ಗೆಸ್ಟ್ ರೋಲ್, ವಿಲನ್ ಆಗೋದು ಇಷ್ಟವಿಲ್ಲ ಪರಭಾಷೆಯಲ್ಲಿ ನಟಿಸಬೇಡಿ ಅಂತಾ ಕಿಚ್ಚನ ಫ್ಯಾನ್ಸ್ ಪಟ್ಟು

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆ ಅಭಿಮಾನಿಗಳಲ್ಲಿ ಆತಂಕ ಹುಟ್ಟು ಹಾಕಿದೆ. ಕಿಚ್ಚನ ನಿರ್ಧಾರ ಬದಲಿಸುವಂತೆ ಅಭಿಮಾನಿಗಳು ಒತ್ತಾಯಿಸ್ತಿದ್ದಾರೆ. ಅದಕ್ಕಾಗಿ ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ದಾರೆ. ಅಷ್ಟಕ್ಕೂ ಕಿಚ್ಚನ ಆ ನಿರ್ಧಾರ ಏನೂ ಗೊತ್ತಾ? ಕಿಚ್ಚ ಸುದೀಪ್. ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಅನ್ನೋ ಪದಕ್ಕೆ ಒಂದು ತೂಕವಿದೆ. ಸದೀಪ್‌ ಸಿನಿಮಾ, ತಮ್ಮ ವಿಭಿನ್ನ ವ್ಯಕ್ತಿತ್ವದ ಮೂಲಕ ಅಭಿಮಾನವನ್ನ ಗಳಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಮಾತ್ರ ಸುದೀಪ್‌ ಕಿಚ್ಚು ಹರಿಸಿಲ್ಲ, ಪರಭಾಷೆಗಳಲ್ಲೂ ಕಿಚ್ಚ ತಮ್ಮ ಖದರ್ ತೋರಿಸಿದ್ದಾರೆ. ಆದ್ರೀಗ ಕಿಚ್ಚನ ಅಭಿಮಾನಿಗಳಿಗೆ […]

ಗೆಸ್ಟ್ ರೋಲ್, ವಿಲನ್ ಆಗೋದು ಇಷ್ಟವಿಲ್ಲ ಪರಭಾಷೆಯಲ್ಲಿ ನಟಿಸಬೇಡಿ ಅಂತಾ ಕಿಚ್ಚನ ಫ್ಯಾನ್ಸ್ ಪಟ್ಟು
Follow us
ಸಾಧು ಶ್ರೀನಾಥ್​
|

Updated on:Jan 20, 2020 | 12:53 PM

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆ ಅಭಿಮಾನಿಗಳಲ್ಲಿ ಆತಂಕ ಹುಟ್ಟು ಹಾಕಿದೆ. ಕಿಚ್ಚನ ನಿರ್ಧಾರ ಬದಲಿಸುವಂತೆ ಅಭಿಮಾನಿಗಳು ಒತ್ತಾಯಿಸ್ತಿದ್ದಾರೆ. ಅದಕ್ಕಾಗಿ ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ದಾರೆ. ಅಷ್ಟಕ್ಕೂ ಕಿಚ್ಚನ ಆ ನಿರ್ಧಾರ ಏನೂ ಗೊತ್ತಾ?

ಕಿಚ್ಚ ಸುದೀಪ್. ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಅನ್ನೋ ಪದಕ್ಕೆ ಒಂದು ತೂಕವಿದೆ. ಸದೀಪ್‌ ಸಿನಿಮಾ, ತಮ್ಮ ವಿಭಿನ್ನ ವ್ಯಕ್ತಿತ್ವದ ಮೂಲಕ ಅಭಿಮಾನವನ್ನ ಗಳಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಮಾತ್ರ ಸುದೀಪ್‌ ಕಿಚ್ಚು ಹರಿಸಿಲ್ಲ, ಪರಭಾಷೆಗಳಲ್ಲೂ ಕಿಚ್ಚ ತಮ್ಮ ಖದರ್ ತೋರಿಸಿದ್ದಾರೆ. ಆದ್ರೀಗ ಕಿಚ್ಚನ ಅಭಿಮಾನಿಗಳಿಗೆ ಕಿಚ್ಚನ ನಡೆ ಇಷ್ಟವಾಗ್ತಿಲ್ಲ.

