‘ತ್ರಿಬಲ್​ ರೈಡಿಂಗ್​’ ಹೊರಟ ಗಣೇಶ್​ ಎದುರು ಆಶಿಕಾ-ಇಶಾನಾ ‘ರೇಮೊ’ ಪೈಪೋಟಿ

Tribble Riding | Raymo: ಟ್ರೇಲರ್​ ಮೂಲಕ ‘ತ್ರಿಬಲ್​ ರೈಡಿಂಗ್​’, ‘ರೇಮೊ’, ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾಗಳು ನಿರೀಕ್ಷೆ ಮೂಡಿಸಿವೆ. ನ.25ರಂದು ಈ ಚಿತ್ರಗಳು ತೆರೆಕಾಣುತ್ತಿವೆ.

‘ತ್ರಿಬಲ್​ ರೈಡಿಂಗ್​’ ಹೊರಟ ಗಣೇಶ್​ ಎದುರು ಆಶಿಕಾ-ಇಶಾನಾ ‘ರೇಮೊ’ ಪೈಪೋಟಿ
ರೆಮೋ, ತ್ರಿಬಲ್​ ರೈಡಿಂಗ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 24, 2022 | 3:08 PM

ಕನ್ನಡ ಚಿತ್ರರಂಗಕ್ಕೀಗ (Sandalwood) ಸುವರ್ಣ ಕಾಲ. ಹಲವು ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಆದರೂ ಗೆಲುವು ಸಿಗುವುದು ಕೆಲವೇ ಮಂದಿಗೆ ಮಾತ್ರ. ಈ ಹಿಂದಿನ ವಾರಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಎದುರಲ್ಲಿ ಹೊಸ ಚಿತ್ರಗಳು ಪೈಪೋಟಿಗೆ ಇಳಿಯುತ್ತಿವೆ. ಈ ಶುಕ್ರವಾರ (ನ.25) ಕೂಡ ಕನ್ನಡದ ಕೆಲವು ಸಿನಿಮಾಗಳು ತೆರೆಕಾಣುತ್ತಿವೆ. ಪರಭಾಷೆಯಲ್ಲೂ ಸ್ಟಾರ್​ ಚಿತ್ರಗಳು ಬಿಡುಗಡೆ ಆಗುತ್ತಿವೆ. ‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ಅಭಿಮಾನಿಗಳು ‘ತ್ರಿಬಲ್​ ರೈಡಿಂಗ್​’ ನೋಡಲು ಕಾದಿದ್ದಾರೆ. ಪವನ್​ ಒಡೆಯರ್​ ನಿರ್ದೇಶನದ ‘ರೇಮೊ’ (Raymo) ಚಿತ್ರ ಕೂಡ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿದೆ. ಈ ವಾರ ತೆರೆಕಾಣುತ್ತಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ..

‘ತ್ರಿಬಲ್​ ರೈಡಿಂಗ್​’

