‘ಮಾರ್ಕ್’ ವಿರುದ್ಧ ನೆಗೆಟಿವ್ ಪ್ರಚಾರ: ಹಾಕಿರುವ ಸವಾಲು ಏನು?

Kichcha Sudeep‘s Mark Kannada Movie: ‘ಮಾರ್ಕ್’ ಸಿನಿಮಾ ಅನ್ನು ಸೋಲಿಸಿಯೇ ಸಿದ್ಧ ಎಂದು ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿನ್ನೆ ಹುಬ್ಬಳ್ಳಿಯಲ್ಲಿ ಸುದೀಪ್ ಆಡಿರುವ ಎಚ್ಚರಿಕೆಯ ಮಾತುಗಳು, ಈ ಉಪದ್ರವಿಗಳಿಗೆ ಇನ್ನಷ್ಟು ಉತ್ಸಾಹ ತುಂಬಿದಂತಿದೆ. ‘ಮಾರ್ಕ್’ ಸಿನಿಮಾದ ವಿರುದ್ಧ ನಡೆಯುತ್ತಿರುವ ಪಿತೂರಿ ಎಂಥಹದ್ದು? ಇಲ್ಲಿದೆ ನೋಡಿ ಮಾಹಿತಿ..

‘ಮಾರ್ಕ್’ ವಿರುದ್ಧ ನೆಗೆಟಿವ್ ಪ್ರಚಾರ: ಹಾಕಿರುವ ಸವಾಲು ಏನು?
Mark Kannada Movie

Updated on: Dec 21, 2025 | 5:21 PM

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರಲಿದೆ. ಆದರೆ ‘ಮಾರ್ಕ್’ ಸಿನಿಮಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ. ‘ಮಾರ್ಕ್’ ಸಿನಿಮಾ ಅನ್ನು ಸೋಲಿಸಿಯೇ ಸಿದ್ಧ ಎಂದು ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿನ್ನೆ ಹುಬ್ಬಳ್ಳಿಯಲ್ಲಿ ಸುದೀಪ್ ಆಡಿರುವ ಎಚ್ಚರಿಕೆಯ ಮಾತುಗಳು, ಈ ಉಪದ್ರವಿಗಳಿಗೆ ಇನ್ನಷ್ಟು ಉತ್ಸಾಹ ತುಂಬಿದಂತಿದೆ.

ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಪರಸ್ಪರ ದ್ವೇಷಿಸಲು ಶುರು ಮಾಡಿ ದಶಕವಾಗುತ್ತಾ ಬಂದಿದೆ. ದರ್ಶನ್ ಮತ್ತು ಸುದೀಪ್ ಮಧ್ಯೆ ಬಿರುಕು ಮೂಡಿದ್ದೇ ಇದಕ್ಕೆ ಕಾರಣ. ಒಬ್ಬರ ಸಿನಿಮಾಕ್ಕೆ ಇನ್ನೊಬ್ಬರು ಸಮಸ್ಯೆ ಮಾಡುತ್ತಾ, ಸಿನಿಮಾದ ವಿರುದ್ಧ ನೆಗೆಟಿವ್ ಪ್ರಚಾರ ಮಾಡುವುದು, ಸಿನಿಮಾದ ಪೈರಸಿ ಮಾಡುವುದು ಹೀಗೆ ನಾನಾ ರೀತಿಯ ಕುತಂತ್ರಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ದರ್ಶನ್ ಅಭಿಮಾನಿಗಳು, ‘ಮಾರ್ಕ್’ ಸಿನಿಮಾದ ಮೇಲೆ ಬಿದ್ದಿದ್ದು, ಸಿನಿಮಾವನ್ನು ಸೋಲಿಸಿಯೇ ಸಿದ್ಧ ಎಂದಿದ್ದಾರೆ. ‘ಡೆವಿಲ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಪ್ರದರ್ಶನ ಕಂಡಿಲ್ಲ, ಹಾಗಾಗಿ ಈಗ ‘ಮಾರ್ಕ್’ ಅನ್ನೂ ಸೋಲಿಸಿ ಸಂತೋಷ ಪಡುವ ಪ್ರಯತ್ನದಲ್ಲಿ ದರ್ಶನ್ ಅಭಿಮಾನಿಗಳು ಇದ್ದಂತಿದೆ.

