ಹಣ ವಂಚನೆ ಆರೋಪ: ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್ಐಆರ್​ ದಾಖಲು

| Updated By: ರಶ್ಮಿ ಕಲ್ಲಕಟ್ಟ

Updated on: Dec 25, 2020 | 12:23 PM

2018ರಲ್ಲೇ ಕೆ. ಮಂಜು1ಕೋಟಿ 10.5 ಲಕ್ಷ ಹಣ ಹಾಗೂ ರಾಜಗೋಪಾಲ್ 68 ಲಕ್ಷ ಪಡೆದಿದ್ದಾರೆ. ಹಣ ಕೇಳಲು ಹೋದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ‘ಹೆಬ್ಬಟ್ ರಾಮಕ್ಕ’ ಚಿತ್ರದ ನಿರ್ಮಾಪಕ ಎಸ್​.ಎ ಪುಟ್ಟರಾಜು ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 420, 506, 34ರಡಿ ಪ್ರಕರಣ ದಾಖಲಾಗಿದೆ.

ಹಣ ವಂಚನೆ ಆರೋಪ: ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್ಐಆರ್​ ದಾಖಲು
ನಿರ್ಮಾಪಕರಾದ ಕೆ. ಮಂಜು ಮತ್ತು ಎಸ್.ಎ ಪುಟ್ಟರಾಜು
Follow us on

ಬೆಂಗಳೂರು: ಹಣ ಪಡೆದು ವಂಚನೆ ಮಾಡಿರುವ ಹಿನ್ನೆಯಲ್ಲಿ ಸ್ಯಾಂಡಲ್​ವುಡ್ ಖ್ಯಾತ ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್​ಐಆರ್​ ದಾಖಲಾಗಿದೆ. ‘ಹೆಬ್ಬಟ್ ರಾಮಕ್ಕ’ ಚಿತ್ರದ ನಿರ್ಮಾಪಕ ಎಸ್.ಎ ಪುಟ್ಟರಾಜು ಅವರಿಂದ ದೂರು ದಾಖಲಿಸಿರುವುದಾಗಿ ಮೂಲಗಳು ತಿಳಿಸಿವೆ.

2018 ರಲ್ಲಿ ಆರೋಪಿ ರಾಜಗೋಪಾಲ್ ಬಿ.ಎಂ ಹೊಸಕೋಟೆ (ತಾ) ಸೊಣ್ಣೇನಹಳ್ಳಿ (ಗ್ರಾ) ಸರ್ವೆ ನಂ 7/3 ರ 18.3/4 ಗುಂಟೆ ಜಮೀನನ್ನು ಮಾರುತ್ತಿದ್ದರು. ಈ ಕುರಿತಾಗಿ ಅಡ್ವಾನ್ಸ್ ನೀಡಿದ್ದೇನೆ. ಅಷ್ಟರಲ್ಲಿ ಕೆ.ಮಂಜು ಅಗ್ರಿಮೆಂಟ್ ಮಾಡಿ ಕೊಂಡಿದ್ದಾರೆ. ಬಳಿಕ ರಾಜಗೋಪಾಲ್ ಬಿ.ಎಂ, ರಮೇಶ್ ಬಾಬು, ವಿಜಯಲಕ್ಷ್ಮಿ ಸೇರಿ ರಿಜಿಸ್ಟರ್ ಮಾಡಿ ಕೊಡುವುದಾಗಿ ಹೇಳಿಕೆ ನೀಡಿದ್ದರು. ಮಂಜು 1ಕೋಟಿ 10.5 ಲಕ್ಷ  ಹಾಗೂ ರಾಜಗೋಪಾಲ್ 68 ಲಕ್ಷ ಹಣ ಪಡೆದಿದ್ದಾರೆ.  ಇನ್ನೂ ವಾಪಾಸ್ಸು ನೀಡಿಲ್ಲ. ಕೇಳಲು ಹೋದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪುಟ್ಟರಾಜು ದೂರಿನಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕೆ.ಮಂಜು ವಿರುದ್ಧ ಐಪಿಸಿ ಸೆಕ್ಷನ್ 420, 506, 34ರಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಐಡಿಬಿಐ ಬ್ಯಾಂಕ್​ನಿಂದ 65.33ಕೋಟಿ ರೂ.ಸಾಲ ಪಡೆದು ವಂಚಿಸಿದ ಉದ್ಯಮಿಗಳಿಗೆ ಬಲೆ ಬೀಸಿದ ಸಿಬಿಐ; ಎಫ್​ಐಆರ್ ದಾಖಲು

Published On - 12:22 pm, Fri, 25 December 20