Roberrt Movie: ದರ್ಶನ್ ಕಟೌಟ್​ಗೆ ಬಿಯರ್​ನಿಂದ ಅಭಿಷೇಕ; ವಿಡಿಯೋ ವೈರಲ್

ನ್ಸ್​ ಡಿ ಬಾಸ್​ ಮೇಲಿರುವ ಅಭಿಮಾನ ತೋರುತ್ತಿದ್ದಾರೆ. ತುಮಕೂರಿನ ಚಿತ್ರಮಂದಿರದಲ್ಲಿ ದರ್ಶನ್​ ಕಟೌಟ್​ಗೆ ಅಭಿಮಾನಿಗಳು ಬಿಯರ್​ನಿಂದ ಅಭಿಷೇಕ ಮಾಡಿಸಿದ್ದಾರೆ.

Roberrt Movie: ದರ್ಶನ್ ಕಟೌಟ್​ಗೆ ಬಿಯರ್​ನಿಂದ ಅಭಿಷೇಕ; ವಿಡಿಯೋ ವೈರಲ್
ಬಿಯರ್​ ಸುರಿಯುತ್ತಿರುವ ಅಭಿಮಾಣಿಗಳು

Updated on: Mar 11, 2021 | 12:49 PM

ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಶಿವರಾತ್ರಿ ಪ್ರಯುಕ್ತ ಇಂದು (ಮಾರ್ಚ್​​ 11) ರಿಲೀಸ್​ ಆಗಿದೆ. ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆಗಳಲ್ಲಿ ಮುಂಜಾನೆ 6 ಗಂಟೆಗೆ ರಾಬರ್ಟ್​ ಪ್ರದರ್ಶನ ಕಂಡಿದೆ. ಸಿನಿಮಾ ಬಗ್ಗೆ ಪಾಸಿಟಿವ್​ ವಿಮರ್ಷೆಗಳು ಬರುತ್ತಿದ್ದು, ಅಭಿಮಾನಿಗಳು ಸಖತ್​ ಖುಷಿ ಆಗಿದ್ದಾರೆ. ಈ ಮಧ್ಯೆ ಫ್ಯಾನ್ಸ್​ ಡಿ ಬಾಸ್​ ಮೇಲಿರುವ ಅಭಿಮಾನ ತೋರುತ್ತಿದ್ದಾರೆ. ತುಮಕೂರಿನ ಚಿತ್ರಮಂದಿರದಲ್ಲಿ ದರ್ಶನ್​ ಕಟೌಟ್​ಗೆ ಅಭಿಮಾನಿಗಳು ಬಿಯರ್​ನಿಂದ ಅಭಿಷೇಕ ಮಾಡಿದ್ದಾರೆ.

ಸಾಮಾನ್ಯವಾಗಿ ಅಭಿಮಾನಿಗಳು ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿ ಹೂವಿನ ಮಳೆ ಸುರಿಯುವುದು ಸಾಮಾನ್ಯ. ಆದರೆ, ತುಮಕೂರಿನಲ್ಲಿ ಅಭಿಮಾನಿಗಳು ಚಿತ್ರಮಂದಿರದ ಎದುರು ದರ್ಶನ್​ ಫೋಟೋ ಹಾಗೂ ಕಟೌಟ್​ಗೆ ಬಿಯರ್​ನಿಂದ ಅಭಿಷೇಕ ಮಾಡಿ ಖುಷಿ ಹಂಚಿಕೊಂಡಿದ್ದಾರೆ.


ಜೆಪಿ ನಗರದಲ್ಲಿ 13 ಕಟೌಟ್ಸ್​
ಬೆಂಗಳೂರಿನ ಹಲವು ಚಿತ್ರಮಂದರಿಗಳಲ್ಲಿ ಮುಂಜಾನೆ 6 ಗಂಟೆಗೆ ರಾಬರ್ಟ್​ ಸಿನಿಮಾ ಪ್ರದರ್ಶನ ಕಂಡಿದೆ. ಜೆಪಿ ನಗರದ ಸಿದ್ಧೇಶ್ವರ ಥಿಯೇಟರ್​​ನಲ್ಲಿ ಫ್ಯಾನ್ಸ್ ಬರೋಬ್ಬರಿ 13 ಕಟೌಟ್ ಹಾಕಿದ್ದಾರೆ. ಒಂದೊಂದು ಕಟೌಟ್ಒಂ ದೊಂದು ರೀತಿ ಇದೆ. ದರ್ಶನ ಅಭಿನಯಿಸಿರುವ ಸಿನಿಮಾಗಳ ಪಾತ್ರಗಳ ಗೆಟಪ್​ನಲ್ಲಿ ಕಟೌಟ್ಸ್ ಸಿದ್ಧಗೊಂಡಿದೆ.

ಭರ್ಜರಿ ಕಲೆಕ್ಷನ್​ ಸಾಧ್ಯತೆ
ಗುರುವಾರ ಶಿವರಾತ್ರಿ ಪ್ರಯುಕ್ತ ರಜೆ ಇದೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲೇ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಾರೆ. ಶುಕ್ರವಾರ ಚಿತ್ರರಂಗದ ಪಾಲಿಗೆ ವಿಶೇಷ ದಿನ. ಹೀಗಾಗಿ, ಅಂದು ಕೂಡ ಪ್ರೇಕ್ಷಕರು ಥಿಯೇಟರ್​ಗೆ ಬರುತ್ತಾರೆ. ಇನ್ನು, ಶನಿವಾರ-ಭಾನುವಾರ ವೀಕೆಂಡ್​ ಆದ್ದರಿಂದ ಅಂದು ಕೂಡ ದರ್ಶನ್​ ಸಿನಿಮಾ ಬಾಕ್ಸ್​ ಆಫೀಸ್​ ಧೂಳೆಬ್ಬಿಸುವ ಲಕ್ಷಣ ಇದೆ.
ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್​ ಅವರು ರಾಬರ್ಟ್​ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಈಗ ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್​ ಅವರು ಹೊಸ ಕಥೆ ಬರೆದು ‘ರಾಬರ್ಟ್​’ ಸಿನಿಮಾ ಮಾಡಿದ್ದಾರೆ. ಆಶಾ ಭಟ್​ ಸಿನಿಮಾದ ನಾಯಕಿ. ತೆಲುಗಿನ ಖಳ ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್​​ ಪ್ರಭಾಕರ್​, ರವಿಶಂಕರ್​, ಸೋನಲ್​ ಮಂಥೆರೋ, ಚಿಕ್ಕಣ್ಣ, ಅವಿನಾಶ್​, ದೇವರಾಜ್​, ಶಿವರಾಜ್​ ಕೆ.ಆರ್​. ಪೇಟೆ, ಐಶ್ವರ್ಯಾ ಪ್ರಸಾದ್​ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಬಾ.. ಬಾ.. ನಾ ರೆಡಿ ಅಂದ ರಾಬರ್ಟ್.. ಚಿತ್ರಮಂದಿರಗಳ ಗ್ಲಾಸ್ ಪುಡಿ ಪುಡಿ, ದರ್ಶನ್ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್

Published On - 12:47 pm, Thu, 11 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us