CCB ಬಂಧನದಲ್ಲಿ ನಟಿ ರಾಗಿಣಿ: ಸಾಮಾನ್ಯ ಆರೋಪಿ, ಯಾವುದೇ VIP ಟ್ರೀಟ್ಮೆಂಟ್ ಇಲ್ಲ

[lazy-load-videos-and-sticky-control id=”Z8yJM4BHOlE”] ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್‌ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ CCB  ಇಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ವಿಚಾರಣೆಗೆಂದು CCB ಕಚೇರಿಗೆ ಬಂದಿದ್ದ ರಾಗಿಣಿ ಯಾವುದೇ ಲಗೇಜ್ ತಂದಿರಲಿಲ್ಲ, ಹೀಗಾಗಿ ಧರಿಸಿದ್ದ ಸೀರೆಯಲ್ಲೇ ಇದ್ದಾರೆ. ರಾಗಿಣಿಗೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ರೂಮ್ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ ಇಬ್ಬರು ಮಹಿಳಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 3 ಜನ ಇರಬಹುದಾದ ಕೋಣೆಯಲ್ಲಿ ರಾತ್ರಿ ಕಳೆದ ರಾಗಿಣಿಗೆ ಯಾವುದೇ VIP ಟ್ರೀಟ್ಮೆಂಟ್ […]

CCB ಬಂಧನದಲ್ಲಿ ನಟಿ ರಾಗಿಣಿ: ಸಾಮಾನ್ಯ ಆರೋಪಿ, ಯಾವುದೇ VIP ಟ್ರೀಟ್ಮೆಂಟ್ ಇಲ್ಲ

Updated on: Sep 05, 2020 | 1:11 PM

[lazy-load-videos-and-sticky-control id=”Z8yJM4BHOlE”]

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್‌ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ CCB  ಇಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.

ವಿಚಾರಣೆಗೆಂದು CCB ಕಚೇರಿಗೆ ಬಂದಿದ್ದ ರಾಗಿಣಿ ಯಾವುದೇ ಲಗೇಜ್ ತಂದಿರಲಿಲ್ಲ, ಹೀಗಾಗಿ ಧರಿಸಿದ್ದ ಸೀರೆಯಲ್ಲೇ ಇದ್ದಾರೆ. ರಾಗಿಣಿಗೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ರೂಮ್ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ ಇಬ್ಬರು ಮಹಿಳಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

3 ಜನ ಇರಬಹುದಾದ ಕೋಣೆಯಲ್ಲಿ ರಾತ್ರಿ ಕಳೆದ ರಾಗಿಣಿಗೆ ಯಾವುದೇ VIP ಟ್ರೀಟ್ಮೆಂಟ್ ನೀಡಿಲ್ಲ. ಬದಲಿಗೆ ಸಾಮಾನ್ಯ ಆರೋಪಿಗಳ ರೀತಿಯಲ್ಲಿ ರೂಮ್‌ನಲ್ಲಿ ರಾತ್ರಿ ಕಳೆದಿದ್ದಾರೆ. ಇನ್ನು ರೂಮ್‌ನಲ್ಲಿ ಮಂಚ, ಫ್ಯಾನ್, ರೆಸ್ಟ್ ರೂಮ್ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ ಊಟಕ್ಕಾಗಿ ಅನ್ನ, ಸಾಂಬಾರ್, ಚಪಾತಿ, ಪಲ್ಯ ನೀಡಿದ್ದಾರೆ.

ಇಂದೂ ಸಹ ನಟಿ ರಾಗಿಣಿಯನ್ನು CCB ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲ್ಲಿದ್ದು, ಸ್ಫೋಟಕ ಮಾಹಿತಿಗಳು ಹೊರ ಬೀಳುವ ನಿರೀಕ್ಷೆಯಿದೆ.

Published On - 7:13 am, Sat, 5 September 20