ಥರಗುಟ್ಟಿಸುವ ಶೀತಗಾಳಿಯಲ್ಲಿ ದಮ್ಮನಕಟ್ಟೆ ರೇಂಜ್ ನ ಹೊಂಡವೊಂದಕ್ಕೆ ಇಳಿಯುವ ಹುಲಿರಾಯನಿಗೆ ಚಳಿ ಯಾವ ಲೆಕ್ಕ?

ಥರಗುಟ್ಟಿಸುವ ಶೀತಗಾಳಿಯಲ್ಲಿ ದಮ್ಮನಕಟ್ಟೆ ರೇಂಜ್ ನ ಹೊಂಡವೊಂದಕ್ಕೆ ಇಳಿಯುವ ಹುಲಿರಾಯನಿಗೆ ಚಳಿ ಯಾವ ಲೆಕ್ಕ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2022 | 11:55 AM

ನಾಗರಹೊಳೆ ರಾಷ್ಟ್ರೀಯ ಉದ್ಯಾವನದ ದಮ್ಮನಕಟ್ಟೆ ರೇಂಜ್ ನಲ್ಲಿ ಥರಗುಟ್ಟುವ ಚಳಿಯಲ್ಲೂ ಹುಲಿಯೊಂದು ನೀರಿನ ಹೊಂಡದಲ್ಲಿ ಕುಳಿತು ಎಂಜಾಯ್ ಮಾಡುತ್ತಿದೆ.

ಮೈಸೂರು:  ಕೊರೆಯುವ ಚಳಿಗೆ ಮೈತುಂಬಾ ರಗ್ಗು ಹೊದ್ದು ರಾತ್ರಿ ಮಲಗಿ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳಿಸುವಾಗ ಎರಡೆರಡು ಸ್ವೆಟರ್ ಮತ್ತು ತಲೆಗಳಿಗೆ ಬೆಚ್ಚನೆಯ ಕ್ಯಾಪುಗಳನ್ನು ತೊಡಿಸಿ, ನಾವು ಜರ್ಕಿನ್, ಪುಲ್ ಓವರ್ ಗಳನ್ನು ಧರಿಸಿ ಆಫೀಸುಗಳಿಗೆ ಹೋಗುತ್ತಿದ್ದರೆ, ಈ ಹುಲಿರಾಯನನ್ನು ನೋಡಿ ಸ್ವಾಮಿ! ಎಚ್ ಡಿ ಕೋಟೆ (HD Kote) ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾವನದ ದಮ್ಮನಕಟ್ಟೆ ರೇಂಜ್ ನಲ್ಲಿ (Dammankatte Range) ಥರಗುಟ್ಟುವ ಚಳಿಯಲ್ಲೂ ಹುಲಿಯೊಂದು (tiger) ನೀರಿನ ಹೊಂಡದಲ್ಲಿ ಕುಳಿತು ಎಂಜಾಯ್ ಮಾಡುತ್ತಿದೆ. ಹುಲಿರಾಯನಿಗೆ ಚಳಿಯೇನು, ಮಳೆಯೇನು? ದಮ್ಮನಕಟ್ಟೆ ಸಫಾರಿಗೆ ತೆರಳಿದ ಪ್ರವಾಸಿಗರು ಈ ದೃಶ್ಯವನ್ನು ಜೊತೆಗೆ ಒಯ್ದಿದ್ದ ಕೆಮೆರಾದಲ್ಲಿ ಸೆರೆಹಿಡಿದಿದ್ದಾರೆ.