AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಗಾಯಣ ರಘು ಬಗ್ಗೆ ದುನಿಯಾ ಸೂರಿ ಮನದಲ್ಲಿದೆ ಬೆಟ್ಟದಷ್ಟು ಗೌರವ

ರಂಗಾಯಣ ರಘು ಬಗ್ಗೆ ದುನಿಯಾ ಸೂರಿ ಮನದಲ್ಲಿದೆ ಬೆಟ್ಟದಷ್ಟು ಗೌರವ

ಮದನ್​ ಕುಮಾರ್​
|

Updated on: Feb 09, 2024 | 3:54 PM

‘ರಘು ಸರ್​ ಅವರನ್ನು ನಾವು ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ, ಅವರಿಗೆ ತಕ್ಕಂತಹ ಪಾತ್ರವನ್ನು ಬರೆಯಲು ನಮಗೆ ಸಾಧ್ಯವಾಗಲಿಲ್ಲವೇನೋ ಅಂತ ನನಗೆ ಅನಿಸುತ್ತದೆ. ಎಷ್ಟೋ ಬಾರಿ ಯೋಗರಾಜ್​ ಸರ್​ ಜೊತೆ ನಾವು ಇದನ್ನು ಮಾತನಾಡಿದ್ದೇವೆ. ಆದರೆ ಕಲೆ ಯಾವತ್ತೂ ಬಿಡಲ್ಲ. ಈಗ ರಘು ಅವರು ಶಾಖಾಹಾರಿ ಸಿನಿಮಾದಲ್ಲಿ ನಟಿಸಿದ್ದಕ್ಕೆ ಖುಷಿ ಇದೆ’ ಎಂದು ದುನಿಯಾ ಸೂರಿ ಹೇಳಿದ್ದಾರೆ.

ನಟ ರಂಗಾಯಣ ರಘು (Rangayana Raghu) ಬಗ್ಗೆ ‘ಶಾಖಾಹಾರಿ’ ಸಿನಿಮಾದ (Shakhahari Movie) ಸುದ್ದಿಗೋಷ್ಠಿಯಲ್ಲಿ ದುನಿಯಾ ಸೂರಿ ಮಾತನಾಡಿದ್ದಾರೆ. ‘ನಾನು ಮತ್ತು ಯೋಗರಾಜ್​ ಅವರು ಸೇರಿ ಮಣಿ ಎಂಬ ಸಿನಿಮಾ ಮಾಡುವಾಗ ನಮಗೆ ಮೊದಲ ಬಾರಿಗೆ ರಘು ಅಣ್ಣ ಸಿಕ್ಕರು. ಅಲ್ಲಿಂದ ದೊಡ್ಮನೆ ಹುಡುಗ ಸಿನಿಮಾ ತನಕ ನಾನು ನಿರಂತರವಾಗಿ ರಘು ಅಣ್ಣನ ಜೊತೆಯೇ ಇದ್ದೇನೆ. ಈ ನಡುವೆ ಅವರು ಮಾಡುವಂತಹ ಪಾತ್ರ ಇಲ್ಲ ಎಂಬ ಕಾರಣಕ್ಕೆ ಬಿಟ್ಟುಕೊಟ್ಟಿದ್ದೇನೆ. ರಘು ಅಣ್ಣ ಇದ್ದರೆ ನನಗೆ ತುಂಬ ಧೈರ್ಯ. ಅವರಿಗೆ ಒಂದು ಪಾತ್ರ ಬರೆದರೆ ಶೂಟಿಂಗ್​ ಆಯ್ತು ಎಂಬ ಫೀಲ್​ ಬಂದುಬಿಡುತ್ತದೆ. ಹಾಗಾಗಿ ನಾನು ತುಂಬ ನೆಮ್ಮದಿಯಾಗಿ ನಿದ್ದೆ ಮಾಡುತ್ತೇನೆ. ಯೋಗರಾಜ್​ ಮತ್ತು ರಘು ಅವರು ನನಗೆ ಗುರು ಇದ್ದಂತೆ. ಎಲ್ಲ ವಿಷಯ ಹೇಳಿಕೊಡುತ್ತಾರೆ. ಧೈರ್ಯ ತುಂಬುತ್ತಾರೆ. ಅವರ ಪಕ್ಕ ನಿಂತರೆ ಈಗಲೂ ನಡುಗುತ್ತೇನೆ. ಅಪ್ಪು ಸರ್ ಮತ್ತು ಇವರ ಜೊತೆಯಲ್ಲಿ ನಾವು ರಸ್ತೆಯಲ್ಲಿ ಶೂಟಿಂಗ್​ ಮಾಡಿದ್ದೇವೆ. ಅದೆಲ್ಲ ಒಬ್ಬನೇ ಮಾಡಿದ್ದಲ್ಲ. ಪಾತ್ರ ಮಾಡುವವರು ಧೈರ್ಯ ಕೊಟ್ಟಾಗ ಆಗುವ ವಿಷಯಗಳೇ ಬೇರೆ. ಇವತ್ತು ನಾನು ಏನಾದರೂ ಮಾಡಿದ್ದರೆ ಅದರಲ್ಲಿ ದೊಡ್ಡ ಪಾಲು ರಘು ಅಣ್ಣ ಅವರದ್ದೂ ಇದೆ’ ಎಂದು ದುನಿಯಾ ಸೂರಿ (Duniya Suri) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