ಹದಿಹರೆಯದ ಮೋಜು ಮಸ್ತಿಯ ‘ಪದವಿಪೂರ್ವ’ ನಟಿಯೇ.. ಈ ‘ಫ್ರೆಶ್​ ಫೇಸ್’ ಬ್ಯೂಟಿ!

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಹಾಗೂ ಯೋಗರಾಜ್ ಭಟ್, ರವಿ ಶಾಮನೂರ್ ಜಂಟಿಯಾಗಿ ನಿರ್ಮಿಸುತ್ತಿರುವ ‘ಪದವಿಪೂರ್ವ’ ಚಿತ್ರಕ್ಕೆ ನಾಯಕಿಯಾಗಿ ‘ಅಂಜಲಿ ಅನೀಶ್’ ಆಯ್ಕೆಯಾಗಿದ್ದಾರೆ. ಅಂಜಲಿ ‘ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020′ ಸ್ಪರ್ಧೆಯಲ್ಲಿ ಗೆದ್ದು ಬೀಗಿರುವ ಜೊತೆಗೆ, ‘ನ್ಯಾಷನಲ್ ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020’ರ ರನ್ನರ್ ಅಪ್ ಕಿರೀಟವನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ, ಅಂಜಿಲಿ ಶಿಕಾಗೋದ ಸೆಕೆಂಡ್ ಸಿಟಿ ಌಕ್ಟಿಂಗ್ ಸ್ಕೂಲ್ ಹಾಗೂ ಅನುಪಮ್ ಖೇರ್ ಌಕ್ಟಿಂಗ್ ಸ್ಕೂಲ್‌ನಲ್ಲಿ […]

ಹದಿಹರೆಯದ ಮೋಜು ಮಸ್ತಿಯ ‘ಪದವಿಪೂರ್ವ’ ನಟಿಯೇ.. ಈ ‘ಫ್ರೆಶ್​ ಫೇಸ್’ ಬ್ಯೂಟಿ!
Edited By: ಸಾಧು ಶ್ರೀನಾಥ್​

Updated on: Oct 05, 2020 | 3:41 PM

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಹಾಗೂ ಯೋಗರಾಜ್ ಭಟ್, ರವಿ ಶಾಮನೂರ್ ಜಂಟಿಯಾಗಿ ನಿರ್ಮಿಸುತ್ತಿರುವ ‘ಪದವಿಪೂರ್ವ’ ಚಿತ್ರಕ್ಕೆ ನಾಯಕಿಯಾಗಿ ‘ಅಂಜಲಿ ಅನೀಶ್’ ಆಯ್ಕೆಯಾಗಿದ್ದಾರೆ. ಅಂಜಲಿ ‘ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020′ ಸ್ಪರ್ಧೆಯಲ್ಲಿ ಗೆದ್ದು ಬೀಗಿರುವ ಜೊತೆಗೆ, ‘ನ್ಯಾಷನಲ್ ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020’ರ ರನ್ನರ್ ಅಪ್ ಕಿರೀಟವನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ.

ಇದೆಲ್ಲದರ ಜೊತೆಗೆ, ಅಂಜಿಲಿ ಶಿಕಾಗೋದ ಸೆಕೆಂಡ್ ಸಿಟಿ ಌಕ್ಟಿಂಗ್ ಸ್ಕೂಲ್ ಹಾಗೂ ಅನುಪಮ್ ಖೇರ್ ಌಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಕೆಲ ಬಾಲಿವುಡ್ ಮತ್ತು ಕನ್ನಡ ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿಯೂ ಸಹ ಕೆಲಸ ಮಾಡಿದ್ದಾರೆ.

ಇನ್ನು, ಸಿನಿಮಾದ ನಾಯಕ ಪೃಥ್ವಿ ಶಾಮನೂರ್​ಗೂ ಕೂಡ ಇದು ಚೊಚ್ಚಲ ಸಿನಿಮಾ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಹಾಗೂ ಸಂತೋಷ್ ರೈ ಪತಾಜೆರ ಕ್ಯಾಮರಾ ವರ್ಕ್​ ಇರಲಿದೆ. ಹದಿಹರೆಯದ ಮೋಜು, ಮಸ್ತಿ, ಮೋಹ ಮತ್ತು ಸ್ನೇಹ ಕುರಿತಾದ ಕಥೆ ಇದಾಗಿದ್ದು ಚಿತ್ರವನ್ನು ಮಲೆನಾಡಿನ ಅತ್ಯಂತ ಸುಂದರ ತಾಣಗಳಲ್ಲಿ ಚಿತ್ರೀಕರಿಸುವ ಯೋಜನೆಯಿದೆ. ಉಳಿದಂತೆ ಬೇರೆ ಪಾತ್ರಗಳಿಗೆ ಕಲಾವಿದರನ್ನು ಆಡಿಷನ್ ಮೂಲಕ ಆಯ್ಕೆ ಮಾಡಲಾಗಿದ್ದು, ಮತ್ತಷ್ಪು ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಹಾದಿಯಲ್ಲಿ ತಂಡ ಕೆಲಸ ಮಾಡುತ್ತಿದೆ.

Loading...
Unable to load recommendations.
Follow Us