AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan Thoogudeepa: ದರ್ಶನ್​​ಗೆ ಕನಿಷ್ಟ ಒಂದು ವರ್ಷ ಜೈಲು ಖಾಯಂ

ದರ್ಶನ್​ ಜಾಮೀನು ಅರ್ಜಿ ಕುರಿತು ಸುಪ್ರೀಂ ಕೋರ್ಟ್​ ತೀರ್ಪು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲಿದ್ದು, ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್ ಪರ ವಕೀಲರು ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಇಂದು (ಮೇ 15) ದರ್ಶನ್ ಜಾಮೀನು ಅರ್ಜಿಯನ್ನು ಪುರಸ್ಕರಿಸಿಲ್ಲ. ಬದಲಿಗೆ ಒಂದು ವರ್ಷದ ಕಾಲಾವಕಾಶವನ್ನು ನೀಡಿದೆ.

Darshan Thoogudeepa: ದರ್ಶನ್​​ಗೆ ಕನಿಷ್ಟ ಒಂದು ವರ್ಷ ಜೈಲು ಖಾಯಂ
Darshan Supreme
ಮಂಜುನಾಥ ಸಿ.
|

Updated on:May 15, 2026 | 12:15 PM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರು ಸುಪ್ರೀಂಕೋರ್ಟ್​​ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ, ಜೈಲಿನಲ್ಲಿ ಸೌಲಭ್ಯಗಳ ಕೊರತೆ, ಕುಟುಂಬವನ್ನು ಭೇಟಿ ಮಾಡಲು ಜೈಲಧಿಕಾರಿಗಳಿಂದ ಅವಕಾಶ ನಿರಾಕರಣೆ, ಆರೋಗ್ಯ ಸಮಸ್ಯೆ, ಸಹ ಕೈದಿಗಳಿಂದ ಕಿರುಕುಳ, ಬೆದರಿಕೆ, ಇನ್ನೂ ಕ್ವಾರಂಟೈನ್ ಸೆಲ್​​ನಲಿ ಇಟ್ಟಿರುವುದು ಹೀಗೆ ಹಲವು ಕಾರಣಗಳನ್ನು ನೀಡಿ ದರ್ಶನ್ ಅವರು ಜಾಮೀನಿಗಾಗಿ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್ ಪರ ವಕೀಲರು ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಆಲಿಸಿದ ಸುಪ್ರೀಂ ಕೋರ್ಟ್ ದರ್ಶನ್​​ರ ಜಾಮೀನು ಅರ್ಜಿಯನ್ನು ಪುರಸ್ಕರಿಸಿಲ್ಲ. ಬದಲಿಗೆ ಒಂದು ವರ್ಷದ ಕಾಲಾವಕಾಶವನ್ನು ನೀಡಿದೆ.

ಜಾಮೀನು ಅರ್ಜಿಯ ವಿಚಾರಣೆ ಆಲಿಸಿದ ಸುಪ್ರೀಂಕೋರ್ಟ್, ಪ್ರಕರಣದ ವಿಚಾರಣೆಗೆ ಒಂದು ವರ್ಷದ ಕಾಲಾವಧಿ ನೀಡಿದ್ದು, ಅಷ್ಟರಲ್ಲಿ ಕನಿಷ್ಟ 60 ಸಾಕ್ಷ್ಯಗಳ ವಿಚಾರಣೆ ಮುಗಿಯದಿದ್ದಲ್ಲಿ, ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿದೆ. ಇದರಿಂದಾಗಿ, ದರ್ಶನ್​​ಗೆ ಕನಿಷ್ಟ ಒಂದು ವರ್ಷ ಜೈಲು ವಾಸ ಖಾಯಂ ಆದಂತಾಗಿದೆ. ಒಂದು ವರ್ಷದ ಬಳಿಕವಷ್ಟೆ ಅವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಗಲೂ ಸಹ ದರ್ಶನ್​ಗೆ ಜಾಮೀನು ಸಿಗುವ ಖಾತ್ರಿ ಇಲ್ಲ, ಬದಲಿಗೆ ಆಗಿನ ಪರಿಸ್ಥಿತಿಗಳ ಆಧಾರದ ಮೇಲಷ್ಟೆ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರ ಆಗಲಿದೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಸುಳ್ಳು ಸಾಕ್ಷ್ಯ ಆರೋಪಕ್ಕೆ ಎಸ್​​ಪಿಪಿ ಪ್ರಸನ್ನ ತಿರುಗೇಟು

