Prajwal Devaraj: ‘ಅಬ್ಬರ’ ಸಿನಿಮಾ; ನಿಮಿಕಾ ರತ್ನಾಕರ್ ಜೊತೆ ಪ್ರಜ್ವಲ್ ದೇವರಾಜ್ಗೆ ಟಪೋರಿ ಪಾತ್ರ
Nimika Ratnakar | Abbara Kannada Movie: ‘ಅಬ್ಬರ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ಮೂವರು ನಾಯಕಿಯರು. ನಿಮಿಕಾ ರತ್ನಾಕರ್, ಲೇಖಾ ಚಂದ್ರ ಹಾಗೂ ರಾಜಶ್ರೀ ಜೊತೆ ಅವರು ನಟಿಸಿದ್ದಾರೆ.
ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ‘ಅಬ್ಬರ’ ಸಿನಿಮಾ (Abbara Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ಮೂವರು ನಾಯಕಿಯರು. ನಿಮಿಕಾ ರತ್ನಾಕರ್, ಲೇಖಾ ಚಂದ್ರ ಹಾಗೂ ರಾಜಶ್ರೀ ಜೊತೆ ಅವರು ನಟಿಸಿದ್ದಾರೆ. ಪಾತ್ರದ ಬಗ್ಗೆ ನಟಿ ನಿಮಿಕಾ ರತ್ನಾಕರ್ (Nimika Ratnakar) ಮಾತನಾಡಿದ್ದಾರೆ. ‘ಇದು ಎಲ್ಲ ವರ್ಗದ ಆಡಿಯನ್ಸ್ಗೆ ಇಷ್ಟ ಆಗುವ ಸಿನಿಮಾ. ನನ್ನ ಜೊತೆ ಟಪೋರಿ ರೀತಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ ಅವರ ಪಾತ್ರಕ್ಕೆ ಬೇರೆ ಬೇರೆ ಶೇಡ್ಸ್ ಇವೆ’ ಎಂದು ಹೇಳಿರುವ ನಿಮಿಕಾ ಅವರು ಈ ಚಿತ್ರದಲ್ಲಿ ಎನ್ಆರ್ಐ ಪಾತ್ರ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos