Ambareesh Death Anniversary: ‘ಕ್ಷಣಕ್ಷಣವೂ ನೆನಪಾಗಿ ನನ್ನೊಂದಿಗೆ ಇದ್ದೀರಿ’; ಅಂಬಿ ಪುಣ್ಯ ಸ್ಮರಣೆಗೆ ಸುಮಲತಾ ಭಾವುಕ ಮಾತು

Rebel Star Ambareesh | Sumalatha Ambareesh: ಅಂಬರೀಷ್ ಅವರು ಇಹಲೋಕ ತ್ಯಜಿಸಿ 4 ವರ್ಷ ಕಳೆದಿದೆ. ಅವರ ನೆನಪಿನಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

Ambareesh Death Anniversary: ‘ಕ್ಷಣಕ್ಷಣವೂ ನೆನಪಾಗಿ ನನ್ನೊಂದಿಗೆ ಇದ್ದೀರಿ’; ಅಂಬಿ ಪುಣ್ಯ ಸ್ಮರಣೆಗೆ ಸುಮಲತಾ ಭಾವುಕ ಮಾತು
ಅಂಬರೀಷ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 24, 2022 | 10:26 AM

ಕನ್ನಡ ಚಿತ್ರರಂಗ ಕಂಡ ವಿಶೇಷ ನಟ ಅಂಬರೀಷ್​ (Ambareesh). ಅಭಿಮಾನಿಗಳ ಪಾಲಿನ ‘ರೆಬಲ್​ ಸ್ಟಾರ್​’ ಅವರು. ನೂರಾರು ಬಗೆಯ ಪಾತ್ರಗಳ ಮೂಲಕ ಜನರನ್ನು ರಂಜಿಸಿದ ‘ಮಂಡ್ಯದ ಗಂಡು’ ಸಂಪಾದಿಸಿದ ಅಭಿಮಾನ ಅಷ್ಟಿಷ್ಟಲ್ಲ. ನಟನಾಗಿ, ರಾಜಕಾರಣಿ ಆಗಿ ಅವರು ಸಾಕಷ್ಟು ಗಮನ ಸೆಳೆದರು. ರಿಯಲ್​ ಲೈಫ್​ನಲ್ಲಿಯೂ ಅಂಬರೀಷ್​ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಅವರ ವಿಶೇಷ ವ್ಯಕ್ತಿತ್ವಕ್ಕೆ ಅಭಿಮಾನಿಗಳು ಮನಸೋತಿದ್ದರು. ಇಂದು (ನ.24) ಅಂಬರೀಷ್​ ಪುಣ್ಯ ಸ್ಮರಣೆ (Ambareesh Death Anniversary) ಪ್ರಯುಕ್ತ ಅವರನ್ನು ಹಲವು ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಕುಟುಂಬದವರು ಮತ್ತು ಅಭಿಮಾನಿಗಳು ಅಂಬಿ ಸಮಾಧಿ ಸ್ಥಳಕ್ಕೆ ತೆರಳಿ ನಮಿಸುತ್ತಿದ್ದಾರೆ. ಸುಮಲತಾ ಅಂಬರೀಷ್​ (Sumalatha Ambareesh) ಅವರು ಸೋಶಿಯಲ್​ ಮೀಡಿಯಾದಲ್ಲಿ ಭಾವುಕ ಪೋಸ್ಟ್​ ಹಂಚಿಕೊಂಡಿದ್ದಾರೆ.

2014ರಲ್ಲಿ ಅಂಬರೀಷ್​ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಅಭಿಮಾನಿಗಳ ಹಾರೈಕೆಯಿಂದ ಗುಣಮುಖರಾಗಿ ಬಂದಿದ್ದರು. ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಆದರೆ 2018ರ ನವೆಂಬರ್​ 24 ಅಭಿಮಾನಿಗಳ ಪಾಲಿಗೆ ಕರಾಳ ದಿನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅಂದು ಅಂಬರೀಷ್​ ಕೊನೆಯುಸಿರೆಳೆದರು.

ಇದನ್ನೂ ಓದಿ
Image
‘ಅಂಬರೀಷ್​​ಗೆ ಅನಾರೋಗ್ಯ ಉಂಟಾದಾಗ ಬದುಕಿಸಿದವರು ಇವರೇ’; ಹಳೆ ಘಟನೆ ನೆನೆದ ಸುಂದರ್ ರಾಜ್
Image
ಅಂಬಿ ಸಮಾಧಿಗೆ ಎಡೆ ಇಟ್ಟು ನಮಿಸಿದ ಸುಮಲತಾ ಅಂಬರೀಷ್​; ಸಾಥ್​ ನೀಡಿದ ರಾಕ್​ಲೈನ್​ ವೆಂಕಟೇಶ್​
Image
‘ರೆಬೆಲ್​ ಸ್ಟಾರ್​​’ 70ನೇ ಜನ್ಮದಿನಕ್ಕೆ ಕೇಕ್​ ಕತ್ತರಿಸಿ ವಿಶೇಷ ಮಾತುಗಳನ್ನು ಹಂಚಿಕೊಂಡ ಸುಮಲತಾ ಅಂಬರೀಷ್​
Image
‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್​ ನೆನೆದು ರಾಕ್​ಲೈನ್​ ಭಾವುಕ

ಅಂಬರೀಷ್​ ಅವರನ್ನು ಸ್ಮರಿಸಿಕೊಂಡು ಸುಮಲತಾ ಅಂಬರೀಷ್​ ಭಾವುಕ ಬರಹ ಹಂಚಿಕೊಂಡಿದ್ದಾರೆ. ‘ನಟನಾಗಿ ಜೊತೆಯಾಗಿ, ಬಾಳ ಸಂಗಾತಿಯಾಗಿ ಹಾಕಿದ ಹೆಜ್ಜೆಗಳು ಯಾವತ್ತಿಗೂ ಜೀವಂತ. ನಿಮ್ಮ ಸಿಡುಕು, ಸಂಭ್ರಮ ಹಿತ ಹಿತ. ದೈಹಿಕವಾಗಿ ನೀವು ನಮ್ಮೊಂದಿಗೆ ಇಲ್ಲ ಅನ್ನುವುದನ್ನು ಬಿಟ್ಟರೆ, ಕ್ಷಣಕ್ಷಣವೂ ನೆನಪಾಗಿ ನನ್ನೊಂದಿಗೆ ಇದ್ದೀರಿ. ನಿಮ್ಮ ಕನಸು, ಕನವರಿಕೆ, ಸಮಾಜಮುಖಿ ಕೆಲಸ, ನಾಡಿನ ಮೇಲಿದ್ದ ಒಲವು ಅವು ಮುಂದುವರಿಯುತ್ತಿವೆ ನಿಮ್ಮದೇ ಹೆಸರಿನಲಿ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಾಂತರಾಳದ ನಮನ. ಅಂಬಿ ಅಮರ’ ಎಂದು ಪೋಸ್ಟ್​ ಮಾಡಿದ್ದಾರೆ.

ಇಂದಿಗೆ ಅಂಬರೀಷ್ ಅವರು ಇಹಲೋಕ ತ್ಯಜಿಸಿ 4 ವರ್ಷ ಕಳೆದಿದೆ. ಸಿನಿಮಾಗಳ ಮೂಲಕ ಅವರು ಎಂದಿಗೂ ಜೀವಂತವಾಗಿ ಇರುತ್ತಾರೆ. ಅವರ ನೆನಪಿನಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:26 am, Thu, 24 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