ನಟ ಗಣೇಶ್​ ಅವರು ಪ್ರತಿ ಸಿನಿಮಾದಲ್ಲೂ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲು ಪ್ರಯತ್ನಿಸುತ್ತಾರೆ. ಅವರು ಸಿನಿಮಾಗಳಲ್ಲಿ ಏನಾದರೂ ವಿಶೇಷ ಇದ್ದೇ ಇರುತ್ತದೆ ಎಂಬ ಭರವಸೆ ಪ್ರೇಕ್ಷಕರಿಗೆ ಇದೆ. ಅವರು ನಟಿಸಿರುವ ‘ತ್ರಿಬಲ್​ ರೈಡಿಂಗ್​’ ಚಿತ್ರದ ಟ್ರೇಲರ್​ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಅವರಿಗೆ ಮೂವರು ನಾಯಕಿಯರು. ಮೇಘಾ ಶೆಟ್ಟಿ, ರಚನಾ ಇಂದರ್​, ಅದಿತಿ ಪ್ರಭುದೇವ ಜೊತೆ ಗಣೇಶ್​ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಹೇಶ್​ ಗೌಡ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ
Image
DK Shivakumar: ‘ನಾನು ಮತ್ತು ರವಿಚಂದ್ರನ್​ ಓದಿದ್ದು ಒಂದೇ ಶಾಲೆಯಲ್ಲಿ’; ‘ರೇಮೊ’ ವೇದಿಕೆಯಲ್ಲಿ ಡಿಕೆಶಿ ಮಾತು
Image
Sadhu Kokila: ‘ತ್ರಿಬಲ್​ ರೈಡಿಂಗ್​’ ನಟಿಯರ ಜೊತೆ ವೇದಿಕೆ ಮೇಲೆ ಸಾಧು ಕೋಕಿಲ ಬಿಂದಾಸ್​ ಡ್ಯಾನ್ಸ್​
Image
‘ತ್ರಿಬಲ್​ ರೈಡಿಂಗ್’ ಸಿನಿಮಾ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ
Image
40 ಲಕ್ಷ​ ವೀವ್ಸ್​ ಗಡಿಯಲ್ಲಿ ‘ಯಟ್ಟ ಯಟ್ಟ’ ಹಾಡು; ಗಣಿ​ ಜತೆ ಅದಿತಿ, ರಚನಾ, ಮೇಘಾ ‘ತ್ರಿಬಲ್​​ ರೈಡಿಂಗ್​’

ಇಶಾನ್​-ಆಶಿಕಾ ಜೋಡಿಯ ‘ರೇಮೊ’:

ಪವನ್​ ಒಡೆಯರ್​ ಅವರು ಲವ್​ ಸ್ಟೋರಿ ಸಿನಿಮಾಗಳನ್ನು ತೆರೆಗೆ ತರುವಲ್ಲಿ ಸಿದ್ಧಹಸ್ತರು. ಈ ಬಾರಿ ಅವರು ‘ರೇಮೊ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್​ ಮತ್ತು ಇಶಾನ್​ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ನಲ್ಲಿ ಕಥೆಯ ಎಳೆ ಬಿಟ್ಟುಕೊಡಲಾಗಿದೆ. ಸಿ.ಆರ್​. ಮನೋಹರ್​ ಅವರು ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

‘ಸದ್ದು ವಿಚಾರಣೆ ನಡೆಯುತ್ತಿದೆ’:

ರಾಕೇಶ್​ ಮಯ್ಯ, ಪಾವನಾ ಗೌಡ, ಮಧು ನಂದನ್​, ಅಚ್ಯುತ್​ ಕುಮಾರ್​ ಮುಂತಾದವರು ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಒಂದು ಸಸ್ಪೆನ್ಸ್​ ಥ್ರಿಲ್ಲರ್​ ಕಥೆ ಇದೆ. ಜಾತಿ ಪಿಡುಗಿನಂತಹ ಗಂಭೀರ ವಿಷಯವೂ ಚಿತ್ರದಲ್ಲಿದೆ ಎಂಬದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಈ ಚಿತ್ರ ಕೂಡ ನಿರೀಕ್ಷೆ ಮೂಡಿಸಿದೆ.

ಫ್ಯಾಂಟಸಿ ಕಥಾಹಂದರದ ‘ಭೇಡಿಯಾ’:

ವರುಣ್​ ಧವನ್ ಅವರು ‘ಭೇಡಿಯಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ವರ್ಷ ಗೆಲುವು ಕಂಡ ಬಾಲಿವುಡ್​ ಸಿನಿಮಾಗಳ ಸಂಖ್ಯೆ ಕಡಿಮೆ. ‘ಭೇಡಿಯಾ’ ಸೂಪರ್​ ಹಿಟ್​ ಆಗಬಹುದು ಎಂಬ ನಿರೀಕ್ಷೆ ಇದೆ. ‘ಸ್ಪೈಡರ್​ ಮ್ಯಾನ್​’ ರೀತಿಯ ಫ್ಯಾಂಟಸಿ ಕಥೆ ಈ ಚಿತ್ರದಲ್ಲಿ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