ಮುಹೂರ್ತದ ಜೊತೆ ‘ಶಭ್ಬಾಷ್’ ಫಸ್ಟ್​ ಲುಕ್​ ಅನಾವರಣ; ‘ಹೊಡಿರೋ ಸೆಲ್ಯೂಟ್’

ಓಂ ಸಾಯಿಪ್ರಕಾಶ್ ಅವರು ಕ್ಲ್ಯಾಪ್​ ಮಾಡುವ ಮೂಲಕ ‘ಶಭ್ಬಾಷ್​’ ಚಿತ್ರದ ಶೂಟಿಂಗ್​ಗೆ ಚಾಲನೆ ನೀಡಿದ್ದಾರೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿದೆ. ಇದೇ ವೇಳೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಶಭ್ಬಾಷ್​’ ಟೈಟಲ್​ಗೆ ‘ಹೊಡಿರೋ ಸೆಲ್ಯೂಟ್’ ಎಂಬ ಅಡಿಬರಹ ಇದೆ.

ಮುಹೂರ್ತದ ಜೊತೆ ‘ಶಭ್ಬಾಷ್’ ಫಸ್ಟ್​ ಲುಕ್​ ಅನಾವರಣ; ‘ಹೊಡಿರೋ ಸೆಲ್ಯೂಟ್’
‘ಶಭ್ಬಾಷ್​’ ಸಿನಿಮಾದ ಮುಹೂರ್ತ ಸಮಾರಂಭ
Follow us
ಮದನ್​ ಕುಮಾರ್​
|

Updated on: Jan 16, 2024 | 7:50 PM

ಯಾರಾದರೂ ಉತ್ತಮವಾದ ಕೆಲಸ ಮಾಡಿದರೆ ಶಭ್ಬಾಷ್ (Shabbash) ಎಂಬ ಮೆಚ್ಚುಗೆ ಸಿಗುತ್ತದೆ. ಈಗ ಆ ಪದವನ್ನೇ ಶೀರ್ಷಿಕೆಯನ್ನಾಗಿ ಇಟ್ಟುಕೊಂಡು ಕನ್ನಡದಲ್ಲಿ ಹೊಸ ಸಿನಿಮಾ (New Kannada Movie) ಸೆಟ್ಟೇರಿದೆ. ಸಂಕ್ರಾಂತಿ ಹಬ್ಬದಲ್ಲಿ ಈ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ರುದ್ರಶಿವ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ‘ಏಸ್ 22’ ಬ್ಯಾನರ್​ ಮೂಲಕ ಪವೀಂದ್ರ ಮುತ್ತಪ್ಪ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ರುದ್ರಶಿವ ಅವರು ಕೆಲವು ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿದ್ದಾರೆ. ಶಿವಮಣಿ, ಪಲ್ಲಕ್ಕಿ ರಾಧಾಕೃಷ್ಣ, ಅಯ್ಯಪ್ಪ ಶರ್ಮಾ ಮುಂತಾದ ನಿರ್ದೇಶಕರ ಜೊತೆ ಅವರು ಕೆಲಸ ಮಾಡಿದ್ದಾರೆ. ಓಂ ಸಾಯಿಪ್ರಕಾಶ್ ಅವರನ್ನು ತಮ್ಮ ಗುರುವೆಂದೇ ರುದ್ರಶಿವ ಪರಿಗಣಿಸಿದ್ದಾರೆ. ಹಾಗಾಗಿ ‘ಶಭ್ಬಾಷ್’ ಚಿತ್ರದ ಮೊದಲ ದೃಶ್ಯಕ್ಕೆ ಓಂ ಸಾಯಿಪ್ರಕಾಶ್ (Om Sai Prakash) ಕ್ಲ್ಯಾಪ್​ ಮಾಡಿ ಶುಭ ಕೋರಿದ್ದಾರೆ.

