ಪೊಲೀಸರಿಂದ ಪ್ರದೋಶ್​​ ಮೇಲೆ ಪ್ರಭಾವ: ದರ್ಶನ್ ವಕೀಲರ ಗಂಭೀರ ಆರೋಪ

ಪ್ರದೋಶ್ ಅವರ ಹೇಳಿಕೆಯಲ್ಲಿರುವ ಕೆಲ ಅಂಶಗಳಂತೂ ದರ್ಶನ್​​ಗೆ ಮುಳುವಾಗುವುದು ಖಾತ್ರಿ ಎನ್ನಲಾಗುತ್ತಿದೆ. ಪ್ರದೋಶ್ ಹೇಳಿಕೆಯನ್ನು ತಡೆಯಲು ದರ್ಶನ್ ಪರ ವಕೀಲರು ನಾನಾ ಪ್ರಯತ್ನ ಮಾಡಿದರು. ಆದರೆ ಸಾಧ್ಯವಾಗಲಿಲ್ಲ. ಕೊನೆಗೂ ಪ್ರದೋಶ್ ಸಾಕ್ಷ್ಯ ನುಡಿದಿದ್ದಾರೆ. ಇದೀಗ ಆ ಸಾಕ್ಷ್ಯದ ಮೇಲೆಯೇ ಆರೋಪ ಮಾಡಿದ್ದಾರೆ ದರ್ಶನ್ ಪರ ವಕೀಲ ಹಷ್ಮತ್. ಪ್ರದೋಶ್ ಅವರಿಗೆ ಪೊಲೀಸರು ಹೇಳಿಕೊಟ್ಟು ಸಾಕ್ಷ್ಯ ನುಡಿಸಿದ್ದಾರೆ ಎಂದು ಹಷ್ಮತ್ ಅವರು ಆರೋಪ ಮಾಡಿದ್ದು, ನ್ಯಾಯಾಲಯಕ್ಕೆ ಕೆಲ ಆಧಾರಗಳನ್ನು ನೀಡಿದ್ದಾರೆ.

ಪೊಲೀಸರಿಂದ ಪ್ರದೋಶ್​​ ಮೇಲೆ ಪ್ರಭಾವ: ದರ್ಶನ್ ವಕೀಲರ ಗಂಭೀರ ಆರೋಪ
Pradosh Rao, Darshan

Updated on: Oct 03, 2026 | 6:56 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಮಾಫಿ ಸಾಕ್ಷಿ ಪ್ರದೋಶ್ ಹೇಳಿಕೆ ದೊಡ್ಡ ತಿರುವು ನೀಡಿದೆ. ಪ್ರದೋಶ್ ಇತ್ತೀಚೆಗಷ್ಟೆ ಇಡೀ ಪ್ರಕರಣದ ಬಗ್ಗೆ ತಾವು ನೋಡಿದ ವಿಷಯಗಳನ್ನು ವಿವರವಾಗಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಪ್ರದೋಶ್ ಅವರ ಹೇಳಿಕೆಯಲ್ಲಿರುವ ಕೆಲ ಅಂಶಗಳಂತೂ ದರ್ಶನ್​​ಗೆ ಮುಳುವಾಗುವುದು ಖಾತ್ರಿ ಎನ್ನಲಾಗುತ್ತಿದೆ. ಪ್ರದೋಶ್ ಹೇಳಿಕೆಯನ್ನು ತಡೆಯಲು ದರ್ಶನ್ ಪರ ವಕೀಲರು ನಾನಾ ಪ್ರಯತ್ನ ಮಾಡಿದರು. ಆದರೆ ಸಾಧ್ಯವಾಗಲಿಲ್ಲ. ಕೊನೆಗೂ ಪ್ರದೋಶ್ ಸಾಕ್ಷ್ಯ ನುಡಿದಿದ್ದಾರೆ. ಇದೀಗ ಆ ಸಾಕ್ಷ್ಯದ ಮೇಲೆಯೇ ಆರೋಪ ಮಾಡಿದ್ದಾರೆ ದರ್ಶನ್ ಪರ ವಕೀಲ ಹಷ್ಮತ್. ಪ್ರದೋಶ್ ಅವರಿಗೆ ಪೊಲೀಸರು ಹೇಳಿಕೊಟ್ಟು ಸಾಕ್ಷ್ಯ ನುಡಿಸಿದ್ದಾರೆ ಎಂದು ಹಷ್ಮತ್ ಅವರು ಆರೋಪ ಮಾಡಿದ್ದು, ನ್ಯಾಯಾಲಯಕ್ಕೆ ಕೆಲ ಆಧಾರಗಳನ್ನು ನೀಡಿದ್ದಾರೆ.