‘ಮಾರ್ಕ್’ ಸಿನಿಮಾದ ವಿರುದ್ಧ ನೆಗೆಟಿವ್ ಪ್ರಚಾರವನ್ನು ದರ್ಶನ್ ಅಭಿಮಾನಿಗಳು ಕೆಲವರು ಮಾಡುತ್ತಿದ್ದಾರೆ. ‘ಮಾರ್ಕ್’ ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಕಾವೇರಿ ನದಿ ತಮಿಳುನಾಡಿಗೆ ಸೇರಿದ್ದು ಎಂದು ಹೇಳಿದ್ದಾರೆಂದು, ಟಿವಿ9ನಲ್ಲಿ ವರದಿ ಬಂದಿದೆ ಎಂಬಂತೆ ನಕಲಿ ಪೋಸ್ಟ್ ಒಂದನ್ನು ತಯಾರಿಸಿ ಹರಿಬಿಟ್ಟಿದ್ದು, ವಿಜಯ್ ಕಾರ್ತಿಕೇಯ ಹೇಳಿಕೆ ವಿರೋಧಿಸಿ ‘ಮಾರ್ಕ್’ ಸಿನಿಮಾ ಬ್ಯಾನ್ ಮಾಡಿ ಎಂದು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದು ಅಪ್ಪಟ ಸುಳ್ಳು ಸುದ್ದಿಯಾಗಿದೆ. ವಿಜಯ್ ಕಾರ್ತಿಕೇಯ ಅವರು ಕಾವೇರಿ ಬಗ್ಗೆ ಯಾವುದೇ ನಗೆಟಿವ್ ಹೇಳಿಕೆಗಳನ್ನು ನೀಡಿಲ್ಲ.

ಇದನ್ನೂ ಓದಿ:ಸುದೀಪ್ ಎದುರೇ ಧ್ರುವಂತ್​​ಗೆ ಬೆದರಿಕೆ ಹಾಕಿದ ರಕ್ಷಿತಾ ಶೆಟ್ಟಿ

ಇದು ಮಾತ್ರವೇ ಅಲ್ಲದೆ, ‘ದರ್ಶನ್ ಅಭಿಮಾನಿಗಳು ಕೆಲವರು ಪೋಸ್ಟ್ ಹಂಚಿಕೊಂಡಿದ್ದು, ‘ಮಾರ್ಕ್’ ಸಿನಿಮಾದ ಪೈರಸಿ ಮಾಡುವುದಾಗಿ ಪೋಸ್ಟ್​​ನಲ್ಲಿ ರಾಜಾ ರೋಷವಾಗಿ ಹೇಳಿದ್ದಾರೆ. ‘ಡೆವಿಲ್’ ಸಿನಿಮಾದ 9501 ಲಿಂಕ್​​ಗಳನ್ನು ನಾವು ಡಿಲೀಟ್ ಮಾಡಿದ್ದೀವಿ, ನಮ್ಗೆ ಯಾವುದೂ ಇಟ್ಕೊಂಡ್ ಅಭ್ಯಾಸ ಇಲ್ಲ, ವಾಪಸ್ ಈಸ್ಕೊಳ್ಳೋಕೆ ರೆಡಿಯಾಗಿ’ ಎಂದೆಲ್ಲ ಪೋಸ್ಟ್ ಮಾಡಲಾಗಿದೆ. ಆ ಮೂಲಕ ತಾವು, ‘ಮಾರ್ಕ್’ ಸಿನಿಮಾದ ಪೈರಸಿ ಮಾಡುತ್ತೀವಿ ಎಂದು ಹೇಳಿಕೊಂಡಿದ್ದಾರೆ. ಇನ್ನು ಬುಕ್​ ಮೈ ಶೋನಲ್ಲೂ ಸಹ ಅಚಾನಕ್ಕಾಗಿ ‘ಡೆವಿಲ್’ ಸಿನಿಮಾದ ಲೈಕ್​​ಗಳ ಸಂಖ್ಯೆ ಹೆಚ್ಚು ಮಾಡಲಾಗಿದೆ. ‘ಮಾರ್ಕ್’ ಸಿನಿಮಾ ಬಿಡುಗಡೆ ಬಳಿಕ ಸಿನಿಮಾಕ್ಕೆ ನೆಗೆಟಿವ್ ರಿವ್ಯೂ ಕೊಡುವ ಸಾಧ್ಯತೆಯೂ ಇದೆ.

ಈ ಮುಂಚೆಯೂ ಸಹ ಸುದೀಪ್ ಅವರ ಸಿನಿಮಾಗಳನ್ನು ಟಾರ್ಗೆಟ್ ಮಾಡಿ ಸೋಲಿಸುವ ಪ್ರಯತ್ನಗಳು ನಡೆದಿದ್ದವು. ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾವನ್ನು ಪೈರಸಿ ಮಾಡಲಾಗಿತ್ತು. ಸುದೀಪ್ ಅವರು ದೂರು ನೀಡಿದ ಬಳಿಕ ದರ್ಶನ್ ಅಭಿಮಾನಿಯೊಬ್ಬನ ಬಂಧನವೂ ಆಗಿತ್ತು. ಅದಾದ ಬಳಿಕವೂ ಸಹ ಹಲವು ಬಾರಿ ಸುದೀಪ್ ಸಿನಿಮಾಗಳ ಮೇಲೆ ದಾಳಿ ನಡೆಯುತ್ತಲೇ ಬಂದಿದೆ. ಆದರೆ ಅವರ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಪ್ರದರ್ಶನ ಮಾಡುತ್ತಲೇ ಬಂದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Sun, 21 December 25