ಕಿಚ್ಚ ಸುದೀಪ್​ಗೆ ಅಪಾರವಾದ ಅಭಿಮಾನಿ ಬಳಗ ಇದೆ. ಆದ್ರೆ ಅವ್ರಿಗೆ ಕಿಚ್ಚ ಪರಭಾಷೆ ಸಿನಿಮಾಗಳಲ್ಲಿ ನಟಿಸೋದು ಇಷ್ಟವಿಲ್ಲ. ಈಗಾಗ್ಲೆೇ ತಮಿಳು, ತೆಲುಗು, ಬಾಲಿವುಡ್​ನಲ್ಲಿ ಕಿಚ್ಚ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಆದ್ರೆ ಹೆಚ್ಚಾಗಿ ಸುದೀಪ್ ಅಥಿತಿ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದಾರೆ. ಅಲ್ಲದೆ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅದ್ರೆ ಇದು ಸುದೀಪ್ ಅಭಿಮಾನಿಗಳಿಗೆ ಕಿರಿಕಿರಿ ಉಂಟು ಮಾಡಿದೆಯಂತೆ. ಹೀಗಾಗಿ ಬೇರೆ ಭಾಷೆ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಡಿ ಅಂತ ಕಿಚ್ಚನ ಅಭಿಮಾನಿಗಳು ಅಭಿಮಾನದಿಂದಲೇ ಪಟ್ಟು ಹಿಡಿದ್ದಾರೆ.

ಅಂದಹಾಗೇ ನಟ ಸುದೀಪ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಅಂತ ಹೇಳಲಾಗಿತ್ತು. ಆದ್ರೆ ಈ ಸುದ್ದಿಗೆ ಕಿಚ್ಚು ಫುಲ್ ಸ್ಟಾಪ್ ಇಟ್ಟಿದ್ದಾರೆ. ರಾಜಮೌಳಿಯಿಂದ ಕರೆ ಬಂದಿಲ್ಲ. ಮತ್ತು ಆರ್‌ಆರ್‌ಆರ್ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಅನ್ನೋದನ್ನ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಕಿಚ್ಚನ ಈ ಟ್ವೀಟ್‌ ನೋಡಿದ ಅಭಿಮಾನಿಗಳು ಫುಲ್​ ಖುಷಿಯಲ್ಲಿದ್ದಾರೆ. ಕಾರಣ ಸುದೀಪ್​ ಮತ್ತೊಂದು ಪರಭಾಷಾ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಅನ್ನೋದು. ಯಾಕಂದ್ರೆ ತಮ್ಮ ನೆಚ್ಚಿನ ನಾಯಕ ಪರಭಾಷೆಗಳಲ್ಲಿ ವಿಲನ್​ ಆಗೋದು ಕಿಚ್ಚನ ಅಭಿಮಾನಿಗಳಿಗೆ ಬಿಲ್​ಖುಲ್ ಇಷ್ಟ ಇಲ್ಲವಂತೆ.

ತೆಲುಗಿನ ಈಗ, ತಮಿಳಿನ ಪುಲಿ, ಬಾಲಿವುಡ್​ನ ದಬಾಂಗ್ 3, ಸೈರಾ ಸಿನಿಮಾಗಳಲ್ಲಿ ಸುದೀಪ್​ ನೆಗೆಟಿವ್​ ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ವಿಲನ್​ ಆಗಿ ಪರಭಾಷಾ ನಟರ ಕೈಯಲ್ಲಿ ಒದೆ ತಿನ್ನೋದನ್ನ ನೋಡಲು ಕಿಚ್ಚನ ಫ್ಯಾನ್ಸ್​ಗೆ ಇಷ್ಟವಿಲ್ಲವಂತೆ. ಹಾಗಾಗಿ ಇನ್ಮುಂದೆ ಪರಭಾಷಾ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಬೇಡಿ. ಹಾಲಿವುಡ್​ ಸಿನಿಮಾಗಳಲ್ಲಿ ಅಭಿನಯಿಸಿ ಕಾಲರ್​ ಎತ್ತಿಕೊಂಡು ತಿರುಗಾಡುತ್ತೇವೆ ಅಂತ ಕಿಚ್ಚನ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.

ಅಷ್ಟೇ ಅಲ್ಲ ಸೋಷಿಯಲ್​ ಮಿಡಿಯಾದಲ್ಲಿ ಸಾಲು ಸಾಲು ಟ್ಟೀಟ್​ಗಳನ್ನ ಮಾಡಿ ಕಿಚ್ಚನಿಗೆ ಟ್ಯಾಗ್ ಮಾಡಿದ್ದಾರೆ. ಆದ್ರೆ ಅಭಿಮಾನಿಗಳ ಈ ಆಸೆಗೆ ಕಿಚ್ಚ ಸುದೀಪ್ ತಲೆಬಾಗ್ತಾರಾ? ಪರಭಾಷೆಗಳಲ್ಲಿ ಕಿಚ್ಚ ಅತಿಥಿ ಪಾತ್ರದಲ್ಲಿ ಅಭಿನಯಿಸೋದಿಲ್ವಾ? ಅನ್ನೋದನ್ನ ಕಾದು ನೋಡ್ಬೇಕಿದೆ.

Published On - 12:52 pm, Mon, 20 January 20

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