‘ಜರ್ನಿ ಆಫ್ ಬೆಳ್ಳಿ’: ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿ ಆಗಮನ

‘ಜರ್ನಿ ಆಫ್ ಬೆಳ್ಳಿ’ ಚಿತ್ರದಲ್ಲಿ ಓರ್ವ ಪುಟ್ಟ ಹುಡುಗಿಯ ಕಥೆ ಇರಲಿದೆ. ಆಕೆಯ ದೃಷ್ಟಿಕೋನದಲ್ಲಿ ಸೈನಿಕರ ಫ್ಯಾಮಿಲಿಯ ವಿಷಯ ತೆರೆದುಕೊಳ್ಳಲಿದೆ. ಈ ಚಿತ್ರದಲ್ಲಿ ಸಮನ್ವಿ ಪಾಟೀಲ್ ಮುಖ್ಯ ಪಾತ್ರ ಮಾಡುತ್ತಿದ್ದಾಳೆ. ಈ ಸಿನಿಮಾಗೆ ಗೌರಿ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಮಹೇಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

‘ಜರ್ನಿ ಆಫ್ ಬೆಳ್ಳಿ’: ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿ ಆಗಮನ
ನಿರ್ದೇಶಕಿ ಗೌರಿ ಶ್ರೀನಿವಾಸ್
Follow us
ಮದನ್​ ಕುಮಾರ್​
|

Updated on: Jan 21, 2024 | 3:03 PM

ಚಿತ್ರರಂಗದ ತಾಂತ್ರಿಕ ವಿಭಾಗ ಹೆಚ್ಚು ಪುರುಷ ಪ್ರಧಾನ ಆಗಿದೆ. ಅದರಲ್ಲೂ ನಿರ್ದೇಶಕರಿಗೆ ಹೋಲಿಸಿದರೆ ನಿರ್ದೇಶಕಿಯರ ಸಂಖ್ಯೆ ಕಡಿಮೆ. ಚಂದನವದಲ್ಲಿ (Sandalwood) ಕೆಲವು ಲೇಡಿ ಡೈರೆಕ್ಟರ್​ಗಳು ಸಕ್ರಿಯರಾಗಿದ್ದಾರೆ. ಈಗ ಅವರ ಸಾಲಿಗೆ ಮತ್ತೋರ್ವ ನಿರ್ದೇಶಕಿ ಸೇರ್ಪಡೆ ಆಗುತ್ತಿದ್ದಾರೆ. ಯಾರವರು? ಗೌರಿ ಶ್ರೀನಿವಾಸ್. ಮಕ್ಕಳ ಸಿನಿಮಾದ ಮೂಲಕ ಅವರು ಚಂದನವನಕ್ಕೆ ಎಂಟ್ರಿ ನೀಡುತ್ತಿದ್ದಾರೆ ಎಂಬುದು ವಿಶೇಷ. ‘ಜರ್ನಿ ಆಫ್ ಬೆಳ್ಳಿ’ (Journey of Belli) ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಸಿದ್ಧವಾಗುತ್ತಿದೆ. ಇದರಲ್ಲಿ ಮಕ್ಕಳ ಕಥೆ ಇರಲಿದೆ. ಈ ಚಿತ್ರಕ್ಕೆ ಗೌರಿ ಶ್ರೀನಿವಾಸ್ (Gowri Srinivasa) ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಅಂತಿಮ ಘಟ್ಟದಲ್ಲಿವೆ.

ಕಮರ್ಷಿಯಲ್​, ಹಾರರ್​, ಮಹಿಳಾ ಪ್ರಧಾನ, ಕಾಮಿಡಿ.. ಹೀಗೆ ನಾನಾ ಪ್ರಕಾರದ ಸಿನಿಮಾಗಳು ಪ್ರತಿ ವರ್ಷ ತಯಾರಾಗುತ್ತವೆ. ಆದರೆ ಮಕ್ಕಳ ಸಿನಿಮಾಗಳ ಸಂಖ್ಯೆ ಕಡಿಮೆ. ಮಕ್ಕಳಿಗಾಗಿ ತಯಾರಾಗುವ ಸಿನಿಮಾಗಳ ಸಂಖ್ಯೆ ವಿರಳ. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ‘ಜರ್ನಿ ಆಫ್ ಬೆಳ್ಳಿ’ ಸಿನಿಮಾ ಮೂಡಿಬರುತ್ತಿದೆ. ಒಂದಷ್ಟು ಹೊಸತನಗಳೊಂದಿಗೆ ಗೌರಿ ಶ್ರೀನಿವಾಸ್​ ಅವರು ಈ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಇದು ಮಕ್ಕಳ ಸಿನಿಮಾ ಆಗಿದ್ದರೂ ಇದರಲ್ಲಿನ ಕಥೆ ಎಲ್ಲರಿಗೂ ಅನ್ವಯ ಆಗುವಂತಿದೆ.