ಓಂ ಸಾಯಿಪ್ರಕಾಶ್ ಅವರು ಕ್ಲ್ಯಾಪ್​ ಮಾಡುವ ಮೂಲಕ ‘ಶಭ್ಬಾಷ್​’ ಚಿತ್ರದ ಶೂಟಿಂಗ್​ಗೆ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ. ಇದೇ ವೇಳೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ. ‘ಶಭ್ಬಾಷ್​’ ಟೈಟಲ್​ಗೆ ‘ಹೊಡಿರೋ ಸೆಲ್ಯೂಟ್’ ಎಂಬ ಅಡಿಬರಹ ಇದೆ. ಆ ಕಾರಣದಿಂದಲೂ ಈ ಸಿನಿಮಾ ಕೌತುಕ ಮೂಡಿಸಿದೆ.

ಇದನ್ನೂ ಓದಿ: ‘ಸಾರಾಂಶ’: ಕತೆಗಾರನಿಂದ ಪಾತ್ರವೋ, ಪಾತ್ರದಿಂದ ಕತೆಗಾರನೋ

‘ಶಭ್ಬಾಷ್’ ಚಿತ್ರದ 6 ಹಾಡುಗಳು ಈಗಾಗಲೇ ಸಿದ್ಧಗೊಂಡಿವೆ. ಮ್ಯಾಡಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಆಂಜನೇಯನ ಕುರಿತ ಒಂದು ಹಾಡಿಗೆ ಶಂಕರ್ ಮಹಾದೇವನ್ ಧ್ವನಿ ನೀಡಿದ್ದಾರೆ. ರವೀಂದ್ರ ಸೊರಗಾವಿ ಮತ್ತು ಶಮಿತಾ ಮಲ್ನಾಡ್ ಕಾಂಬಿನೇಷನ್​ನಲ್ಲಿ ಒಂದು ಹಾಡು ಇದೆ. ಇಂಧೂ ನಾಗರಾಜ್-ವ್ಯಾಸರಾಜ್ ಅವರು ಕಂಠದಲ್ಲಿ ಒಂದು ಗೀತೆ, ವಿಜಯ್ ಪ್ರಕಾಶ್ ಹಾಗೂ ಅನುರಾಧ್ ಭಟ್ ಧ್ವನಿಯಲ್ಲೊಂದು ಮೆಲೋಡಿ ಸಾಂಗ್​ ಇದೆ. ಜೋಗಿ ಪ್ರೇಮ್, ನವೀನ್ ಸಜ್ಜು ಅವರು ಕೂಡ ಈ ಸಿನಿಮಾದ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: ಆಸ್ಕರ್​ ವಿಜೇತ ನಿರ್ಮಾಣ ಸಂಸ್ಥೆ ‘ಕಿಲ್ಜಾಯ್ ಫಿಲ್ಮ್ಸ್​’ ಜತೆ ಕೈ ಜೋಡಿಸಿದ ಕನ್ನಡದ ‘ಕೆಂಡ’ ಸಿನಿಮಾ

ಆ್ಯಕ್ಷನ್, ಡ್ರಾಮಾ ಪ್ರಕಾರದಲ್ಲಿ ‘ಶಭ್ಬಾಷ್​’ ಚಿತ್ರ ಮೂಡಿಬರಲಿದೆ. ಈ ಸಿನಿಮಾಗೆ ಶರತ್ ನಾಯಕ. ಅವರಿಗೆ ಜೋಡಿಯಾಗಿ ನಿಸರ್ಗ ಅಭಿನಯಿಸುತ್ತಿದ್ದಾರೆ. ‘ಕ’, ‘ಮಳೆಬಿಲ್ಲು’ ಸಿನಿಮಾಗಳಲ್ಲಿ ಹೀರೋ ಆಗಿದ್ದ ಶರತ್ ಅವರು ಒಂದು ಗ್ಯಾಪ್​ನ ಬಳಿಕ ಮತ್ತೆ ‘ಶಭ್ಬಾಷ್’ ಚಿತ್ರದ ಮೂಲಕ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರಿನ ಸುತ್ತಮುತ್ತ 15 ದಿನಗಳ ಕಾಲ ಶೂಟಿಂಗ್​ ನಡೆಯಲಿದೆ. ಬಳಿಕ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಸಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