ಹುಟ್ಟಿದ ಊರಿನ ಮೇಲೆ ರಾಜ್​​ಕುಮಾರ್​​ಗೆ ಇತ್ತು ಅಪಾರ ಮಮತೆ; ಕಾರಣ ಏನು?

ಡಾ. ರಾಜ್‌ಕುಮಾರ್ ಅವರ 20ನೇ ಪುಣ್ಯಸ್ಮರಣೆಯನ್ನು ಏಪ್ರಿಲ್ 12ರಂದು ಆಚರಿಸಲಾಗುತ್ತಿದೆ. ಗಾಜನೂರಿನಲ್ಲಿ ಜನಿಸಿದ ಅವರು ತಮ್ಮ ಕೃಷಿ ಹಿನ್ನೆಲೆ ಮತ್ತು ಹಸಿರಿನ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದರು. 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಜ್‌ಕುಮಾರ್, ತಮ್ಮ ತಂದೆ-ತಾಯಿಯ ತ್ಯಾಗ ಮತ್ತು ಪ್ರೀತಿಯನ್ನು ಸದಾ ಸ್ಮರಿಸುತ್ತಿದ್ದರು.

ಹುಟ್ಟಿದ ಊರಿನ ಮೇಲೆ ರಾಜ್​​ಕುಮಾರ್​​ಗೆ ಇತ್ತು ಅಪಾರ ಮಮತೆ; ಕಾರಣ ಏನು?
ರಾಜ್​ಕುಮಾರ್
Edited By:

Updated on: Apr 11, 2026 | 7:39 AM

ರಾಜ್​​ಕುಮಾರ್ ಅವರ ಪುಣ್ಯಸ್ಮರಣೆ ಏಪ್ರಿಲ್ 12ರಂದು ನಡೆಯಲಿದೆ. ಈ ಸಂದರ್ಭದಂದು ಅವರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ. ಅವರು ಇಲ್ಲದೆ ಬರೋಬ್ಬರಿ 20 ವರ್ಷಗಳು ಕಳೆದಿವೆ. ಏಪ್ರಿಲ್ 12ರ , 2006ರಲ್ಲಿ ರಾಜ್​​ಕುಮಾರ್ ಅವರು ಅನಾರೋಗ್ಯದಿಂದ ಮೃತಪಟ್ಟರು. ರಾಜ್​ಕುಮಾರ್ ಅವರು ಹುಟ್ಟಿದ್ದು ಗಾಜನೂರಿನಲ್ಲಿ. ಆ ಊರಿನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಇದನ್ನು ಅನೇಕ ಬಾರಿ ಅವರು ಹಂಚಿಕೊಂಡಿದ್ದರು.

ರಾಜ್​​ಕುಮಾರ್ ಕೃಷಿ ಹಿನ್ನೆಲೆ ಕುಟುಂಬದಿಂದ ಬಂದವರು. ಗಾಜನೂರಿನಲ್ಲಿ ಸಣ್ಣ ಮನೆ ಹೊಂದಿದ್ದ ಅವರು ಅಲ್ಲಿಯೇ ವಾಸಿಸಲು ಬಯಸುತ್ತಿದ್ದರು. ಹಸಿರನ್ನು ತುಂಬಾನೇ ಇಷ್ಟಪಡುತ್ತಿದ್ದರು. ಗುಡ್ಡ ಬೆಟ್ಟಗಳು ಎಂದರೆ ಅವರಿಗೆ ಇಷ್ಟ. ಗಾಜನೂರು ಈ ಎಲ್ಲಾ ಅಂಶಗಳನ್ನು ಹೊಂದಿದ್ದರಿಂದ ಅದರ ಮೇಲೆ ಅವರಿಗೆ ಅಪಾರ ಮಮತೆ ಇತ್ತು.

‘ಬಂಗಲೆ ನೋಡಿದಾಗ ಆಗದ ಆನಂದ ಈ ಪುಟ್ಟ ಮನೆ ಕಂಡಾಗ ಆಗುತ್ತದೆ’ ಎಂದು ರಾಜ್​​ಕುಮಾರ್ ಹೇಳಿದ್ದರು. ರಾಜ್​​ಕುಮಾರ್ ತಂದೆಯೂ ನಾಟಕಾಭ್ಯಸ ನಡೆಸುತ್ತಿದ್ದರು. ‘ತಂದೆ-ತಾಯಿ ಇಬ್ಬರೂ ನಮ್ಮನ್ನು ಉತ್ತಮವಾಗಿ ಸಾಕಿದ್ದಾರೆ. ಯಾರಿಗೂ ತೋರದ ಪ್ರಿತಿಯನ್ನು ನಮಗೆ ತೋರಿಸುತ್ತಿದ್ದರು. ಅವರು ಹಸಿವಿದ್ದುಕೊಂಡು ನಮಗೆ ಊಟ ಹಾಕುತ್ತಿದ್ದರು’ ಎಂದು ರಾಜ್​​ಕುಮಾರ್ ಅವರು ವಿವರಿಸಿದ್ದರು.

ಇದನ್ನೂ ಓದಿ: ರಾಜ್​​ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ

ರಾಜ್​​ಕುಮಾರ್ ಅವರು ‘ಬೇಡರಕಣ್ಣಪ್ಪ’ ಸಿನಿಮಾ 1954ರಲ್ಲಿ ರಿಲೀಸ್ ಆಯಿತು. ಮುತ್ತುರಾಜ್ ಅವರು ಈ ಸಿನಿಮಾ ಮೂಲಕ ರಾಜ್​ಕುಮಾರ್ ಆಗಿ ಬದಲಾದರು. ಆ ಬಳಿಕ ರಾಜ್​​ಕುಮಾರ್ ಅವರು ಹಿಂದಿರುಗಿ ನೋಡಲೇ ಇಲ್ಲ. ರಾಜ್​​ಕುಮಾರ್ ಅವರು ಕೊನೆಯವರೆಗೂ ಸಿನಿಮಾ ಮಾಡುತ್ತಿದ್ದರು. ಈ ಚಿತ್ರಕ್ಕೆ ಪಂಡರೀಬಾಯಿ ನಾಯಕಿ ಆಗಿದ್ದರು. ಹಲವು ಹಾಡುಗಳನ್ನು ರಾಜ್​​ಕುಮಾರ್ ಹಾಡಿದ್ದರು ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us