ಇದನ್ನೂ ಓದಿ: ಮುಹೂರ್ತದ ಜೊತೆ ‘ಶಭ್ಬಾಷ್’ ಫಸ್ಟ್​ ಲುಕ್​ ಅನಾವರಣ; ‘ಹೊಡಿರೋ ಸೆಲ್ಯೂಟ್’

‘ಜರ್ನಿ ಆಫ್ ಬೆಳ್ಳಿ’ ಚಿತ್ರದಲ್ಲಿ ಓರ್ವ ಪುಟ್ಟ ಹುಡುಗಿಯ ಕಥೆ ಇರಲಿದೆ. ಆಕೆಯ ದೃಷ್ಟಿಕೋನದಲ್ಲಿ ಸೈನಿಕರ ಫ್ಯಾಮಿಲಿಯ ವಿಷಯ ತೆರೆದುಕೊಳ್ಳಲಿದೆ. ಈ ಚಿತ್ರದಲ್ಲಿ ಸಮನ್ವಿ ಪಾಟೀಲ್ ಮುಖ್ಯ ಪಾತ್ರ ಮಾಡುತ್ತಿದ್ದಾಳೆ. ಮಕ್ಕಳಲ್ಲಿ ಹೊಸ ರೀತಿಯ ಆಲೋಚನೆ ತುಂಬಬಲ್ಲ ಕಥೆ ಈ ಚಿತ್ರದಲ್ಲಿ ಇರಲಿದೆ. ಜೊತೆಗೆ, ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟ ಆಗಲಿದೆ ಎಂಬ ನಂಬಿಕೆಯಲ್ಲಿ ‘ಜರ್ನಿ ಆಫ್ ಬೆಳ್ಳಿ’ ತಂಡ ಕಾರ್ಯನಿರತವಾಗಿದೆ. ತುಳು ಚಿತ್ರರಂಗದಲ್ಲಿ ಈಗಾಗಲೇ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಮಹೇಂದ್ರ ಕುಮಾರ್ ಅವರು ‘ಜರ್ನಿ ಆಫ್ ಬೆಳ್ಳಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಆ ಮೂಲಕ ಅವರು ಕೂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ನಿರ್ದೇಶಕಿ ಗೌರಿ ಶ್ರೀನಿವಾಸ್​ ಬಗ್ಗೆ:

‘ಜೀ ಕನ್ನಡ’ ಚಾನೆಲ್​ನಲ್ಲಿ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿದ್ದ ಗೌರಿ ಶ್ರೀನಿವಾಸ್ ಅವರು ನಂತರ ಬೇರೆ ಬೇರೆ ವಿಭಾಗಗಳಲ್ಲಿ ಅನುಭವ ಪಡೆದರು. ತಾವೇ ‘ಲಿಚಿ ಫಿಲ್ಮ್ಸ್​’ ಕಂಪನಿ ಆರಂಭಿಸಿದರು. ಬಳಿಕ ಕೆಲವು ಸಾಕ್ಷ್ಯಚಿತ್ರಗಳು ಹಾಗೂ ಕಾಪೋರೇಟ್ ಜಾಹೀರಾತುಗಳನ್ನು ತಯಾರಿಸಿದರು. ಅವರ ನಿರ್ಮಾಣದಲ್ಲಿ ಮೂಡಿಬಂದ ಮಧ್ಯಪ್ರದೇಶದ ಕೈಮಗ್ಗ ಉದ್ಯಮದ ಕುರಿತಾದ ‘the woven motifs of chanderi’ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ಈ ಎಲ್ಲ ಅನುಭವಗಳನ್ನು ಇಟ್ಟುಕೊಂಡು ಅವರು ‘ಜರ್ನಿ ಆಫ್ ಬೆಳ್ಳಿ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್