Abhishek Ambareesh: ‘ಅಭಿಷೇಕ್​ ಮದುವೆ ವದಂತಿ ಸುಳ್ಳು’; ಟಿವಿ9 ಡಿಜಿಟಲ್​ಗೆ ಸ್ಪಷ್ಟನೆ ನೀಡಿದ ಸುಮಲತಾ ಅಂಬರೀಷ್​

Abhishek Ambareesh Engagement Rumors: ಅಭಿಷೇಕ್​ ಅಂಬರೀಷ್​ ಅವರ ನಿಶ್ಚಿತಾರ್ಥದ ಕುರಿತು ಸಾಕಷ್ಟು ಅಂತೆ-ಕಂತೆಗಳು ಹಬ್ಬಿವೆ. ಆದರೆ ಇದನ್ನು ಸ್ವತಃ ಸುಮಲತಾ ಅಂಬರೀಷ್​ ಅವರು ತಳ್ಳಿ ಹಾಕಿದ್ದಾರೆ.

Abhishek Ambareesh: ‘ಅಭಿಷೇಕ್​ ಮದುವೆ ವದಂತಿ ಸುಳ್ಳು’; ಟಿವಿ9 ಡಿಜಿಟಲ್​ಗೆ ಸ್ಪಷ್ಟನೆ ನೀಡಿದ ಸುಮಲತಾ ಅಂಬರೀಷ್​
ಅಭಿಷೇಕ್. ಸುಮಲತಾ ಅಂಬರೀಷ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 24, 2022 | 2:02 PM

ಕಳೆದ ಕೆಲವು ದಿನಗಳಿಂದ ನಟ ಅಭಿಷೇಕ್​ ಅಂಬರೀಷ್ (Abhishek Ambareesh) ಬಗ್ಗೆ ವದಂತಿ ಹಬ್ಬಿದೆ. ಶೀಘ್ರದಲ್ಲೇ ಅವರ ನಿಶ್ಚಿತಾರ್ಥ (Abhishek Ambareesh Engagement) ನೆರವೇರುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಆ ಸುದ್ದಿಯನ್ನು ಸುಮಲತಾ ಅಂಬರೀಷ್​ ಅವರು ತಳ್ಳಿ ಹಾಕಿದ್ದಾರೆ. ನಿಶ್ಚಿತಾರ್ಥಕ್ಕೆ ತಯಾರಿ ನಡೆಯುತ್ತಿದೆ ಎಂಬ ವರದಿ ನಿಜವಲ್ಲ ಎಂದು ಅವರು ಟಿವಿ9 ಡಿಜಿಟಲ್​ಗೆ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ. ಅಭಿಷೇಕ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಏಕಾಏಕಿ ಮದುವೆ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ವದಂತಿ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿತ್ತು. ಈಗ ಸ್ವತಃ ಸುಮಲತಾ ಅಂಬರೀಷ್​ (Sumalatha Ambareesh) ಅವರು ಪ್ರತಿಕ್ರಿಯೆ ನೀಡಿರುವುದರಿಂದ ನಿಶ್ಚಿತಾರ್ಥ ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಸುಮಲತಾ ಅಂಬರೀಷ್​ ಹೇಳಿದ್ದೇನು?

ಮಗನ ಎಂಗೇಜ್​ಮೆಂಟ್​ ಬಗ್ಗೆ ಹರಡಿರುವ ಸುದ್ದಿಯ ಕುರಿತು ಸುಮಲತಾ ಅಂಬರೀಷ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಕಳೆದ ಎರಡು ವರ್ಷಗಳಿಂದಲೂ ಇಂಥ ವದಂತಿ ಹರಡುತ್ತಲೇ ಇದೆ. ಡಿಸೆಂಬರ್​ನಲ್ಲಿ ನಿಶ್ಚಿತಾರ್ಥ ನಡೆಯುತ್ತದೆ ಎಂಬುದೆಲ್ಲ ಸುಳ್ಳು. ಆ ರೀತಿ ಯಾವುದೇ ಪ್ಲ್ಯಾನ್​ ಇಲ್ಲ’ ಎಂದು ಸುಮಲತಾ ಅಂಬರೀಷ್​ ಹೇಳಿದ್ದಾರೆ.

