ಕಪಿಲ್ ಶರ್ಮಾ ಭೇಟಿ ಮಾಡಿದ ಗಣೇಶ್; ಜನಪ್ರಿಯ ಶೋಗೆ ಗೋಲ್ಡನ್ ಸ್ಟಾರ್ ಅತಿಥಿ

ಗಣೇಶ್ ಅವರು ‘ದಿ ಸ್ಟೋರಿ ಆಫ್ ರಾಯಗಢ’ ಹಾಗೂ ‘ಬಾನದಾರಿಯಲ್ಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರು ಕಪಿಲ್ ಶರ್ಮಾ ಅವರನ್ನು ಭೇಟಿ ಮಾಡಿದ್ದು, ‘ದಿ ಕಪಿಲ್ ಶರ್ಮಾ ಶೋ’ನ ಭಾಗವಾಗುತ್ತಿರುವಾಗಿ ಹೇಳಿದ್ದಾರೆ.

ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ಕೆಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ಒಂದು ದೊಡ್ಡ ಅಪ್​ಡೇಟ್ ನೀಡಿದ್ದಾರೆ. ಬಾಲಿವುಡ್​ನ ಖ್ಯಾತ ಕಾಮಿಡಿಯಿನ್ ಕಪಿಲ್ ಶರ್ಮಾ (Kapil Sharma) ಅವರನ್ನು ಭೇಟಿ ಮಾಡಿದ್ದಾರೆ. ಈ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು ಒಂದು ದೊಡ್ಡ ಅಪ್​ಡೇಟ್ ನೀಡುವುದಾಗಿ ತಿಳಿಸಿದ್ದಾರೆ. ಅದೇನು ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

2022ರಲ್ಲಿ ರಿಲೀಸ್ ಆದ ‘ಗಾಳಿಪಟ 2’ ಸಿನಿಮಾ ಮೆಚ್ಚುಗೆ ಪಡೆದುಕೊಂಡಿತು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಗೆಲುವು ಕಂಡಿತು. ಅದೇ ವರ್ಷ ತೆರೆಗೆ ಬಂದ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ಪ್ರೇಕ್ಷಕರಿಗೆ ಕಾಮಿಡಿ ಇಷ್ಟ ಆಯಿತು. ಸದ್ಯ ಗಣೇಶ್ ಅವರು ‘ದಿ ಸ್ಟೋರಿ ಆಫ್ ರಾಯಗಢ’ ಹಾಗೂ ‘ಬಾನದಾರಿಯಲ್ಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರು ಕಪಿಲ್ ಶರ್ಮಾ ಅವರನ್ನು ಭೇಟಿ ಮಾಡಿದ್ದು, ‘ದಿ ಕಪಿಲ್ ಶರ್ಮಾ ಶೋ’ನ ಭಾಗವಾಗುತ್ತಿರುವಾಗಿ ಹೇಳಿದ್ದಾರೆ.

ಈ ಬಗ್ಗೆ ಗಣೇಶ್ ವಿಡಿಯೋ ಹಂಚಿಕೊಂಡಿದ್ದಾರೆ. ‘ಎಲ್ಲಾ ಕನಸುಗಳಿಗೆ ಅರ್ಥವಿದೆ’ ಎನ್ನುವ ವಾಕ್ಯದೊಂದಿಗೆ ವಿಡಿಯೋ ಆರಂಭ ಆಗುತ್ತದೆ. ಗಣೇಶ್ ಅವರು ಮೇಕಪ್ ಮಾಡಿಕೊಂಡು ಕಾರಿನಲ್ಲಿ ತೆರಳುತ್ತಾರೆ. ನಂತರ ಅವರು ಭೇಟಿ ಮಾಡೋದು ಕಪಿಲ್ ಶರ್ಮಾ ಅವರನ್ನು. ವಿಡಿಯೋ ಕೊನೆಯಲ್ಲಿ ‘ಎಗ್ಸೈಟಿಂಗ್ ಆಗಿರುವ ವಿಚಾರ ಶೀಘ್ರದಲ್ಲೇ ಬರಲಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ಕ್ಯಾಪ್ಶನ್ ನೀಡಿರುವ ಅವರು, ‘ನನ್ನ ಫೇವರಿಟ್​ ಶೋನ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ. ಕಪಿಲ್ ಶರ್ಮಾ ಸರ್ ಧನ್ಯವಾದ’ ಎಂದಿದ್ದಾರೆ.

ಇದನ್ನೂ ಓದಿ: ‘ತ್ರಿಬಲ್​ ರೈಡಿಂಗ್​’ ಹೊರಟ ಗಣೇಶ್​ ಎದುರು ಆಶಿಕಾ-ಇಶಾನಾ ‘ರೇಮೊ’ ಪೈಪೋಟಿ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 (ಸಿಸಿಎಲ್​ 2023) (CCL 2023) ಫೆಬ್ರವರಿ 18ರಿಂದ ಆರಂಭಗೊಳ್ಳುತ್ತಿದೆ. ಮಾರ್ಚ್​ 19ಕ್ಕೆ ಫೈನಲ್ ನಡೆಯಲಿದೆ. ಭಾರತ ಚಿತ್ರರಂಗದ ಅನೇಕ ಕಲಾವಿದರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಸಲುವಾಗಿ ಅವರು ಕಪಿಲ್ ಶರ್ಮಾ ವೇದಿಕೆ ಏರುತ್ತಿರಬಹುದು ಅನ್ನೋದು ಅನೇಕರ ಊಹೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:04 pm, Thu, 9 February 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us