ಶೂಟಿಂಗ್ ವೇಳೆ No Kiss, No Hug ನವ ಷರತ್ತುಗಳು ಜಾರಿ..
ಕೊರೊನೋತ್ತರ ಕಾಲದಲ್ಲಿ ದೈನಂದಿನ ಚಟುವಟಿಕೆಗಳತ್ತ ಜಗತ್ತು ನಿಧಾನವಾಗಿ ಹೊರಳುತ್ತಿದೆ. ಈ ಮಧ್ಯೆ ಅನೇಕ ಉದ್ಯಮಗಳು ಮುಂಜಾಗರೂಕತೆ ವಹಿಸಿ, ಕೆಲಸ ಕಾರ್ಯಗಳಲ್ಲಿ ಮಗ್ನವಾಗುತ್ತಿವೆ. ಆದ್ರೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಗ್ನ ಸತ್ಯಗಳೇ ಬೇರೆ. ಹಾಗಾಗಿ ಪ್ರೊಡ್ಯುಸರ್ಸ್ ಗಿಲ್ಡ್ ಇಂಡಿಯಾ ದಿಂದ ಹೊಸ ರೂಲ್ಸ್ ಜಾರಿಗೆ ಬಂದಿದೆ. ಟಿವಿ ಧಾರಾವಾಹಿ ಮತ್ತು ಸಿನೆಮಾ ಶೂಟಿಂಗ್ ವೇಳೆ ಹೊಸದಾದ ಗೈಡ್ ಲೈನ್ಸ್ ಅಳವಡಿಸಿಕೊಳ್ಳಲು ಪ್ರೊಡ್ಯುಸರ್ಸ್ ಗಿಲ್ಡ್ ಸೂಚನೆ ನೀಡಿದೆ. ಅದರಂತೆ ಶೂಟಿಂಗ್ ವೇಳೆ ನೊ ಕಿಸ್, ನೊ ಹಗ್ ಕಡ್ಡಾಯವಾಗಿ ಪಾಲನೆಯಾಗಬೇಕು […]
ಕೊರೊನೋತ್ತರ ಕಾಲದಲ್ಲಿ ದೈನಂದಿನ ಚಟುವಟಿಕೆಗಳತ್ತ ಜಗತ್ತು ನಿಧಾನವಾಗಿ ಹೊರಳುತ್ತಿದೆ. ಈ ಮಧ್ಯೆ ಅನೇಕ ಉದ್ಯಮಗಳು ಮುಂಜಾಗರೂಕತೆ ವಹಿಸಿ, ಕೆಲಸ ಕಾರ್ಯಗಳಲ್ಲಿ ಮಗ್ನವಾಗುತ್ತಿವೆ. ಆದ್ರೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಗ್ನ ಸತ್ಯಗಳೇ ಬೇರೆ. ಹಾಗಾಗಿ ಪ್ರೊಡ್ಯುಸರ್ಸ್ ಗಿಲ್ಡ್ ಇಂಡಿಯಾ ದಿಂದ ಹೊಸ ರೂಲ್ಸ್ ಜಾರಿಗೆ ಬಂದಿದೆ.
ಟಿವಿ ಧಾರಾವಾಹಿ ಮತ್ತು ಸಿನೆಮಾ ಶೂಟಿಂಗ್ ವೇಳೆ ಹೊಸದಾದ ಗೈಡ್ ಲೈನ್ಸ್ ಅಳವಡಿಸಿಕೊಳ್ಳಲು ಪ್ರೊಡ್ಯುಸರ್ಸ್ ಗಿಲ್ಡ್ ಸೂಚನೆ ನೀಡಿದೆ. ಅದರಂತೆ ಶೂಟಿಂಗ್ ವೇಳೆ ನೊ ಕಿಸ್, ನೊ ಹಗ್ ಕಡ್ಡಾಯವಾಗಿ ಪಾಲನೆಯಾಗಬೇಕು ಎಂದು ಸ್ಪಷ್ಟಪಡಿಸಿದೆ.
ಇನ್ನು ಸೆಟ್, ಸ್ಟೂಡಿಯೋದಲ್ಲಿ ಸಿಗರೇಟ್ ಹಂಚಿಕೊಳ್ಳುವ ಹಾಗಿಲ್ಲ. ಎರಡು ಮೀಟರ್ ಅಂತರದಲ್ಲಿ ಶೂಟಿಂಗ್ ಮಾಡಬೇಕು. ಕಾರ್ಮಿಕರು ಮತ್ತು ನಟರು 60 ವರ್ಷ ಮೀರಿದವರು ಶೂಟಿಂಗ್ ನಲ್ಲಿ ಭಾಗವಹಿಸಬಾರದು. 60 ವರ್ಷ ಮೀರಿದವರು ಮೂರು ತಿಂಗಳು ಶೂಟಿಂಗ್ ಸೆಟ್ನತ್ತ ತಲೆಹಾಕದಿರಲು ಪ್ರೊಡ್ಯುಸರ್ಸ್ ಗಿಲ್ಡ್ ಸೂಚಿಸಿದೆ.
Published On - 11:21 am, Thu, 28 May 20