AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾಖಾಹಾರಿ’ ರಂಗಾಯಣ ರಘುಗೆ ಹೊಸ ಬಿರುದು: ಏನದು?

Rangayana Raghu: ಕನ್ನಡದ ಜನಪ್ರಿಯ ನಟ ರಂಗಾಯಣ ರಘು ನಟಿಸಿರುವ ‘ಶಾಖಾಹಾರಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ತಂಡ ರಂಗಾಯಣ ರಘು ಅವರಿಗೆ ಹೊಸ ಬಿರುದೊಂದನ್ನು ನೀಡಿದೆ.

‘ಶಾಖಾಹಾರಿ’ ರಂಗಾಯಣ ರಘುಗೆ ಹೊಸ ಬಿರುದು: ಏನದು?
Follow us
ಮಂಜುನಾಥ ಸಿ.
|

Updated on: Feb 09, 2024 | 10:18 PM

ಕನ್ನಡ ಚಿತ್ರರಂಗದ (Sandalwood) ಅದ್ಭುತ ಕಲಾವಿದರಲ್ಲಿ ರಂಗಾಯಣ ರಘು ಒಬ್ಬರು. ಹಾಸ್ಯನಟ, ಪೋಷಕ ಪಾತ್ರ, ವಿಲನ್, ಗಂಭೀರ ಪಾತ್ರ ಯಾವುದನ್ನೇ ಕೊಟ್ಟರು ಅವರೇ ಬೆಸ್ಟ್ ಎನ್ನುವಂತೆ ನಟಿಸಬಲ್ಲ ಛಾತಿಯುಳ್ಳ ನಟರವರು. ರಂಗಾಯಣ ರಘು ನಟಿಸಿರುವ ‘ಶಾಖಾಹಾರಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಇದೀಗ ಬಿಡುಗಡೆ ಆಗಿರುವ ಸಿನಿಮಾದ ಟ್ರೈಲರ್ ನೋಡಿಯೇ ಹಲವಷ್ಟು ಮಂದಿ ರಂಗಾಯಣ ರಘು ಅವರ ನಟನೆಗೆ ಮಾರು ಹೋಗಿದ್ದಾರೆ. ವರ್ಷಗಳಿಂದಲೂ ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದರುವ ರಂಗಾಯಣ ರಘು ಅವರೀಗ ‘ಅಭಿನಯಾಸುರ’ ಎಂಬ ಬಿರುದು ನೀಡಿ ಗೌರವಿಸಲಾಗಿದೆ.

ಸಂದೀಪ್ ಸುಂಕದ್ ನಿರ್ದೇಶಿಸಿರುವ ‘ಶಾಖಾಹಾರಿ’ ಸಿನಿಮಾನಲ್ಲಿ ರಂಗಾಯಣ ರಘು ಗಂಭೀರ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಇದೇ ತಿಂಗಳ 16ರಂದು ಮಲೆನಾಡ ಸೊಗಡಿನ ಥ್ರಿಲ್ಲಿಂಗ್ ಕತೆಯುಳ್ಳ ಈ ಸಿನಿಮಾ ತೆರೆಗೆ ಬರ್ತಿದೆ. ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಅದರ ಭಾಗವಾಗಿ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸುಕ್ಕ ಸೂರಿ ವಿಶೇಷ ಅಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಸಾಥ್ ಕೊಟ್ಟರು. ಇದೇ ವೇಳೆ ರಂಗಾಯಣ ರಘು ಅವರಿಗೆ ಶಾಖಾಹಾರಿ ಸಿನಿ ಬಳಗ ಅಭಿನಯಾಸುರು ಎಂಬ ಬಿರುದು ನೀಡಿ ಗೌರವಿಸಿತು.

ರಂಗಾಯಣ ರಘು ಮಾತನಾಡಿ, ‘ನನ್ನ ಒಟ್ಟು ಜೀವನದಲ್ಲಿ ನನಗೆ ತುಂಬಾ ಅಮೂಲ್ಯ ನೆನಪು ಕೊಟ್ಟಂತಹವರು ಸೂರಿ ಹಾಗೂ ಅಶ್ವಿನಿ ಮೇಡಂ. ನಾನು ಇಂಡಸ್ಟ್ರೀ್ಗೆ ಬಂದು ಸುಮಾರು 35 ವರ್ಷವಾಯ್ತು. ನಾನು ಒಂದು ಸಿನಿಮಾಗೋಸ್ಕರ ಬಂದವನು. 94 ರಿಂದ 2001ರವೆಗೆ ನಾನು ಮಾಡಿದ ಸಿನಿಮಾಗಳ ಬಗ್ಗೆ ಊರಲೆಲ್ಲಾ ಹಾಗೇ ಮಾಡಿದ್ದೇನೆ, ಹೀಗೆ ಮಾಡಿದ್ದೇನೆ ಎಂದು ಹೇಳಿಕೊಂಡು ಬರುತ್ತಿದ್ದೆ. ರಂಗಾಯಣದ ಬಗ್ಗೆ ನಾನು ಎಷ್ಟು ನೆನಪು ಮಾಡಿಕೊಂಡರೂ ಸಾಲದು. ನನ್ನದು 350 ಸಿನಿಮಾ ಆಗಿದೆ. ಈ ರೀತಿ ಪಾತ್ರ ಮಾಡಬೇಕು ಎಂದು ನಾನು ಯೋಚಿಸಿಲ್ಲ, ಸಿಕ್ಕ ಪಾತ್ರಗಳನ್ನು ಮಾಡುತ್ತಾ ಹೋದೆ. ಅಪ್ಪು ಸರ್ ಋಣ ನನ್ನ ಮೇಲೆ ಹೆಚ್ಚಿಗೆ ಇದೆ. ಅಶ್ವಿನಿ ಮೇಡಂ ಬಂದಿರುವುದು ಬಹಳ ಖುಷಿಯಾಗಿದೆ. ನಮಗೆ ದೊಡ್ಮನೆಯಿಂದ ದೊಡ್ಡ ಆಶೀರ್ವಾದ ಸಿಕ್ಕಿದೆ. ಇಡೀ ಇಂಡಸ್ಟ್ರೀಯ ಎಲ್ಲಾ ನಟರ ಜೊತೆ ಮಾಡಿದ್ದೇನೆ. ಹೊಸಬರ ಜೊತೆಯೂ ಮಾಡಿದ್ದೇನೆ. ಹೊಸಬರು ಮತ್ತಷ್ಟು ಬರಲಿ ಎಂದರು.