ಇದನ್ನೂ ಓದಿ
Image
‘ಅಂಬರೀಷ್​​ಗೆ ಅನಾರೋಗ್ಯ ಉಂಟಾದಾಗ ಬದುಕಿಸಿದವರು ಇವರೇ’; ಹಳೆ ಘಟನೆ ನೆನೆದ ಸುಂದರ್ ರಾಜ್
Image
ಅಂಬಿ ಸಮಾಧಿಗೆ ಎಡೆ ಇಟ್ಟು ನಮಿಸಿದ ಸುಮಲತಾ ಅಂಬರೀಷ್​; ಸಾಥ್​ ನೀಡಿದ ರಾಕ್​ಲೈನ್​ ವೆಂಕಟೇಶ್​
Image
‘ರೆಬೆಲ್​ ಸ್ಟಾರ್​​’ 70ನೇ ಜನ್ಮದಿನಕ್ಕೆ ಕೇಕ್​ ಕತ್ತರಿಸಿ ವಿಶೇಷ ಮಾತುಗಳನ್ನು ಹಂಚಿಕೊಂಡ ಸುಮಲತಾ ಅಂಬರೀಷ್​
Image
‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್​ ನೆನೆದು ರಾಕ್​ಲೈನ್​ ಭಾವುಕ

ಹಬ್ಬಿರುವ ವದಂತಿ ಏನು?

ಅಭಿಷೇಕ್​ ಅಂಬರೀಷ್​ ಅವರ ನಿಶ್ಚಿತಾರ್ಥದ ಕುರಿತು ಸಾಕಷ್ಟು ಅಂತೆ-ಕಂತೆಗಳು ಹಬ್ಬಿವೆ. ಅರಮನೆ ಮೈದಾನದಲ್ಲಿ ಎಂಗೇಜ್​ ಮೆಂಟ್​ ನಡೆಯಲಿದೆಯಂತೆ. ಅಭಿಷೇಕ್​ ಕೈ ಹಿಡಿಯುವ ಹುಡುಗಿ ಮಾಡೆಲ್​ ಆಗಿದ್ದಾರಂತೆ. ಎಲ್ಲ ತಯಾರಿಯೂ ಗೌಪ್ಯವಾಗಿ ನಡೆಯುತ್ತಿದ್ದು, ಅರಮನೆ ಮೈದಾನದಲ್ಲಿ ಡಿಸೆಂಬರ್​ 11ರಂದು ಎಂಗೇಜ್​ಮೆಂಟ್​ ನಡೆಯಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅದನ್ನು ಸುಮಲತಾ ಅಂಬರೀಷ್​ ಅವರು ತಳ್ಳಿ ಹಾಕಿದ್ದಾರೆ.

ಸಿನಿಮಾ ಕೆಲಸಗಳಲ್ಲಿ ಅಭಿಷೇಕ್​ ಅಂಬರೀಷ್​ ಬ್ಯುಸಿ:

ಅಂಬರೀಷ್​ ಮತ್ತು ಸುಮಲತಾ ರೀತಿಯೇ ಅವರ ಪುತ್ರ ಅಭಿಷೇಕ್​ ಅಂಬರೀಷ್​ ಕೂಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅವರ ಚೊಚ್ಚಲ ಸಿನಿಮಾ ‘ಅಮರ್​’ 2019ರಲ್ಲಿ ತೆರೆಕಂಡಿತು. ಈ ಚಿತ್ರದ ಹಾಡುಗಳು ಸಖತ್​ ಸದ್ದು ಮಾಡಿದವು. ಈಗ ‘ಬ್ಯಾಡ್​ ಮ್ಯಾನರ್ಸ್​’, ‘ಕಾಳಿ’ ಮುಂತಾದ ಸಿನಿಮಾ ಕೆಲಸಗಳಲ್ಲಿ ಅಭಿಷೇಕ್​ ಬ್ಯುಸಿ ಆಗಿದ್ದಾರೆ.

‘ಬ್ಯಾಡ್​ ಮ್ಯಾನರ್ಸ್​’ ಸಿನಿಮಾದಲ್ಲಿ ಅಭಿಷೇಕ್​ ಅವರಿಗೆ ರಗಡ್​​ ಗೆಟಪ್​ ಇರಲಿದೆ. ಆ ಚಿತ್ರದ ಫಸ್ಟ್​ ಲುಕ್​ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಅವರು ಖ್ಯಾತ ನಿರ್ದೇಶಕ ‘ದುನಿಯಾ’ ಸೂರಿ ಜೊತೆ ಕೆಲಸ ಮಾಡುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ. ‘ಕಾಳಿ’ ಚಿತ್ರಕ್ಕೆ ‘ಪೈಲ್ವಾನ್​’ ಖ್ಯಾತಿಯ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:27 am, Thu, 24 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