ನಟ ದರ್ಶನ್ ಅವರು ಮೈಸೂರಿನ ‘ಸಂದೇಶ್ ದಿ ಪ್ರಿನ್ಸ್’ ಹೋಟೆಲ್ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಗೆ ಚುರುಕು ಮುಟ್ಟಿಸಲಾಗಿದೆ. ಈ ಸಂಬಂಧ ಪೊಲೀಸರು ಸಂದೇಶ್ ಹೋಟೆಲ್ಗೆ ತೆರಳಿದ್ದು, ಅನೇಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ, ದರ್ಶನ್ ಅವರಿಂದ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾದ ಹೋಟೆಲ್ ಸಿಬ್ಬಂದಿ ಗಂಗಾಧರ್ ಅವರ ಹೇಳಿಕೆಯನ್ನೂ ಪೊಲೀಸರು ಪಡೆದುಕೊಂಡಿದ್ದಾರೆ. ಎಸಿಪಿ ಶಶಿಧರ್ ನೇತೃತ್ವದಲ್ಲಿ ಗಂಗಾಧರ್ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
ದರ್ಶನ್ ವಿರುದ್ಧದ ಈ ಪ್ರಕರಣ ಹೈಪ್ ಪಡೆದುಕೊಂಡಿದೆ. ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಲ್ಲೆ ನಡೆದಿದೆ ಎನ್ನಲಾದ ಹೋಟೆಲ್ನಲ್ಲಿ ಪೊಲೀಸರ ತಂಡ ಬೀಡುಬಿಟ್ಟಿದೆ. ಅನೇಕರಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ನಜರ್ಬಾದ್ ಠಾಣೆ ಇನ್ಸ್ಪೆಕ್ಟರ್ ಶ್ರೀಕಾಂತ್ ಕೂಡ ಉಪಸ್ಥಿತರಿದ್ದಾರೆ.
ಯಾರು ಈ ಗಂಗಾಧರ್?
ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಗಂಗಾಧರ ಎಂಬುವವರ ಮೇಲೆ ನಟ ದರ್ಶನ್ ಅವರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಕನ್ನಡದವರೇ ಎನ್ನುವ ಗಂಭೀರ ಆರೋಪವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ್ದಾರೆ. ಅಷ್ಟಕ್ಕೂ ಈ ಗಂಗಾಧರ್ ಯಾರು? ಅವರು ಎಲ್ಲಿಯವರು ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಹಲ್ಲೆಗೊಳಗಾಗಿದ್ದ ಗಂಗಾಧರ್ ಬಗ್ಗೆ ಟಿವಿ9 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ. ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ಗಂಗಾಧರ್ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಹೋಟೆಲ್ನಲ್ಲಿ ಗ್ರಾಹಕರಿಂದ ಆರ್ಡರ್ ತೆಗೆದುಕೊಳ್ಳುತ್ತಿದ್ದರು. ಹಲ್ಲೆಗೊಳಗಾಗಿದ್ದ ಗಂಗಾಧರ್ ಮೂಲತಃ ಕೇರಳದವರು. 8 ವರ್ಷಗಳ ಹಿಂದೆ ಮೈಸೂರಿಗೆ ಬಂದು ನೆಲೆಸಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.
ಗಂಗಾಧರ ಮಾತ್ರವಲ್ಲದೆ, ಜುಲೈ 3ರಂದು ಗೋಪಾಲ್ ರಾಜ್ ಎಂಬುವವರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಹಾಗೂ ಅವರು ಕೋಮಾದಲ್ಲಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಇಂದ್ರಜಿತ್ ಮಾಡಿದ್ದರು. ಈ ಬಗ್ಗೆ ಟಿವಿ9 ಸ್ಟುಡಿಯೋದಲ್ಲಿ ಗೋಪಾಲ್ ರಾಜ್ ಹೇಳಿಕೆ ನೀಡಿದ್ದಾರೆ. ‘ನನ್ನ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ನನಗೂ ದರ್ಶನ್ದೂ 30 ವರ್ಷಗಳ ಹಳೆಯ ಸ್ನೇಹವಿದೆ. ನನಗೂ, ದರ್ಶನ್ಗೂ ಯಾವುದೇ ಗಲಾಟೆ ಆಗಿಲ್ಲ. ಕೋಮಾದಲ್ಲಿ ಇದ್ದೇನೆ ಎನ್ನುವ ಆರೋಪಗಳು ಸುಳ್ಳು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಲ್ಯಾಂಬೋರ್ಗಿನಿ ಕಾರಲ್ಲಿ ದರ್ಶನ್; ಆಟೋದಲ್ಲಿ ಕಂಡ ಫ್ಯಾನ್ಸ್ ಮಾತನಾಡಿಸೋಕೆ ಮರೆಯಲಿಲ್ಲ ಡಿ ಬಾಸ್
‘ತಪ್ಪು ಮಾಡಿದ ಸೆಲೆಬ್ರಿಟಿಗಳು ತಪ್ಪಿಸಿಕೊಳ್ಳಬಾರದು’; ದರ್ಶನ್ ವಿರುದ್ಧ ಮತ್ತೆ ಹರಿಹಾಯ್ದ ಇಂದ್ರಜಿತ್ ಲಂಕೇಶ್