ತಂದೆ, ತಾಯಿ ಸಮಾಧಿ ಬಳಿ ವಿಜಯ್ ಬರ್ತ್​ಡೇ ಆಚರಣೆ; ‘ಭೀಮ’ ಟೀಸರ್ ರಿಲೀಸ್

ದುನಿಯಾ ವಿಜಯ್ ಅವರು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್ಡೇ ಶುಭಾಶಯ ಕೋರಲು ಇಂದು ಅಭಿಮಾನಿಗಳು ತೆರಳಲಿದ್ದಾರೆ. ಹೀಗಾಗಿ, 5,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ತಂದೆ, ತಾಯಿ ಸಮಾಧಿ ಬಳಿ ವಿಜಯ್ ಬರ್ತ್​ಡೇ ಆಚರಣೆ; ‘ಭೀಮ’ ಟೀಸರ್ ರಿಲೀಸ್
ದುನಿಯಾ ವಿಜಯ್

Updated on: Jan 20, 2024 | 6:58 AM

ನಟ ದುನಿಯಾ ವಿಜಯ್ (Duniya Vijay) ಅವರಿಗೆ ತಂದೆ, ತಾಯಿ ಮೇಲೆ ವಿಶೇಷ ಪ್ರೀತಿ. ಆದರೆ, ಇಂದು ಅವರು ವಿಜಯ್ ಜೊತೆ ಇಲ್ಲ. ಹೀಗಾಗಿ, ತಂದೆ-ತಾಯಿ ಸಮಾಧಿ ಬಳಿ ದುನಿಯಾ ವಿಜಯ್ ಅವರು ಬರ್ತ್​ಡೇ (ಜನವರಿ 20) ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರಿಗೆ ಸಾಥ್ ನೀಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ತಂದೆ-ತಾಯಿ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ನಟಿಸಿ ನಿರ್ದೇಶಿಸುತ್ತಿರುವ ‘ಭೀಮ’ ಸಿನಿಮಾದ ಟೀಸರ್ ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿದೆ.

ದುನಿಯಾ ವಿಜಯ್ ಅವರು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಸಮೀಪ ಇರುವ ಆನೇಕಲ್ ತಾಲೂಕಿನ ಕುಂಬಾರಹಳ್ಳಿಯಲ್ಲಿ ವಿಜಯ್ ತಂದೆ, ತಾಯಿ ಸಮಾಧಿ ಇದೆ. ಬರ್ತ್ಡೇ ಶುಭಾಶಯ ಕೋರಲು ಇಂದು ಅಭಿಮಾನಿಗಳು ತೆರಳಲಿದ್ದಾರೆ. ಹೀಗಾಗಿ, 5,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಅವರು ಊರಿನಲ್ಲೇ ಉಳಿದುಕೊಂಡಿದ್ದರು. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳು ಬರುತ್ತಿವೆ.

ದುನಿಯಾ ವಿಜಯ್ ಅವರು ಕಳೆದ ವರ್ಷವೂ ಬರ್ತಡೇನ ತಂದೆ, ತಾಯಿ ಸಮಾಧಿ ಬಳಿಯೇ ಮಾಡಿಕೊಂಡಿದ್ದರು. ಈ ಬಾರಿ ಸಮಾಧಿಯನ್ನು ದೇವಸ್ಥಾನದಂತೆ ನಿರ್ಮಿಸಿದ್ದಾರೆ. ಈ ಮೂಲಕ ತಂದೆ, ತಾಯಿ ಮೇಲಿರುವ ಪ್ರೀತಿಯನ್ನು ಅವರು ಹೊರ ಹಾಕಿದ್ದಾರೆ.

ಇದನ್ನೂ ಓದಿ: ಅಚಾನಕ್ಕಾಗಿ ಬಾಲ್ಯದ ಗೆಳೆಯನ ಮನೆಗೆ ಭೇಟಿ ಕೊಟ್ಟ ದುನಿಯಾ ವಿಜಯ್

ಟೀಸರ್ ಗಿಫ್ಟ್

‘ಸಲಗ’ ಸಿನಿಮಾದಲ್ಲಿ ನಟಿಸಿ, ನಿರ್ದೇಶಿಸಿ ದುನಿಯಾ ವಿಜಯ್ ಅವರು ಖ್ಯಾತಿ ಪಡೆದರು. ಈಗ ‘ಭೀಮ’ ಮೂಲಕ ಎರಡನೇ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದು ಕೂಡ ರೌಡಿಸಂ ಕಥೆ. ಟೀಸರ್​ನಲ್ಲಿ ಬರೋ ಡೈಲಾಗ್ ಗಮನ ಸೆಳೆದಿದೆ. ಈ ಸಿನಿಮಾದ ರಿಲೀಸ್​ಗಾಗಿ ಅಭಿಮಾನಿಗಳು ಕಾದಿದ್ದಾರೆ. ಈ ವರ್ಷ ‘ಭೀಮ ಸಿನಿಮಾ ರಿಲೀಸ್ ಆಗೋ ನಿರೀಕ್ಷೆ ಇದೆ. ಇದಲ್ಲದೆ ಇನ್ನೂ ಕೆಲವು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us