ಇದನ್ನೂ ಓದಿ:ರಂಗಾಯಣ ರಘು ಬಗ್ಗೆ ದುನಿಯಾ ಸೂರಿ ಮನದಲ್ಲಿದೆ ಬೆಟ್ಟದಷ್ಟು ಗೌರವ

ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ‘ಈ ರೀತಿ ಕಥೆಯನ್ನು ಪ್ರೊಡ್ಯೂಸರ್ ಮಾಡೋದಕ್ಕೆ ಧೈರ್ಯ ಬೇಕು. ಒಂದು ಸಾಹಿತ್ಯದ ಹಿನ್ನೆಲೆ ಬೇಕು. ಅಷ್ಟೇ ಪ್ರಬಲ ಪ್ರಜ್ಞೆ ಬೇಕು. ಬ್ಯುಸಿನೆಸ್ ಮೈಂಡ್ ಸೆಟ್ ಬೇಕು. ಎಲ್ಲ ಥರಹದ ಅನುಕೂಲ ಕಲ್ಪಿಸಿಕೊಟ್ಟು, ಅಷ್ಟೇ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಯಾವುದೇ ಟೈಮ್​ನಲ್ಲಿಯೂ ಇಲ್ಲ ಅಂದಿಲ್ಲ. ಬಜೆಟ್ ಹೆಚ್ಚು ಕಮ್ಮಿಯಾದ್ರೂ ಯಾವುದೇ ಅಡ್ಡಿ ಆತಂಕ ಎದುರಾಗದೆ ಫ್ರೀಡಂ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಚಿತ್ರ ನಿರ್ಮಾಣಕ್ಕೆ ಕಾರಣವಾಗಿದ್ದು, ಇದೇ ತಿಂಗಳ 16 ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ರೆಡಿಯಾಗುವವರೆಗೂ ಅದೊಂದು ಆರ್ಟ್. ರೆಡಿಯಾದ್ಮೇಲೆ ಅದೊಂದು ಪ್ರಾಡೆಕ್ಟ್. ಪ್ರಾಡೆಕ್ಟ್ ಬಳಿಕ ಬ್ಯುಸಿನೆಸ್ ಆಗುತ್ತದೆ. ಬ್ಯುಸಿನೆಸ್ ಬಳಿಕ ಮಾರ್ಕೆಟ್ ಗೆ ಬರುತ್ತದೆ. ಒಂದೊಳ್ಳೆ ಪ್ರಾಡೆಕ್ಟ್ ಗೆ ಒಂದೊಳ್ಳೆ ಬ್ಯುಸಿನೆಸ್ ಆಗುತ್ತೇ ಎಂಬ ನಂಬಿಕೆ ಇದೆ. ಇದೇ ನಂಬಿಕೆಯಿಂದ ಸಿನಿಮಾ ತೆರೆಗೆ ಬರ್ತಿದ್ದು, ನಿಮ್ಮ ಬೆಂಬಲ ಇರಲಿ ಎಂದರು.

ಶಿವಮೊಗ್ಗದ ತೀರ್ಥಹಳ್ಳಿಯ ಒಂದು ಊರಿನಲ್ಲಿ ನಡೆಯುವ ಕಥೆ. ಮಲೆನಾಡಿನಲ್ಲಿ ನಡೆಯುವ ಒಂದಿಷ್ಟು ನಿಗೂಢ ಘಟನೆಗಳ ಸುತ್ತಮುತ್ತ ಈ ಕಥೆಯನ್ನು ಹೆಣೆಯಲಾಗಿದೆ. ರಂಗಾಯಣ ರಘು ಅಡುಗೆ ಭಟ್ಟನಾಗಿ, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಸಿನಿಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ‘ಶಾಖಾಹಾರಿ’ ಸಿನಿಮಾ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಸಂದೀಪ್ಗೆ ಜೊತೆಗಾಗಿ ವಿಶ್ವಜಿತ್ ರಾವ್ ಕ್ಯಾಮರಾ, ಶಶಾಂಕ್ ನಾರಾಯಣ ಎಡಿಟಿಂಗ್, ಮಯೂರ್ ಅಂಬೆಕಲ್ಲು ಸಂಗೀತ ಈ ಸಿನಿಮಾಗಿದೆ. ಪ್ರಚಾರದ ಪಡಸಾಲೆಯಲ್ಲಿರುವ ಚಿತ್ರತಂಡ ಇದೇ ತಿಂಗಳ 16ರಂದು ಚಿತ್ರವನ್ನು ತೆರೆಗೆ ತರ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