Kotigobba 3: ದರ್ಶನ್​ಗೆ ಹೀರೋಯಿನ್​ ಆಗಿದ್ದ ನಟಿಗೆ ಈಗ ಸುದೀಪ್ ತಾಯಿ ಪಾತ್ರ?

Abhirami: 2003ರ ಆರಂಭದಲ್ಲಿ ಲಾಲಿ ಹಾಡು ಸಿನಿಮಾ ತೆರೆಗೆ ಬಂದಿತ್ತು. ಎಚ್​.ವಾಸು ನಿರ್ದೇಶನದ ಈ ಸಿನಿಮಾದಲ್ಲಿ ದರ್ಶನ್​, ಅಭಿರಾಮಿ ಹಾಗೂ ಉಮಾಶ್ರೀ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Kotigobba 3: ದರ್ಶನ್​ಗೆ ಹೀರೋಯಿನ್​ ಆಗಿದ್ದ ನಟಿಗೆ ಈಗ ಸುದೀಪ್ ತಾಯಿ ಪಾತ್ರ?
ದರ್ಶನ್​-ಅಭಿರಾಮಿ-ಸುದೀಪ್​
Edited By: ಆಯೇಷಾ ಬಾನು

Updated on: May 16, 2021 | 6:50 AM

ದರ್ಶನ್​ ನಟನೆಯ ‘ಲಾಲಿ ಹಾಡು’ ಚಿತ್ರದ ಮೂಲಕ ಅಭಿರಾಮಿ ಸ್ಯಾಂಡಲ್​ವುಡ್​​ಗೆ ಕಾಲಿಟ್ಟರು. ನಂತರ ಕೆಲವು ಕನ್ನಡದ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇತ್ತೀಚೆಗೆ ಅವರು ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಕಿಚ್ಚ ಸುದೀಪ್​ ತಾಯಿ ಆಗಿ ಅಭಿರಾಮಿ ಕಾಣಿಸಿಕೊಳ್ಳುತ್ತಿದ್ದರೆ. ಒಂದು ಕಾಲದಲ್ಲಿ ದರ್ಶನ್​ ಹೀರೋಯಿನ್​ ಆಗಿದ್ದ ಅವರು, ಈಗ ಕಿಚ್ಚನ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2003ರ ಆರಂಭದಲ್ಲಿ ಲಾಲಿ ಹಾಡು ಸಿನಿಮಾ ತೆರೆಗೆ ಬಂದಿತ್ತು. ಎಚ್​.ವಾಸು ನಿರ್ದೇಶನದ ಈ ಸಿನಿಮಾದಲ್ಲಿ ದರ್ಶನ್​, ಅಭಿರಾಮಿ ಹಾಗೂ ಉಮಾಶ್ರೀ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಉಪೇಂದ್ರ ನಟನೆಯ ರಕ್ತಕಣ್ಣೀರು, ಶ್ರೀರಾಮ್​, ಚೌಕ, ದಶರಥ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಕೋಟಿಗೊಬ್ಬ ಚಿತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

ಕೋಟಿಗೊಬ್ಬ 3 ಸಿನಿಮಾ ಈಗಾಗಲೇ ಶೂಟಿಂಗ್​ ಪೂರ್ಣಗೊಳಿಸಿಕೊಂಡಿದೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಆರಂಭಗೊಂಡಿವೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮೇ ಅಥವಾ ಜೂನ್​ ತಿಂಗಳಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಅದರಲ್ಲಿ ಸುದೀಪ್​ ತಾಯಿ ಆಗಿ ಅಭಿರಾಮಿ ಕಾಣಿಸಿಕೊಂಡಿದ್ದಾರೆ.

ಮಲಯಾಳಂ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ಅಭಿರಾಮಿ. ನಂತರ ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ ಅವರು ಪೋಷಕರು ಪಾತ್ರದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೋಟಿಗೊಬ್ಬ 3 ಚಿತ್ರಕ್ಕೆ ಶಿವ ಕಾರ್ತಿಕ್​ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್​ ಜತೆಗೆ ಮಡೋನಾ ಸೆಬಾಸ್ಟಿಯನ್​, ಶ್ರದ್ಧಾ ದಾಸ್​ ನಟಿಸಿದ್ದಾರೆ. ರವಿಶಂಕರ್​, ಅಫ್ತಾಬ್​ ಶಿವದಾಸಿನಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ತೂಗುದೀಪ ಶ್ರೀನಿವಾಸ್​, ದರ್ಶನ್​, ದಿನಕರ್​ ಬಗ್ಗೆ ಮೀನಾ ತೂಗುದೀಪ ಅಪರೂಪದ ಮಾತುಗಳು

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us