ಮಹಿಳೆಗೆ ದರ್ಶನ್ ಮನೆಯ ನಾಯಿ ಕಡಿತ, ದರ್ಶನ್ ವಿರುದ್ಧ ದೂರು

Darshan: ನಟ ದರ್ಶನ್ ಮನೆಯ ನಾಯಿಗಳು ಮಹಿಳೆಯ ಮೇಲೆ ದಾಳಿ ನಡೆಸಿ ಕಡಿದು ಗಾಯಗೊಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯು ದರ್ಶನ್ ಸೇರಿದಂತೆ ಕೆಲವರ ವಿರುದ್ಧ ದೂರು ನೀಡಿದ್ದಾರೆ.

ಮಹಿಳೆಗೆ ದರ್ಶನ್ ಮನೆಯ ನಾಯಿ ಕಡಿತ, ದರ್ಶನ್ ವಿರುದ್ಧ ದೂರು

Updated on: Oct 31, 2023 | 8:01 PM

ನಟ ತೂಗುದೀಪ ದರ್ಶನ್ (Darshan) ಅವರ ಮನೆಯ ನಾಯಿ, ಮಹಿಳೆಯೊಬ್ಬರಿಗೆ ಕಡಿದು ಗಾಯಗೊಳಿಸಿದೆ. ಈ ಸಂಬಂಧ ಮಹಿಳೆಯು ದರ್ಶನ್ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದರ್ಶನ್​ರ ಆರ್​ಆರ್ ನಗರದ ನಿವಾಸದ ಬಳಿ ಘಟನೆ ನಡೆದಿದ್ದು, ಘಟನೆ ನಡೆಯುವ ಮುನ್ನ ದರ್ಶನ್​ರ ಮನೆ ಸಿಬ್ಬಂದಿ ಮಹಿಳೆಯೊಟ್ಟಿಗೆ ವಾಗ್ವಾದ ಮಾಡಿದ್ದರು ಎನ್ನಲಾಗುತ್ತಿದೆ.

ಆರ್​ ಆರ್​ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಮಹಿಳೆ ಆಗಮಿಸಿದ್ದರು. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ತಮ್ಮ ಕಾರನ್ನು ಮಹಿಳೆ ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವಂತೆ. ದರ್ಶನ್​ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಮಹಿಳೆ ಕೇಳಿದ್ದಾರೆ. ಆಗ ವಾಗ್ವಾದ ನಡೆಸಿರುವ ದರ್ಶನ್ ಮನೆಯ ಸಿಬ್ಬಂದಿ, ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದಿದ್ದಾರೆ. ಮಹಿಳೆ ಹಾಗೂ ದರ್ಶನ್​ರ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಬಳಿಕ ನಾಯಿಗಳು ಮಹಿಳೆಯ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಡಿದು ಗಾಯಗೊಳಿಸಿವೆ. ಗಾಯಗೊಂಡ ಮಹಿಳೆ ಆರ್​ಆರ್ ನಗರ ಪೊಲೀಸ್ ಠಾಣೆಗೆ ಹೋಗಿ ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ದರ್ಶನ್​ರನ್ನು ಎರಡನೇ ಆರೋಪಿಯನ್ನಾಗಿಸಿ ದೂರನ್ನು ನೀಡಲಾಗಿದೆ.

ಇದನ್ನೂ ಓದಿ:ದರ್ಶನ್ ಬಳಿ ಇತ್ತು 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್? ಇದ್ಯಾವುದೂ ಅಸಲಿ ಅಲ್ಲ?

ಪ್ರಾಣಿ ಪ್ರಿಯ ದರ್ಶನ್ ಫಾರಂ ಹೌಸ್​ನಲ್ಲಿ ಹಸು, ಎತ್ತು, ಕುದುರೆ ಸೇರಿ ಇನ್ನೂ ಕೆಲವು ಪ್ರಾಣಿ ಹಾಗೂ ಕೆಲವು ಪಕ್ಷಿಗಳನ್ನು ಸಹ ಸಾಕಿದ್ದಾರೆ. ದರ್ಶನ್ ತಾವು ವಾಸಿಸುವ ಆರ್​ಆರ್ ನಗರ ನಿವಾಸದಲ್ಲಿ ಕೆಲವು ನಾಯಿಗಳನ್ನು ಸಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us