ಸುದೀಪ್ ಎಚ್ಚರಿಕೆ ಕೊಟ್ಟಿದ್ದು ಯಾರಿಕೆ ಮತ್ತು ಏಕೆ?
Kichcha Sudeep: ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ ಹುಬ್ಭಳ್ಳಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಸುದೀಪ್ ಕೆಲವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಸುದೀಪ್ ಎಚ್ಚರಿಕೆ ನೀಡಿದ್ದು ಯಾರಿಗೆ ಎಂಬ ಅನುಮಾನ ಮೂಡಿತ್ತು. ಆದರೆ ದರ್ಶನ್ ಅಭಿಮಾನಿಗಳ ಪ್ರತಿಕ್ರಿಯೆ ನೋಡಿ ಸುದೀಪ್ ಮಾತನಾಡಿದ್ದು ಯಾರ ಬಗ್ಗೆ ಎಂಬುದು ಖಾತ್ರಿ ಆಗುತ್ತಿದೆ.

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ಬೆಂಗಳೂರು, ಚೆನ್ನೈ ಇನ್ನೂ ಕೆಲವೆಡೆ ಪ್ರಚಾರ ಮುಗಿಸಿರುವ ಸುದೀಪ್ ನಿನ್ನೆ ಹುಬ್ಭಳ್ಳಿಯಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿದ್ದರು. ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ಸಿನಿಮಾ ತಂಡವನ್ನು ಕೊಂಡಾಡುವ ಜೊತೆಗೆ ಕೆಲವರಿಗೆ ಎಚ್ಚರಿಕೆ ಸಹ ನೀಡಿದರು. ನಾವು ಸಿನಿಮಾ ಬಿಡುಗಡೆ ಮಾಡುವ ಜೊತೆಗೆ ಯುದ್ಧವೊಂದನ್ನು ಸಹ ಮಾಡಬೇಕಿದೆ, ಹೊರಗೆ ಪಡೆ ಒಂದು ಯುದ್ಧಕ್ಕೆ ರೆಡಿ ಆಗುತ್ತಿದೆ. ನಾನು ಮಾತನಾಡಬಾರದು ಎಂದು ಸುಮ್ಮನಿದ್ದೆ, ಆದರೆ ಕೆರಳಿಸಿದರೆ ಸುಮ್ಮನಿರಲ್ಲ’ ಎಂದಿದ್ದಾರೆ.
ಸುದೀಪ್ ಅವರ ಈ ಮಾತುಗಳು ಸಖತ್ ವೈರಲ್ ಆಗಿವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸುದೀಪ್ ಅವರ ಈ ಮಾತುಗಳಿಗೆ ಅರ್ಥ ಕಲ್ಪಿಸುತ್ತಿದ್ದಾರೆ. ಸುದೀಪ್ ಅವರು ‘45’ ಸಿನಿಮಾದ ಕುರಿತು ಮಾತನಾಡಿದ್ದಾರೆ ಎಂದು ಸಹ ಕೆಲವರು ಹೇಳುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣ ಗಮನಿಸಿದರೆ ಸುದೀಪ್ ಯಾರ ಬಗ್ಗೆ ಮಾತನಾಡಿದ್ದಾರೆ ಎಂಬ ಸುಳಿವು ಸಿಗುತ್ತದೆ.
‘ಮಾರ್ಕ್’ ಸಿನಿಮಾದ ಪ್ರಚಾರ ಆರಂಭವಾದಾಗಿನಿಂದಲೂ ದರ್ಶನ್ ಅಭಿಮಾನಿಗಳು ಸಿನಿಮಾದ ವಿರುದ್ಧ ಕಿತಾಪತಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ‘ಮಾರ್ಕ್’ ಸಿನಿಮಾ ನಿರ್ದೇಶಕ ವಿಜಯ್ ಕಾರ್ತಿಕೇಯ, ‘ಕಾವೇರಿ ತಮಿಳಿಗೆ ಸೇರಬೇಕು’ ಎಂದು ಹೇಳಿದ್ದಾರೆಂದು ನಕಲಿ ಪೋಸ್ಟ್ ತಯಾರಿಸಿ ಹಂಚಿಕೊಂಡು ಸುಳ್ಳು ಸುದ್ದಿ ಹಬ್ಬುವ ಯತ್ನ ಮಾಡಿದ್ದರು. ‘ಡೆವಿಲ್’ ಸಿನಿಮಾದ ಒಂಬತ್ತು ಸಾವಿರ ಪೈರಸಿ ಲಿಂಕ್ಗಳನ್ನು ತೆಗೆದು ಹಾಕಿದ್ದೇವೆ, ಈಗ ನಿಮಗೂ ನಾವು ಇದೇ ರೀತಿ ಮಾಡಲಿದ್ದೇವೆ ಎನ್ನುವ ಮೂಲಕ ಪೈರಸಿ ಮಾಡುವ ಬೆದರಿಕೆ ಹಾಕಿದ್ದರು. ಬುಕ್ಮೈ ಶೋನಲ್ಲಿ ಸಹ ರೇಟಿಂಗ್ ಕಡಿಮೆ ಮಾಡುವ ಪ್ರಯತ್ನವೂ ನಡೆದಿತ್ತು.
ಇದನ್ನೂ ಓದಿ:ಸುದೀಪ್ ಎದುರೇ ಧ್ರುವಂತ್ಗೆ ಬೆದರಿಕೆ ಹಾಕಿದ ರಕ್ಷಿತಾ ಶೆಟ್ಟಿ
ಇದೆಲ್ಲವನ್ನೂ ಗಮನಿಸಿದ ಸುದೀಪ್ ಅವರು ಬಹುಷಃ ಹುಬ್ಬಳ್ಳಿಯಲ್ಲಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಸುದೀಪ್ ಅವರ ಮಾತುಗಳನ್ನೇ ಇರಿಸಿಕೊಂಡು ದರ್ಶನ್ ಅಭಿಮಾನಿಗಳು ಇದೀಗ ಇನ್ನಷ್ಟು ನೆಗೆಟಿವ್ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ‘ಮಾರ್ಕ್’ ಸಿನಿಮಾಕ್ಕೆ ಹಾನಿ ಮಾಡಿಯೇ ಸಿದ್ಧ ಎಂದು ಕೆಲವು ಕಿಡಿಗೇಡಿ ದರ್ಶನ್ ಅಭಿಮಾನಿಗಳು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.

Darshan
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇದೇ ತಿಂಗಳು 11 ರಂದು ಬಿಡುಗಡೆ ಆಗಿತ್ತು. ಮೊದಲ ದಿನ ಉತ್ತಮ ಗಳಿಕೆ ಮಾಡಿದ ‘ಡೆವಿಲ್’ ಆ ನಂತರ ತುಸು ಮಂಕಾಯ್ತು. ಇದೀಗ ಡಿಸೆಂಬರ್ 25ರಂದು ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




