Prajwal Devaraj: ಪ್ರಜ್ವಲ್​ ದೇವರಾಜ್​ ನಟನೆಯ ‘ಗಣ’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಿದ 17ಕ್ಕೂ ಹೆಚ್ಚು ಸೆಲೆಬ್ರಿಟಿಗಳು

Gana Kannada Movie: ‘ಗಣ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್​ನಲ್ಲಿ ಪ್ರಜ್ವಲ್ ದೇವರಾಜ್​ ಅವರ‌ ಹೊಸ ಗೆಟಪ್​ ನೋಡಿ ಅವರ ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ. ಪಾತ್ರವರ್ಗದ ಕಾರಣದಿಂದಲೂ ಈ ಸಿನಿಮಾ ಗಮನ ಸೆಳೆಯುತ್ತಿದೆ.

Prajwal Devaraj: ಪ್ರಜ್ವಲ್​ ದೇವರಾಜ್​ ನಟನೆಯ ‘ಗಣ’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಿದ 17ಕ್ಕೂ ಹೆಚ್ಚು ಸೆಲೆಬ್ರಿಟಿಗಳು
ಪ್ರಜ್ವಲ್​ ದೇವರಾಜ್​

Updated on: Jun 11, 2023 | 1:07 PM

ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ವರ್ಷ ಅವರು ನಟಿಸಿದ ‘ವೀರಂ’ ಸಿನಿಮಾ ತೆರೆಕಂಡಿತು. ಅವರ ಕೈಯಲ್ಲಿ ‘ಮಾಫಿಯಾ’ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಿವೆ. ಅಭಿಮಾನಿಗಳಿಗಾಗಿ ವಿವಿಧ ರೀತಿಯ ಪಾತ್ರಗಳನ್ನು ಪ್ರಜ್ವಲ್​ ದೇವರಾಜ್​ ಮಾಡುತ್ತಿದ್ದಾರೆ. ಆ ಪೈಕಿ ‘ಗಣ’ ಸಿನಿಮಾ (Gana Kannada Movie) ಕೂಡ ಸುದ್ದಿಯಲ್ಲಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್​ ಇತ್ತೀಚೆಗೆ ಬಿಡುಗಡೆ ಆಯಿತು. ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳು ಸೇರಿ ‘ಗಣ’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ (Gana Movie First Look Poster) ಅನಾವರಣ ಮಾಡಿದ್ದಾರೆ ಎಂಬುದು ವಿಶೇಷ. ಆ ಮೂಲಕ ಎಲ್ಲರೂ ಈ ಸಿನಿಮಾಗೆ ಶುಭ ಹಾರೈಸಿದ್ದಾರೆ.

‌‌‌ಕನ್ನಡ ಚಿತ್ರರಂಗದ ಜನಪ್ರಿಯರ ಕಲಾವಿದರಾದ ವಿಜಯ್​ ರಾಘವೇಂದ್ರ, ಶೃತಿ ಹರಿಹರನ್, ಪನ್ನಗಭರಣ, ವಾಸುಕಿ ವೈಭವ್, ಮೇಘನಾ ರಾಜ್, ರಾಗಿಣಿ ಪ್ರಜ್ವಲ್,‌ ಸಿಂಪಲ್ ಸುನಿ, ಶರಣ್, ಮೇಘಾ ಶೆಟ್ಟಿ, ರಾಗಿಣಿ ದ್ವಿವೇದಿ, ಪ್ರಣಾಮ್ ದೇವರಾಜ್, ತರುಣ್ ಸುಧೀರ್, ರಚನಾ ಇಂದರ್, ಗಿರೀಶ್ ಶಿವಣ್ಣ, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಹಾಗೂ ನಿರ್ದೇಶಕ ಲೋಹಿತ್ ಸೇರಿದಂತೆ 17ಕ್ಕೂ ಹೆಚ್ಚು ಸೆಲೆಬ್ರಿಟಿಗಳು ‘ಗಣ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್​ ಅನ್ನು ಸೋಶಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್​ ಎಂದಿದ್ದಾರೆ. ಫಸ್ಟ್ ಲುಕ್​ಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಗಣ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್​ನಲ್ಲಿ ಪ್ರಜ್ವಲ್ ದೇವರಾಜ್​ ಅವರ‌ ಹೊಸ ಗೆಟಪ್​ ನೋಡಿ ಅವರ ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ. ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ. ಕಲಾ ನಿರ್ದೇಶನ ಹಾಗೂ ಡಿ.ಜೆ. ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Prajwal Devaraj: ಟೈಮ್​ ಲೂಪ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ‘ಮಮ್ಮಿ’ ಖ್ಯಾತಿಯ ಲೋಹಿತ್​ ನಿರ್ದೇಶನ

ಪಾತ್ರವರ್ಗದ ಕಾರಣದಿಂದಲೂ ‘ಗಣ’ ಸಿನಿಮಾ ಗಮನ ಸೆಳೆಯುತ್ತಿದೆ. ಅನೇಕ ಪ್ರತಿಭಾವಂತ ನಟ-ನಟಿಯರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಜೊತೆ ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ರಮೇಶ್ ಭಟ್ ಮುಂತಾದವರು ಈ ಸಿನಿಮಾದಲ್ಲಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳ ವಲಯದಲ್ಲಿ ‘ಗಣ’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us