ಸುಪ್ರೀಂ ಕೋರ್ಟ್​​ನಲ್ಲಿ ಇಂದು ನಟ ದರ್ಶನ್ ಪರ ವಾದ ಮಂಡಿಸಿದ ಖ್ಯಾತ ವಕೀಲ ಮುಕುಲ್ ರೊಹ್ಟಗಿ, ‘272ಕ್ಕೂ ಹೆಚ್ಚು ಸಾಕ್ಷಿಗಳು ಪ್ರಕರಣದಲ್ಲಿದ್ದು, ಈ ವರೆಗೆ 10 ಸಾಕ್ಷ್ಯಗಳನ್ನು ಮಾತ್ರವೇ ವಿಚಾರಣೆ ಮಾಡಲಾಗಿದೆ. ಮುಖ್ಯ ಸಾಕ್ಷಿಗಳ ವಿಚಾರಣೆಯನ್ನಾದರೂ ಮುಗಿಸುವಂತೆ ನಾವು ಕೇಳಿದ್ದೆವು ಆದರೆ ಅದು ಸಹ ಸಾಧ್ಯವಾಗಿಲ್ಲ’ ಎಂದರು. ಆದರೆ ರೊಹ್ಟಗಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್​​ಪಿಪಿ ಸಿದ್ಧಾರ್ಥ್ ಲೂತ್ರಾ, ‘ನೀವು (ಆರೋಪಿಗಳು) ಸಾಕ್ಷ್ಯಗಳಿಗೆ ಏನೇನು ಮಾಡಿದ್ದೀರೆಂದು ಹೇಳಿದರೆ ನಿಮ್ಮ ಜಾಮೀನು ಅರ್ಜಿಯೇ ರದ್ದಾಗಲಿದೆ’ ಎಂದರು. ಬಳಿಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲರು, ‘ಮುಂದಿನ ಒಂದು ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ಮುಗಿಸುವುದಾಗಿ ಮಾಹಿತಿ ನೀಡಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿಗಳು, ‘ಒಂದು ವರ್ಷದ ಒಳಗೆ 60 ಸಾಕ್ಷ್ಯಗಳ ವಿಚಾರಣೆ ಮುಗಿಸಿ, ಆ ಬಳಿಕ ವಿಚಾರಣಾ ನ್ಯಾಯಾಲಯದಲ್ಲಿಯೇ ಆರೋಪಿ (ದರ್ಶನ್) ಜಾಮೀನಿಗೆ ಅರ್ಜಿ ಸಲ್ಲಿಸಬಹುದು’ ಎಂದರು. ಜೊತೆಗೆ ‘ಆರೋಪಿಗೆ ಇತರೆ ಕೈದಿಗಳಿಗೆ ನೀಡಿರುವ ಸವಲತ್ತುಗಳನ್ನೇ ನೀಡಬೇಕು ಎಂದು ಸೂಚಿಸಿದರು ಕ್ವಾರಂಟೈನ್ ಸೆಲ್ ಬಗ್ಗೆ ಯಾವುದೇ ಸೂಚನೆ ಅಥವಾ ಆದೇಶವನ್ನು ನೀಡುವುದಿಲ್ಲವೆಂದು ನ್ಯಾಯಮೂರ್ತಿಗಳು ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Fri, 15 May 26

Follow Us
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA