ದರ್ಶನ್​​ ಅವರ ಫಾಲೋ ಮಾಡ್ತಿಲ್ಲವೇ ಧನ್ವೀರ್? ನಟ ಹೇಳಿದ್ದೇನು?

ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಜಗಳ ತಾರಕಕ್ಕೇರಿದೆ. ಪರಸ್ಪರರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲನ್ನೂ ಸಹ ಏರಲಾಗಿದೆ. ಈ ನಡುವೆ ಧನ್ವೀರ್, ದರ್ಶನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಬಗ್ಗೆ ಖುದ್ದು ಧನ್ವೀರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ದರ್ಶನ್​​ ಅವರ ಫಾಲೋ ಮಾಡ್ತಿಲ್ಲವೇ ಧನ್ವೀರ್? ನಟ ಹೇಳಿದ್ದೇನು?
Dhanveer Gowda

Updated on: Oct 27, 2026 | 2:40 PM

ಮುಖ್ಯಾಂಶಗಳು

  • ದರ್ಶನ್ ಅನ್ನು ಅನ್​ಫಾಲೋ ಮಾಡಿದರೇ ಧನ್ವೀರ್
  • ಇನ್​ಸ್ಟಾಗ್ರಾಂ ಅನ್​ಫಾಲೋ ಮಾಡಿರುವ ಧನ್ವೀರ್ ಗೌಡ
  • ಸ್ಪಷ್ಟನೆ ನೀಡಿರುವ ನಟ ಧನ್ವೀರ್ ಗೌಡ

ನಟ ದರ್ಶನ್ ಜೈಲಿನಲ್ಲಿದ್ದಾರೆ. ಆದರೆ ಹೊರಗೆ ಅವರ ಆಪ್ತ ಧನ್ವೀರ್ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವೆ ಕಿತ್ತಾಟ ನಡೆಯುತ್ತಿದೆ. ಇಬ್ಬರ ನಡುವಿನ ಜಗಳ ತಾರಕ್ಕೇರಿದ್ದು ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಪರವಾಗಿರುವ ಕೆಲವರು ಠಾಣೆಯಲ್ಲಿ ದೂರುಗಳನ್ನು ದಾಖಲಿಸಿದ್ದಾರೆ. ಇನ್ನು ಧನ್ವೀರ್ ಅವರ ತಂದೆಯೂ ಸಹ ವಿಜಯಲಕ್ಷ್ಮಿ ವಿರುದ್ಧ ಬೆದರಿಕೆ ಆರೋಪವನ್ನು ಮಾಡಿದ್ದಾರೆ. ಇವುಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಧನ್ವೀರ್ ವಿರುದ್ಧ ಪೋಸ್ಟ್​​ಗಳನ್ನು ದರ್ಶನ್ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಧನ್ವೀರ್, ದರ್ಶನ್ ಅನ್ನು ಇನ್​​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿಲ್ಲ, ಅಥವಾ ಅನ್​​ಫಾಲೋ ಮಾಡಿದ್ದಾರೆ ಎಂಬ ಬಗ್ಗೆ ಕೆಲ ದರ್ಶನ್ ಅಭಿಮಾನಿಗಳು ಟೀಕೆ ಮಾಡಿದ್ದಾರೆ.

ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ನಟ ಧನ್ವೀರ್, ‘ತಾವು ದರ್ಶನ್​​ ಅವರನ್ನು ಇನ್​​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದುದಾಗಿ ಹೇಳಿದ್ದಾರೆ. ಆದರೆ ದರ್ಶನ್ ಖಾತೆಯನ್ನು ನಿರ್ವಹಣೆ ಮಾಡುತ್ತಿರುವವರು ನನ್ನನ್ನು ಬ್ಲಾಕ್ ಮಾಡಿದ್ದು, ಇದೇ ಕಾರಣಕ್ಕೆ ನಾನು ಫಾಲೋ ಮಾಡುತ್ತಿರುವವರ ಪಟ್ಟಿಯಲ್ಲಿ ದರ್ಶನ್ ಹೆಸರು ಕಾಣುತ್ತಿಲ್ಲ’ ಎಂದಿದ್ದಾರೆ. ಧನ್ವೀರ್ ಅವರು ಇನ್​​ಸ್ಟಾಗ್ರಾಂನಲ್ಲಿ ಬಹಳ ಕಡಿಮೆ ಸಂಖ್ಯೆಯ ಜನರನ್ನು ಫಾಲೋ ಮಾಡುತ್ತಿದ್ದಾರೆ. ಕೇವಲ ಒಂಬತ್ತು ಜನರನ್ನು ಅವರು ಫಾಲೋ ಮಾಡುತ್ತಿದ್ದು ಅವರಲ್ಲಿ ದರ್ಶನ್ ಅವರು ಇಲ್ಲ.

ಇದನ್ನೂ ಓದಿ:ಧನ್ವೀರ್, ದರ್ಶನ್, ವಿಜಯಲಕ್ಷ್ಮಿ ಹಣಕಾಸಿನ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು

‘ಸೋಷಿಯಲ್ ಮೀಡಿಯಾನಲ್ಲಿ ದರ್ಶನ್ ಸರ್ ಅಕೌಂಟ್​​ನಿಂದ ನನ್ನನ್ನು ಬ್ಲಾಕ್ ಮಾಡಬಹುದು, ನಾನೇ ಅನ್​ಫಾಲೋ ಮಾಡಿದ್ದೀನಿ ಎಂದು ಬಿಂಬಿಸಬಹುದು. ಜನರ ಮುಂದೆ ನನ್ನನ್ನು ಕೆಟ್ಟವನಾಗಿ ಬಿಂಬಿಸಬಹುದು. ನನ್ನ ವಿರುದ್ಧ ಎಷ್ಟಾದರೂ ನೆಗೆಟಿವ್ ಪಿಆರ್ ಮಾಡಬಹುದು. ಆದರೆ ನನ್ನ ಹೃದಯದ ಬಾಗಿಲಲ್ಲಿ ದರ್ಶನ್ ಸರ್ ಅವರಿಗಿರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ. ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ, ನಿಮ್ಮ ವಿರೋಧದಿಂದ ಸಾಯುವುದೂ ಇಲ್ಲ. ಜಗತ್ತು ಏನೇ ಹೇಳಲಿ, ಕಾಲವೇ ಬದಲಾಗಲಿ, ನನ್ನ ಅಭಿಮಾನ ಒಂದೇ, ‘ದರ್ಶನ್ ಸರ್’’ ಎಂದು ಧನ್ವೀರ್ ಪೋಸ್ಟ್​​ ಹಂಚಿಕೊಂಡಿದ್ದಾರೆ. ಈ ಸಂದೇಶದ ಜೊತೆಗೆ ತಮ್ಮ ಹಾಗೂ ದರ್ಶನ್ ಅವರ ಚಿತ್ರವನ್ನೂ ಸಹ ಹಂಚಿಕೊಂಡಿದ್ದಾರೆ.

ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವೆ ಹಣಕಾಸಿಗೆ ಸಂಬಂಧಿಸಿದಂತೆ ಮುನಿಸು ಉಂಟಾಗಿದೆ ಎನ್ನಲಾಗುತ್ತಿದೆ. ಈಗ ಹರಿದಾಡುತ್ತಿರುವ ಆಡಿಯೋ ಕ್ಲಿಪ್​ಗಳು, ಇತರೆ ಕೆಲವು ಮಾಹಿತಿಗಳ ಪ್ರಕಾರ, ಧನ್ವೀರ್, ವಿಜಯಲಕ್ಷ್ಮಿ ಅವರಿಂದ ಸುಮಾರು 10 ಕೋಟಿ ಹಣ ಪಡೆದಿದ್ದು, ಅದನ್ನು ಮರಳಿಸದ ಕಾರಣ ಈಗ ಈ ವಿವಾದ ಉಂಟಾಗಿದೆ ಎನ್ನಲಾಗುತ್ತಿದೆ. ಧನ್ವೀರ್ ವಿರುದ್ಧ ಈಗಾಗಲೇ ದರ್ಶನ್ ಪಿಎ ನಾಗರಾಜು, ಆಪ್ತ ಬೋಜರಾಜು ಹಾಗೂ ಇನ್ನೂ ಕೆಲವರು ವಂಚನೆ, ಬೆದರಿಕೆ ದೂರುಗಳನ್ನು ದಾಖಲು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Tue, 27 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us