AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಬಳಿ ಇತ್ತು 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್? ಇದ್ಯಾವುದೂ ಅಸಲಿ ಅಲ್ಲ?

ಮೂಲಗಳ ಪ್ರಕಾರ ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಒಂದಲ್ಲ ಎರಡಲ್ಲ 8ರಿಂದ 10 ಹುಲಿ ಉಗುರಿನ ಮಾದರಿಯ ಪೆಂಡೆಂಟ್​​ಗಳು. ಆದರೆ, ಯಾವುದೂ ಅಸಲಿ ಅಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.  

ದರ್ಶನ್ ಬಳಿ ಇತ್ತು 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್? ಇದ್ಯಾವುದೂ ಅಸಲಿ ಅಲ್ಲ?
ದರ್ಶನ್
Malatesh Jaggin
| Edited By: |

Updated on:Oct 26, 2023 | 12:33 PM

Share

ಸದ್ಯ ಕರ್ನಾಟಕದಲ್ಲಿ ಹುಲಿ ಉಗುರಿನ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ವರ್ತೂರು ಸಂತೋಷ್ (Varthur Santosh) ಅವರು ಬಿಗ್ ಬಾಸ್ ಮನೆಯಲ್ಲಿ ಅರೆಸ್ಟ್ ಆದ ಬಳಿಕ ಅನೇಕ ಸೆಲೆಬ್ರಿಟಿಗಳು ಹುಲಿ ಉಗುರಿನ ಲಾಕೆಟ್ ಹೊಂದಿದ್ದರು ಎನ್ನುವ ಫೋಟೋ ವೈರಲ್ ಆಗುತ್ತಿದೆ. ನಟ ದರ್ಶನ್ ಕತ್ತಿನಲ್ಲೂ ಹುಲಿ ಉಗುರಿನ ಲಾಕೆಟ್ ಇತ್ತು ಎನ್ನಲಾಗಿದೆ. ಈ ಸಂಬಂಧ ಅರಣ್ಯಾಧಿಕಾರಿಗಳು ಅಕ್ಟೋಬರ್ 26ರಂದು ದರ್ಶನ್ ಮನೆಗೆ ತೆರಳಿ ಶೋಧಕಾರ್ಯ ನಡೆಸಿದ್ದರು. ಈ ವೇಳೆ ಸಿಕ್ಕಿದ್ದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಮನೆಯ ಸರ್ಚ್​ಗೆ ಬಂದ ವೇಳೆ ಅಧಿಕಾರಿಗಳಿಗೆ ದರ್ಶನ್ ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಬಂದ ತಕ್ಷಣ ಮನೆ ಬಾಗಿಲು ಓಪನ್ ಮಾಡಿ ಅವರನ್ನು ಸ್ವಾಗತಿಸಿದ್ದಾರೆ. ಮೂಲಗಳ ಪ್ರಕಾರ ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಒಂದಲ್ಲ ಎರಡಲ್ಲ 8ರಿಂದ 10 ಹುಲಿ ಉಗುರಿನ ಮಾದರಿಯ ಪೆಂಡೆಂಟ್​​ಗಳು. ಆದರೆ, ಯಾವುದೂ ಅಸಲಿ ಅಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.

ದರ್ಶನ್ ಶೂಟಿಂಗ್​ನಲ್ಲಿ ಸದಾ ಬ್ಯುಸಿ ಇರುತ್ತಾರೆ. ಅವರು ಕೆಲವೊಮ್ಮೆ ಶೂಟಿಂಗ್​ಗಾಗಿ ಹುಲಿ ಉಗುರಿನ ಮಾದರಿಯ ಲಾಕೆಟ್ ಬಳಸಿದ್ದಾರೆ. ಅವರ ಬಳಿ ಇರುವ ಎಲ್ಲಾ ಲಾಕೆಟ್​ಗಳು ಹುಲಿ ಉಗುರಿನ ಮಾದರಿಯ ಲಾಕೆಟ್​ಗಳು ಅಷ್ಟೇ ಎನ್ನಲಾಗಿದೆ.  ತಮ್ಮ ಬಳಿ ಇದ್ದ 8 ರಿಂದ 10 ಪೆಂಡೆಂಟ್​ಗಳನ್ನ ಅವರು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಪರಿಶೀಲಿಸಿದ ಬಳಿಕವೇ ಇದು ಅಸಲಿಯೋ ಅಥವಾ ನಕಲಿಯೋ ಅನ್ನೋದು ಗೊತ್ತಾಗಲಿದೆ.

ಹಸುವಿನ ಕೊಂಬಿನಿಂದ ಪೆಂಡೆಂಟ್​ಗಳನ್ನು ಮಾಡಲಾಗುತ್ತದೆ. ಅದನ್ನು ಹುಲಿ ಉಗುರಿನ ಪೆಂಡೆಂಟ್ ರೀತಿಯಲ್ಲೇ ಇರುತ್ತದೆ. ದರ್ಶನ್ ಧರಿಸಿದ್ದು ಇದೇ ಪೆಂಡೆಂಟ್​ ಇರಬಹುದು ಎಂಬುದು ಅನೇಕರ ಊಹೆ. ಇನ್ನು, ಜಗ್ಗೇಶ್ ಮನೆಯಲ್ಲೂ ಶೋಧ ನಡೆಸಲಾಗಿದ್ದು, ಅವರು ತಾಯಿ ಕೊಟ್ಟ ಹುಲಿ ಉಗುರಿನ ಲಾಕೆಟ್​ನ ಅಧಿಕಾರಿಗಳಿಗೆ ಮರಳಿ ನೀಡಿದ್ದಾರೆ. ಸದ್ಯ ದರ್ಶನ್, ಜಗ್ಗೇಶ್, ನಿಖಿಲ್ ಹಾಗೂ ರಾಕ್​ಲೈನ್ ವೆಂಕಟೇಶ್​ಗೆ ನೋಟಿಸ್ ನೀಡಲಾಗಿದೆ. ಇವರು ನೋಟಿಸ್​​ಗೆ ಉತ್ತರಿಸಬೇಕಿದೆ.

ಇದನ್ನೂ ಓದಿ: ‘ನನ್ನನ್ನು ದರಿದ್ರ ಎಂದರು’; ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ನಮ್ರತಾ ಗೌಡ

ಸದ್ಯ ದರ್ಶನ್ ಅವರು ‘ಕಾಟೇರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಆರಾಧನಾ ರಾಮ್, ಜಗಪತಿ ಬಾಬು ಮೊದಲಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಕ್​ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:10 am, Thu, 26 October 23