AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ಯಾಚುಲರ್ ಪಾರ್ಟಿ’ ಟ್ರೈಲರ್: ಬ್ಯಾಂಕಾಕ್​ನಲ್ಲಿ ಗೆಳೆಯರ ಪಾರ್ಟಿ ಬಲು ಜೋರು

Bachelor Party: ದಿಗಂತ್, ಯೋಗಿ ನಟಿಸಿ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

‘ಬ್ಯಾಚುಲರ್ ಪಾರ್ಟಿ’ ಟ್ರೈಲರ್: ಬ್ಯಾಂಕಾಕ್​ನಲ್ಲಿ ಗೆಳೆಯರ ಪಾರ್ಟಿ ಬಲು ಜೋರು
ಬ್ಯಾಚುಲರ್ ಪಾರ್ಟಿ
ಮಂಜುನಾಥ ಸಿ.
|

Updated on:Jan 16, 2024 | 11:56 PM

Share

ದಿಗಂತ್ (Diganth), ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಮದುವೆಯಾಗಲಿರುವ ಗೆಳೆಯನ ಬ್ಯಾಚುಲರ್ ಪಾರ್ಟಿಗಾಗಿ ಬ್ಯಾಂಕಾಕ್​ಗೆ ಹೋದ ಗೆಳೆಯರು ಮಾಡುವ ಪಾರ್ಟಿ ಅಲ್ಲಿ ಅವರು ಎದುರಿಸುವ ಸಮಸ್ಯೆಗಳು, ಪೀಕಲಾಟಗಳ ಬಗ್ಗೆ ಈ ಸಿನಿಮಾ ಇದ್ದು, ಸಿನಿಮಾದ ಟ್ರೈಲರ್ ಸಖತ್ ಮಜವಾಗಿದೆ.

ಪತ್ನಿಯಿಂದ ಪೀಡನೆಗೆ ಒಳಗಾಗಿರುವ ಪತಿಯ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ಅವರ ಗೆಳೆಯನ ಪಾತ್ರದಲ್ಲಿ ಯೋಗಿ ನಟಿಸಿದ್ದಾರೆ. ಗೆಳೆಯನ ಮದುವೆ ನಿಶ್ಚಯವಾಗಿದ್ದು ಅದರ ಬ್ಯಾಚುಲರ್ ಪಾರ್ಟಿ ಮಾಡಲೆಂದು ಇಬ್ಬರೂ ಬ್ಯಾಂಕಾಕ್​ಗೆ ಹೋಗುತ್ತಾರೆ. ಅವರ ಜೊತೆ ಅಚ್ಯುತ್ ಕುಮಾರ್ ತಗಲುಹಾಕಿಕೊಳ್ತಾರೆ. ಅಲ್ಲಿ ನಡೆಯುವ ಚಿತ್ರ-ವಿಚಿತ್ರ ಘಟನೆಗಳು, ಎದುರಿಸುವ ಪೀಕಲಾಟ, ಸಿಲುಕಿಕೊಳ್ಳುವ ಸಮಸ್ಯೆಗಳನ್ನು, ಅದರಿಂದ ಹೊರಗೆ ಬರುವ ರೀತಿಯನ್ನು ಹಾಸ್ಯದ ಲೇಪನದೊಂದಿಗೆ ನಿರೂಪಿಸಲಾಗಿದೆ.

ಈಗ ಬಿಡುಗಡೆ ಆಗಿರುವ ಟ್ರೈಲರ್ ಮಜವಾಗಿದೆ. ದಿಗಂತ್​ರ ಸಂಸಾರ, ಪತ್ನಿಯಿಂದ ಅನುಭವಿಸುತ್ತಿರುವ ಸಮಸ್ಯೆ, ಯೋಗಿಯ ಬಿಂದಾಸ್ ಆಟಿಟ್ಯೂಡ್, ಅಚ್ಯುತ್ ಕುಮಾರ್ ಅವರ ಪಂಚ್ ಲೈನ್​ಗಳು ಟ್ರೈಲರ್​ನಲ್ಲಿವೆ. ಪ್ರೇಕ್ಷಕ ಸಿನಿಮಾದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಝಲಕ್ ಟ್ರೈಲರ್​ನಲ್ಲಿದೆ.

ಇದನ್ನೂ ಓದಿ:‘ಎಡಗೈ ಅಪಘಾತಕ್ಕೆ ಕಾರಣ’ ಟೀಸರ್ ಬಿಡುಗಡೆಗೆ ಸಿದ್ಧ: ದಿಗಂತ್​ಗೆ ಕಿಚ್ಚನ ಬಲ

ಸಿನಿಮಾದಲ್ಲಿ ಭರಪೂರ ಹಾಸ್ಯ ಇರುವ ಸುಳಿವನ್ನು ಟ್ರೈಲರ್ ನೀಡುತ್ತಿದೆ. ಜೊತೆಗೆ ಕೆಲವು ಆಕ್ಷನ್, ಚೇಸ್ ದೃಶ್ಯಗಳು ಸಹ ಇರಲಿದೆ. ಡಾನ್​ಗಳು, ಪಾರ್ಟಿ ಮಾಡಲು ಬಂದ ಗೆಳೆಯರ ಮೇಲೆ ಡಾನ್​ನ ಕಣ್ಣು ಬೀಳುವುದೇಕೆ? ಡಾನ್​ನಿಂದ ಈ ಗೆಳೆಯರು ಹೇಗೆ ಬಚಾವಾಗುತ್ತಾರೆ. ಆ ಬ್ಯಾಂಕಾಕ್ ಸುಂದರಿ ಯಾರ ಪ್ರೀತಿಗೆ ಬೀಳುತ್ತಾಳೆ ಇತ್ಯಾದಿಗಳನ್ನು ತಿಳಿಯಲು ಸಿನಿಮಾ ನೋಡಬೇಕು.

ಯೋಗಿ, ದಿಗಂತ್, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪ್ರಕಾಶ್ ತುಮ್ಮಿನಾಡು, ಲೂಸಿಯಾ ಪವನ್, ಶೋಭರಾಜ್, ಶೈನ್ ಶೆಟ್ಟಿ, ಸುಧಾ ಬೆಳವಾಡಿ, ಮಠ ಗುರುಪ್ರಸಾದ್, ನಾ ಸೋಮೇಶ್ವರ್, ದಿಗಂತ್ ಪತ್ನಿಯ ಪಾತ್ರದಲ್ಲಿ ಸಿರಿ ರವಿಕುಮಾರ್, ವಿಶೇಷ ಪಾತ್ರದಲ್ಲಿ ಜನಪ್ರಿಯ ಯೂಟ್ಯೂಬರ್ ವಿಕಿಪೀಡಿಯಾ ಇನ್ನೂ ಹಲವು ದಿಗ್ಗಜರು ನಟಿಸಿದ್ದಾರೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡಿರುವುದು ಅಭಿಜಿತ್ ಮಹೇಶ್. ಸಿನಿಮಾಕ್ಕೆ ಅರ್ಜುನ್ ರಾಮು ಸಂಗೀತ ನೀಡಿದ್ದಾರೆ. ಸಿನಿಮಾ ಜನವರಿ 26ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Tue, 16 January 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್