[lazy-load-videos-and-sticky-control id=”qYeH8SvnGnI”]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಳಿಬಂದಿರುವ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ಹಿರಿಯ ಕಲಾವಿದ ದೊಡ್ಡಣ್ಣ ಅತೀವ ಬೇಸರ ವ್ಯಕ್ತಪಡಿಸಿದ್ದು, ಸ್ಯಾಂಡಲ್ವುಡ್ ಕೇಂದ್ರ ಭಾಗವಾದ ಗಾಂಧಿನಗರ ಅಂತೂ ಖಂಡಿತಾ ಗಾಂಜಾ ನಗರ ಆಗಿಲ್ಲ ಎಂದಿದ್ದಾರೆ.
ಡ್ರಗ್ಸ್ ಕೇಸ್ನಲ್ಲಿ ಸತ್ತವರ ಹೆಸರು ತೆಗೆದಿದ್ದು ನೋವಾಗಿದೆ. ಸತ್ಯವಾಗಲೂ ಚಿರು ಹೆಸರು ಎತ್ತಿದ್ದು ತುಂಬಾ ನೋವಾಗಿದೆ. ಆ ಹೆಣ್ಣು ಮಗಳು ಎಷ್ಟೂ ಅಂತಾ ಅಳಬೇಕು ಎಂದು ಹಿರಿಯ ನಟ ದೊಡ್ಡಣ್ಣ ಪೇಚಾಡಿದ್ದಾರೆ.
ಯುವಜನತೆಯಿಂದ ಈ ರೀತಿ ಆಗಿದೆ
ನಮ್ಮಲ್ಲಿ ಗುರುಕುಲ ಇತ್ತು, ದೊಡ್ಡವರಿಗೆ ಗೌರವ ಕೊಡ್ತಿದ್ದೆವು. ನಾವೆಲ್ಲಾ ಭಯದಿಂದ ಬದುಕುತ್ತಿದ್ದೆವು. ನಾವೆಲ್ಲಾ ಸರ್ಕಾರಿ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದವರು. ನಮಗೆ ಕಲೆ ಅನ್ನೋದು ತುತ್ತಿನ ಚೀಲ ತುಂಬಿಸೋದಾಗಿತ್ತು ಎಂದು ದೊಡ್ಡಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.
ನಮ್ಮ ಕಾಲದಲ್ಲಿ ಯಾರು ಸಹ ಈ ರೀತಿ ಇರಲಿಲ್ಲ. ಈಗಿನ ಯುವಜನತೆಯಿಂದ ಈ ರೀತಿ ಆಗಿದೆ. ತಪ್ಪು ಯಾರೇ ಮಾಡಿದ್ರು ಶಿಕ್ಷೆ ಆಗಲೇ ಬೇಕು. ಡ್ರಗ್ಸ್ ಬಗ್ಗೆ ನಮ್ಮಗೆ ಅಷ್ಟೋಂದು ಮಾಹಿತಿ ಇಲ್ಲ. ಅದರ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.
Published On - 12:41 pm, Wed, 2 September 20