ಪುದುಚೇರಿಯಲ್ಲಿ ಆದಿನ ಸಿಕ್ಸ್ತ್​​ ಸೆನ್ಸ್​ ವರ್ಕ್​ ಆಗಿರಲಿಲ್ಲ ಅಂದ್ರೆ.. ತಪ್ಪಿದ​ ಅವಘಡದ ಬಗ್ಗೆ ದರ್ಶನ್​ ಮಾತು

ವಿಶೇಷ ಫೈಟ್​ ಸೀನ್​ ಶೂಟಿಂಗ್​ ಮಾಡೋಕೆ ನಾವು ಪಾಂಡಿಚೇರಿಗೆ ತೆರಳಿದ್ದೆವು. ಈ ವೇಳೆ ಸಮುದ್ರದ ದಡವೊಂದರಲ್ಲಿ ಶೂಟ್​ ಮಾಡುತ್ತಿದ್ದೆವು ಎಂದು ದರ್ಶನ್​ ರಾಬರ್ಟ್​ ಶೂಟಿಂಗ್​ ದಿನವನ್ನು ನೆನೆದಿದ್ದಾರೆ.

ಪುದುಚೇರಿಯಲ್ಲಿ ಆದಿನ ಸಿಕ್ಸ್ತ್​​ ಸೆನ್ಸ್​ ವರ್ಕ್​ ಆಗಿರಲಿಲ್ಲ ಅಂದ್ರೆ.. ತಪ್ಪಿದ​ ಅವಘಡದ ಬಗ್ಗೆ ದರ್ಶನ್​ ಮಾತು
ನಟ ದರ್ಶನ್​(ಸಾಂದರ್ಭಿಕ ಚಿತ್ರ)

Updated on: Feb 24, 2021 | 8:47 PM

ಇದೇ ಮಾರ್ಚ್​​ 11ರಂದು ನಟ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾದ ವಿಶೇಷತೆಗಳ ಬಗ್ಗೆ ನಟ ದರ್ಶನ್​ ಮಾತನಾಡಿದ್ದಾರೆ.  ಆ ಶೂಟಿಂಗ್​ ವೇಳೆ ನಡೆದ ಕಹಿ ಘಟನೆಯ ಬಗ್ಗೆ ದರ್ಶನ್​ ಮಾತನಾಡಿದ್ದಾರೆ. ಫೈಟ್​​ ಸೀನ್​ ಮಾಡೋ ವೇಳೆ ತಪ್ಪಿದ ಅವಘಡವನ್ನು ದರ್ಶನ್​ ನೆನಪಿಸಿಕೊಂಡಿದ್ದಾರೆ.

ವಿಶೇಷ ಫೈಟ್​ ಸೀನ್​ ಶೂಟಿಂಗ್​ ಮಾಡೋಕೆ ನಾವು ಪುದುಚೇರಿಗೆ ತೆರಳಿದ್ದೆವು. ಈ ವೇಳೆ ಸಮುದ್ರದ ದಡವೊಂದರಲ್ಲಿ ಶೂಟ್​ ಮಾಡುತ್ತಿದ್ದೆವು. ಶೂಟಿಂಗ್​ಗೆ ಬೇಕಾದ ಸೆಟ್​ ಹಾಗೂ ವಾಹನಗಳನ್ನು ನಾವು ಅಲ್ಲಿ ನಿಲ್ಲಿಸಿದ್ದೆವು. ನಾಲ್ಕೈದು ದಿನ ಶೂಟಿಂಗ್​ ಕೂಡ ಪೂರ್ಣಗೊಂಡಿತ್ತು.

ಈ ವೇಳೆ ನಾವು ರಾತ್ರಿ ತಿನ್ನೋಕೆಂದು ಹೊರಗೆ ಹೋಗಿದ್ದೆವು. ಆಗ ವಾತಾವರಣ ಚೇಂಜ್​ ಆಗೋಕೆ ಶುರುವಾಗಿತ್ತು. ನಿರ್ದೇಶಕರು, ಇದೇಕೋ ಸರಿ ಹೋಗುತ್ತಿಲ್ಲ. ಹೊರಟು ಬಿಡೋಣ. ಉಳಿದ ಭಾಗವನ್ನು ಬೇರೆ ಕಡೆ ಶೂಟಿಂಗ್​ ಮಾಡೋಣ. ನಾನು ಅದನ್ನು ಮ್ಯಾಚ್​ ಮಾಡಿಕೊಳ್ಳುತ್ತೇನೆ ಎಂದಿದ್ದರು.

ನಿರ್ದೇಶಕ ತರುಣ್​ ಸುಧೀರ್ ಅವರು ಹೇಳಿದಂತೆ ನಾವು ಶೂಟಿಂಗ್​ ಜಾಗವನ್ನು ಖಾಲಿ ಮಾಡಿದೆವು. ರಾತ್ರಿ ಮಳೆ ಬರೋಕೆ ಆರಂಭವಾಗಿದ್ದು ನಿಲ್ಲಲೇ ಇಲ್ಲ. ನಾವು ಶೂಟಿಂಗ್​ ಮಾಡುತ್ತಿದ್ದ ಜಾಗ ಮರಳು ಗಾಡಿನಂತೆ ಇತ್ತು. ಆದರೆ, ಮಳೆಯಿಂದಾಗಿ ಆ ಜಾಗ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಒಂದೊಮ್ಮೆ ನಾವು ಸೆಟ್​ ಖಾಲಿ ಮಾಡದೆ ಇದ್ದಿದ್ದರೆ ತುಂಬಾನೇ ತೊಂದರೆ ಉಂಟಾಗುತ್ತಿತ್ತು. ನಿಜಕ್ಕೂ ಸಿಕ್ಸ್ತ್​​​ ಸೆನ್ಸ್​ ನಮ್ಮನ್ನು ಅಲ್ಲಿಂದ ಹೊರಡುವಂತೆ ಮಾಡಿತ್ತು ಎಂದಿದ್ದಾರೆ.

ಜಗ್ಗೇಶ್​ ಬಳಿ  ಕ್ಷಮೆ ಕೇಳಿದ ದರ್ಶನ್​
ಈ ಬಗ್ಗೆ ಮಾತನಾಡಿರುವ ದರ್ಶನ್​, ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ವಿವಾದ ಆಗುವ ದಿನ ನಾನು ತಿರುಪತಿಗೆ ಹೋಗಿದ್ದೆ. ತಿರುಪತಿಯಿಂದ ಮನೆಗೆ ಬರೋದು ರಾತ್ರಿ 2 ಗಂಟೆ ಆಗಿತ್ತು. ಮನೆಗೆ ಬಂದು ಮೊಬೈಲ್​ ನೋಡಿದಾಗ ನಿರ್ಮಾಪಕ ವಿಖ್ಯಾತ್​​​ದು 50-60 ಮಿಸ್​ ಕಾಲ್​ಗಳಿದ್ದವು. ಮಧ್ಯರಾತ್ರಿ ಕಾಲ್​ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ, ಬೆಳಗ್ಗೆ ಜಿಮ್​ ಮುಗಿಸಿ ಬಂದು ಕರೆ ಮಾಡಿದೆ. ಆಗ ವಿಚಾರ ತಿಳಿತು.

ನನ್ನ ಅಭಿಮಾನಿಗಳು ಜಗ್ಗೇಶ್​ ಸೆಟ್​​ಗೆ ಹೋಗೋ ವಿಚಾರ ನನಗೆ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದರೆ ನಾನು ಅಭಿಮಾನಿಗಳ ಬಳಿ ಹೋಗೋದೇ ಬೇಡ ಎನ್ನುತ್ತಿದೆ. ಅವರು ನಮ್​ ಸೀನಿಯರ್​. ಅವರು ಮಾತನಾಡಿದ್ದರೆ ಅದು ನಮ್ಮ ಬಗ್ಗೆಯೇ ತಾನೆ. ಸೀನಿಯರ್​ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡೋಕಾಗುತ್ತದೆ? ನನ್ನ ಅಭಿಮಾನಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

Published On - 6:28 pm, Wed, 24 February 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us