59ನೇ ಸಿಸಿಹೆಚ್ ಕೋರ್ಟ್ ಗೆ ಅರ್ಜಿ ಹಾಕಿರುವ ದರ್ಶನ್ ಪರ ವಕೀಲರು, ಜೈಲಿನಿಂದ ಪ್ರದೋಷ್ ಅನ್ನು ನ್ಯಾಯಾಲಯಕ್ಕೆ ಕರೆ ತರುವಾಗ ಏನು ಹೇಳಿಕೆ ಕೊಡಬೇಕೆಂದು ಪ್ರದೋಷ್ ಗೆ ಪೊಲೀಸರು ಹೇಳಿಕೊಡುತ್ತಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಎಸ್ಕಾರ್ಟ್ ಕೊಡುವಂತಿರಲಿಲ್ಲ, ವಿಶೇಷ ಸಿಆರ್ ಪೊಲೀಸರಿಗೆ ಎಸ್ಕಾರ್ಟ್ ಕೊಡಬೇಕಿತ್ತು, ಆದರೆ ಕಾಮಾಕ್ಷಿಪಾಳ್ಯ ಪೊಲೀಸರು ಪ್ರದೋಶ್​​ಗೆ ಎಸ್ಕಾರ್ಟ್ ಕೊಟ್ಟಿದ್ದಾರೆ. ಊಟದ ಸಮಯದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ, ಪೊಲೀಸರು ಪ್ರದೋಶ್​​ ಸಾಕ್ಷ್ಯದ ಮೇಲೆ ಪ್ರಭಾವ ಬೀರಿದ್ದಾರೆ’ ಎಂದು ದರ್ಶನ್ ಪರ ವಕೀಲರು ಆರೋಪಿಸಿದ್ದಾರೆ. ಈ ಕುರಿತು ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ.

