ಇವರು ನಿಜಕ್ಕೂ ರಶ್ಮಿಕಾ ಮಂದಣ್ಣನಾ? ವೈರಲ್ ವಿಡಿಯೋ ಬಗ್ಗೆ ಇಲ್ಲಿದೆ ಮಾಹಿತಿ  

ಫಿಟ್ ಡ್ರೆಸ್ ಹಾಕಿ ರಶ್ಮಿಕಾ ಮಂದಣ್ಣ ಅವರು ಲಿಫ್ಟ್ ಏರುತ್ತಿರುವುದು ವೈರಲ್ ವಿಡಿಯೋದಲ್ಲಿದೆ. ರಶ್ಮಿಕಾ ಮಂದಣ್ಣ ಅವರಿಗೆ ಅನೇಕರು ಡ್ರೆಸ್ ಬಗ್ಗೆ ಪಾಠ ಹೇಳಿದ್ದರು. ಯಾವ ರೀತಿಯ ಡ್ರೆಸ್ ಹಾಕಬೇಕು ಎಂಬುದು ತಿಳಿಯುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು.

ಇವರು ನಿಜಕ್ಕೂ ರಶ್ಮಿಕಾ ಮಂದಣ್ಣನಾ? ವೈರಲ್ ವಿಡಿಯೋ ಬಗ್ಗೆ ಇಲ್ಲಿದೆ ಮಾಹಿತಿ  
ರಶ್ಮಿಕಾ

Updated on: Nov 06, 2023 | 10:10 AM

ತಂತ್ರಜ್ಞಾನ ಮುಂದುವರಿದಿದೆ. ಇದರಿಂದ ಜನರಿಗೆ ಸಾಕಷ್ಟು ಲಾಭಗಳು ಆಗಿವೆ. ಅದೇ ರೀತಿ ಕೆಲವು ತೊಂದರೆಗಳು ಕೂಡ ಆಗುತ್ತಿವೆ. ಆರ್ಟಿಫೀಷಿಯಲ್ ಇಂಟಲಿಜೆನ್ಸ್ (ಎಐ) ಬಳಕೆ ಮಾಡಿಕೊಂಡು ಯಾರ ಮುಖವನ್ನು ಯಾರಿಗೆ ಬೇಕಿದ್ದರೂ ಅಂಟಿಸಬಹುದು. ಈಗ ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ತಿರುಚಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ರಶ್ಮಿಕಾ ಮಂದಣ್ಣ (Rashmika Mandanna) ಎಂದು ಅನೇಕರು ತಪ್ಪಾಗಿ ಭಾವಿಸಿದ್ದಾರೆ. ಈ ವಿಡಿಯೋದ ಅಸಲಿತನ ಇಲ್ಲಿದೆ.

ಫಿಟ್ ಡ್ರೆಸ್ ಹಾಕಿ ರಶ್ಮಿಕಾ ಮಂದಣ್ಣ ಅವರು ಲಿಫ್ಟ್ ಏರುತ್ತಿರುವುದು ವೈರಲ್ ವಿಡಿಯೋದಲ್ಲಿದೆ. ರಶ್ಮಿಕಾ ಮಂದಣ್ಣ ಅವರಿಗೆ ಅನೇಕರು ಡ್ರೆಸ್ ಬಗ್ಗೆ ಪಾಠ ಹೇಳಿದ್ದರು. ಯಾವ ರೀತಿಯ ಡ್ರೆಸ್ ಹಾಕಬೇಕು ಎಂಬುದು ತಿಳಿಯುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಆದರೆ, ಅಸಲಿಗೆ ಇದು ರಶ್ಮಿಕಾ ಮಂದಣ್ಣನೇ ಅಲ್ಲ. ಯಾರೋ ಎಡಿಟ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದರ ಫ್ಯಾಕ್ಟ್ ಚೆಕ್ ಮಾಡಲಾಗಿದೆ. ಇದು ಅಸಲಿಗೆ ಜರಾ ಪಟೇಲ್ ಎಂಬುವವರ ವಿಡಿಯೋ. ಆಂಗ್ಲೋ ಇಂಡಿಯನ್ ಹುಡುಗಿ ಆಗಿರುವ ಇವರು ಅಕ್ಟೋಬರ್ 9ರಂದು ಲಿಫ್ಟ್ ಏರುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದರು. ಜರಾ ಅವರ ಮುಖಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಹಾಕಲಾಗಿದೆ. ಇದು ರಶ್ಮಿಕಾ ಮಂದಣ್ಣ ಎಂದೇ ಎಲ್ಲರಿಗೂ ಭಾಸವಾಗಿದೆ.

ಇದನ್ನೂ ಓದಿ: ವಿನಯ್ ಅಲ್ಲ, ಸಂಗೀತಾ ಬಿಗ್ ಬಾಸ್​ನಲ್ಲಿ ಅತಿ ಹೆಚ್ಚು ಹೇಟ್ ಮಾಡುವ ಸ್ಪರ್ಧಿ ಇವರೇ

ಈ ಕುರಿತು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ವಿಡಿಯೋಗೆ ಸಂಬಂಧಿಸಿದ ಟ್ವೀಟ್​ನ ರೀಟ್ವೀಟ್ ಮಾಡಿರುವ ಅಮಿತಾಭ್ ಬಚ್ಚನ್ ಅವರು, ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us