಗ, ಖ್ಯಾತ ಟಿವಿ ನಟ ಸಮೀರ ಶರ್ಮ ಮತ್ತು ಭೋಜಪುರಿ ನಟಿ ಅನುಪಮಾ ಪಾಠಕ್ ಸೇರಿದ್ದಾರೆ. ಅತ್ಯಂತ ಜನಪ್ರಿಯ, “ಕ್ಯೂಂಕೀ ಸಾಸ್ ಭೀ ಕಭಿ ಬಹು ಥೀ” ಮತ್ತು “ಯೆ ರಿಶ್ತಾ ಹೈ ಪ್ಯಾರ್ ಕಾ” ಟೆಲಿ ಸೀರಿಯಲ್ಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ […]
ನಟ-ನಟಿಯರಲ್ಲಿ ಆತ್ಮಹತ್ಯೆಗೆ ಶರಣಾಗುವ ಪ್ರವೃತ್ತಿ ಇತ್ತೀಚಿಗೆ ಜಾಸ್ತಿಯಾಗಿರುವಂತಿದೆ. ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮೂಲಕ ಸಾವು ಕಂಡುಕೊಂಡ ನಂತರ ಮತ್ತಷ್ಟು ಜನ ಹಾಗೆ ಸತ್ತಿದ್ದಾರೆ ಇಲ್ಲವೆ ಸಾಯುವ ಪ್ರಯತ್ನ ಮಾಡಿದ್ದಾರೆ. ಈ ಪಟ್ಟಿಗೀಗ, ಖ್ಯಾತ ಟಿವಿ ನಟ ಸಮೀರ ಶರ್ಮ ಮತ್ತು ಭೋಜಪುರಿ ನಟಿ ಅನುಪಮಾ ಪಾಠಕ್ ಸೇರಿದ್ದಾರೆ.
ಅತ್ಯಂತ ಜನಪ್ರಿಯ, “ಕ್ಯೂಂಕೀ ಸಾಸ್ ಭೀ ಕಭಿ ಬಹು ಥೀ” ಮತ್ತು “ಯೆ ರಿಶ್ತಾ ಹೈ ಪ್ಯಾರ್ ಕಾ” ಟೆಲಿ ಸೀರಿಯಲ್ಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಂತರ “ಹಸೀ ತೊ ಫಸೀ” ಶೀರ್ಷಿಕೆಯ ಬಾಲಿವುಡ್ ಚಿತ್ರದಲ್ಲಿಯೂ ನಟಿಸಿದ್ದ 44 ವರ್ಷ ವಯಸ್ಸಿನ ಸಮೀರ, ಬುಧವಾರದಂದು ಮುಂಬೈನಲ್ಲಿ ತಾವು ಒಂಟಿಯಾಗಿ ವಾಸಿಸುತ್ತಿದ್ದ ಬಾಡಿಗೆ ಅಪಾರ್ಟ್ಮಮೆಂಟೊಂದರ ಅಡುಗೆ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಇನ್ಸ್ಟಾಗ್ರಾಮ್ನಲ್ಲಿ ಒಂದು ಸುದೀರ್ಘವಾದ ಪೋಸ್ಟ್ ಹಾಕಿದ್ದ ಸಮೀರ, “ಸುಶಾಂತ್ ಸಿಂಗ್ ರಜಪೂತ ಸಾವಿನ ಬಗ್ಗೆ ನಿಮಗೆ ಕಾಳಜಿಯಿದ್ದರೆ ಇದನ್ನು ದಯವಿಟ್ಟು ಓದಿರಿ,” ಅಂತ ಬರೆದಿದ್ದರು.
ಸಮೀರ ಕೂಡ ಖಿನ್ನತೆಯಿಂದ ಬಳಲುತ್ತಿದ್ದಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಖಿನ್ನತೆ ಬಗ್ಗೆ ಅವರು ಬರೆದಿರುವ ಒಂದಷ್ಟು ಪೇಪರ್ಗಳು ಅವರಿಗೆ ಸಿಕ್ಕಿವೆಯಂತೆ.
ಅನುಪಮಾ ಬಿಹಾರದವರು
ಭೋಜಪುರಿ ನಟಿ ಅನುಪಮಾ ಮುಂಬೈನ ಮೀರಾ ರಸ್ತೆಯಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ಆಗಸ್ಟ 2ರಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳಿದ್ದಾರೆ. 40ರ ಪ್ರಾಯದವರಾಗಿದ್ದ ಅನಪಮಾ, ಭೋಜಪುರಿ ಸಿನಿಮಾ ಮತ್ತು ಹಿಂದಿ ಟೆಲಿ ಸೀರಿಯಲ್ಗಳಲ್ಲಿ ನಟಿಸಿದ್ದರು.
ಅನುಪಮಾ, ಮೂಲತಃ ಬಿಹಾರದವರಾದರೂ ಹಲವಾರು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದರು. ಪ್ರಾಥಮಿಕ ತನಿಖೆಯ ನಂತರ ಆವರು ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.