ಆದರೆ ಇದನ್ನು ಕಟುವಾಗಿ ವಿರೋಧಿಸಿ ಪ್ರತಿವಾದ ಸಲ್ಲಿಸಿದ ಎಸ್​​ಪಿಪಿ ಪ್ರಸನ್ನ ಕುಮಾರ್ ಅವರು, ಕೋರ್ಟ್ ಸೂಚನೆಯಂತೆ ಕಾಮಾಕ್ಷಿಪಾಳ್ಯ ಪೊಲೀಸರು ಹಿಂಬಾಲಿಸಿದ್ದಾರೆ. ಪೈಲಟ್ ವಾಹನವಾಗಿಯಷ್ಟೇ ಎಸ್ಕಾರ್ಟ್ ನೀಡಿದ್ದಾರೆ. ಆರೋಪಿಗೆ ಅಭಿಮಾನಿಗಳಿದ್ದಾರೆ, ಹಾಗಾಗಿ ಸಾಕ್ಷಿಗೆ ಭದ್ರತೆ ನೀಡಬೇಕೆಂದು ಎಸ್ಕಾರ್ಟ್ ನೀಡಲಾಗಿದೆ. ನ್ಯಾಯಾಲಯವು ಅದರ ಅಗತ್ಯ ಇಲ್ಲ ಎಂದರೆ ಹಿಂಪಡೆಯಲಾಗುತ್ತದೆ. ಸಾಕ್ಷಿ ದಾಖಲು ಕ್ರಮಬದ್ಧವಾಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಸನ್ನ ಕುಮಾರ್, ‘ಎಲ್ಲವನ್ನೂ ಕ್ರಮಬದ್ದವಾಗಿಯೇ ಹೇಳಿಕೆ ನೀಡಬೇಕೆಂಬ‌ ನಿಯಮವಿಲ್ಲ. ಕೆಲವೊಮ್ಮೆ ಕೋರ್ಟ್ ನಲ್ಲಿ ಹೇಳಿಕೆ ನೀಡುವಾಗ ಸಾಕ್ಷಿ ವಿಚಲಿತರಾಗಿರಬಹುದು. ಕೋರ್ಟ್ ಕಿಕ್ಕಿರಿದು ತುಂಬಿದ್ದು ನೋಡಿ ನರ್ವಸ್ ಆಗಿರಬಹುದು. ಸಂಪೂರ್ಣ ಸತ್ಯವನ್ನು ಹೇಳುವ ಅವಕಾಶವನ್ನು ಮಾಫಿ ಸಾಕ್ಷಿಗೆ ನೀಡಲಾಗಿದೆ. ಕಟಕಟೆಯಲ್ಲಿ ಸಾಕ್ಷಿ ನೀಡುವ ಹೇಳಿಕೆಯನ್ನಷ್ಟೇ ದಾಖಲಿಸಬೇಕು. ಆರೋಪಿ ಪರ ವಕೀಲರ ಆರೋಪ ದಾಖಲಿಸಲು ಅವಕಾಶವಿಲ್ಲ. ಈ ಹಿಂದೆಯೂ ಪ್ರದೋಷ್ ವಿರುದ್ಧ ದರ್ಶನ್ ವಕೀಲರ ಆರೋಪ ಮಾಡಿದ್ದರು. ದೂರವಾಣಿ ಸೌಕರ್ಯ ದುರುಪಯೋಗಪಡಿಸಿದ್ದಾರೆಂದು ಆರೋಪಿಸಿದ್ದರು ಆದರೆ ಹೈಕೋರ್ಟ್ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು’ ಎಂದು ನೆನಪು ಮಾಡಿಸಿದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ

ಊಟದ ವಿರಾಮದಲ್ಲಿ ಸಾಕ್ಷಿಗೆ ಹೇಳಿಕೊಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಸನ್ನ ಕುಮಾರ್, ‘
‘ಭದ್ರತೆಗಾಗಿ ಮಾತ್ರವೇ ಪೊಲೀಸರು ಪ್ರದೋಷ್ ಜೊತೆಗಿರುತ್ತಾರೆ. ಸಿಆರ್ ಬಸ್ ನಲ್ಲಿ ಬಾಡಿ ಕ್ಯಾಮರಾ ಹೊಂದಿದ ಸಿಬ್ಬಂದಿ ಜೊತೆಗಿದ್ದಾರೆ. ಆಡಿಯೋ ವಿಡಿಯೋ ಎಲ್ಲವೂ ರೆಕಾರ್ಡ್ ಆಗುತ್ತಿದೆ. ದರ್ಶನ್ ಪರ ವಕೀಲರು ಬೇರೊಂದು ದಿನದ ವಿಡಿಯೋ ತೋರಿಸಿದ್ದಾರೆ. ಸೆಪ್ಟೆಂಬರ್ 2ರ ವಿಡಿಯೋವನ್ನು ದರ್ಶನ್ ವಕೀಲರು ತೋರಿಸಿದ್ದಾರೆ. ಅದರಲ್ಲಿ ಕಾಮಾಕ್ಷಿಪಾಳ್ಯ ಎಸ್ಐ ವಿನಾಯಕ್ ಇದ್ದಾರೆ. ಅದು ಸಾಕ್ಷ್ಯ ನೀಡುವ ದಿನಾಂಕದ್ದಲ್ಲ, ಅಂದು ಅವರು ರಜೆಯಲ್ಲಿದ್ದರು’ ಎಂದ ಪ್ರಸನ್ನ ಅವರು ಪಿಎಸ್​​ಐ ವಿನಾಐಕ್ ರಜೆ ಕೋರಿದ ಪತ್ರವನ್ನೂ ಕೋರ್ಟ್ ಗೆ ಸಲ್ಲಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us