40 ಲಕ್ಷ​ ವೀವ್ಸ್​ ಗಡಿಯಲ್ಲಿ ‘ಯಟ್ಟ ಯಟ್ಟ’ ಹಾಡು; ಗಣಿ​ ಜತೆ ಅದಿತಿ, ರಚನಾ, ಮೇಘಾ ‘ತ್ರಿಬಲ್​​ ರೈಡಿಂಗ್​’

Golden Star Ganesh | Triple Riding: ‘ಇದೊಂದು ಪಕ್ಕಾ ಕಾಮಿಡಿ ಚಿತ್ರ. ಅದರಲ್ಲೂ ಕೊನೆಯ 20 ನಿಮಿಷ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ’ ಎಂದು ‘ತ್ರಿಬಲ್ ರೈಡಿಂಗ್’ ಸಿನಿಮಾ ಬಗ್ಗೆ ನಟ ಗಣೇಶ್​ ಹೇಳಿದ್ದಾರೆ.

40 ಲಕ್ಷ​ ವೀವ್ಸ್​ ಗಡಿಯಲ್ಲಿ ‘ಯಟ್ಟ ಯಟ್ಟ’ ಹಾಡು; ಗಣಿ​ ಜತೆ ಅದಿತಿ, ರಚನಾ, ಮೇಘಾ ‘ತ್ರಿಬಲ್​​ ರೈಡಿಂಗ್​’
ಮೇಘಾ ಶೆಟ್ಟಿ, ಗಣೇಶ್, ರಚನಾ ಇಂದರ್
TV9kannada Web Team

| Edited By: Madan Kumar

Sep 19, 2022 | 3:43 PM

‘ಗೋಲ್ಡನ್​ ಸ್ಟಾರ್​’ ಗಣೇಶ್ (Golden Star Ganesh)​ ನಟನೆಯ ಸಿನಿಮಾಗಳಲ್ಲಿ ಹಾಡುಗಳು ಸೂಪರ್​ ಆಗಿರುತ್ತವೆ ಎಂಬುದು ಅಭಿಮಾನಿಗಳ ನಂಬಿಕೆ. ಆ ನಂಬಿಕೆಯನ್ನು ಗಣಿ ಎಂದಿಗೂ ಹುಸಿ ಮಾಡಿಲ್ಲ. ಈಗ ಅವರು ನಟಿಸಿರುವ ‘ತ್ರಿಬಲ್​ ರೈಡಿಂಗ್​’ ಸಿನಿಮಾದಲ್ಲೂ ಹಾಡಿನ ಗಮ್ಮತ್ತು ಜೋರಾಗಿದೆ. ಈ ಚಿತ್ರದ ‘ಯಟ್ಟ ಯಟ್ಟ..’ (Yatta Yatta Song) ಹಾಡು ಬಿಡುಗಡೆ ಆಗಿದೆ. ಈ ಗೀತೆಗೆ ಚಂದನ್​ ಶೆಟ್ಟಿ ಹಾಗೂ ಮಂಗ್ಲಿ ಅವರು ಜೊತೆಯಾಗಿ ಧ್ವನಿ ನೀಡಿದ್ದಾರೆ. ಮೂರು ದಿನ ಕಳೆಯುವುದರೊಳಗೆ ಯೂಟ್ಯೂಬ್​ನಲ್ಲಿ 4 ಮಿಲಿಯನ್​ ವೀವ್ಸ್​ ಪಡೆಯುವತ್ತ ಮುನ್ನುಗ್ಗುತ್ತಿದೆ ಈ ಗೀತೆ. ಮಹೇಶ್​ ಗೌಡ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸಾಯಿ ಕಾರ್ತಿಕ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ತ್ರಿಬಲ್​ ರೈಡಿಂಗ್​’ (Triple Riding) ಚಿತ್ರದಲ್ಲಿ ಗಣೇಶ್​ ಜೊತೆಯಲ್ಲಿ ಅದಿತಿ ಪ್ರಭುದೇವ, ರಚನಾ ಇಂದರ್​ ಹಾಗೂ ಮೇಘಾ ಶೆಟ್ಟಿ ಅವರ ನಟಿಸಿದ್ದಾರೆ.

ಇತ್ತೀಚೆಗೆ ‘ತ್ರಿಬಲ್​ ರೈಡಿಂಗ್​’ ಸಿನಿಮಾದ ‘ಯಟ್ಟ ಯಟ್ಟ..’ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಚಿತ್ರತಂಡದ ಸದಸ್ಯರು ಭಾಗಿ ಆಗಿದ್ದರು. ಗಣೇಶ್​ ಮತ್ತು ನಿರ್ದೇಶಕ ಮಹೇಶ್​ ಗೌಡ ಅವರು ‘ಮುಂಗಾರು ಮಳೆ’ ಸಮಯದಿಂದಲೂ ಪರಿಚಿತರು. ಜೊತೆಯಾಗಿ ಸಿನಿಮಾ ಮಾಡಬೇಕು ಎಂಬ ಅವರ ಕನಸು ಈಗ ಈಡೇರಿದೆ. ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕರಿಗೆ ಗಣೇಶ್​ ಧನ್ಯವಾದ ಹೇಳಿದ್ದಾರೆ. ಮೊದಲ ಬಾರಿ ನಿರ್ಮಾಣ ಮಾಡಿರುವ ರಾಮ್ ಗೋಪಾಲ್ ವೈ.ಎಂ. ಅವರಿಗೆ ಒಳ್ಳೆಯದಾಗಲಿ ಎಂದು ಅವರು ಹಾರೈಸಿದ್ದಾರೆ.

‘ಚಿತ್ರದ ಆರಂಭದಿಂದ ಕೊನೆಯವರೆಗೂ ಸಾಕಷ್ಟು ಟ್ವಿಸ್ಟ್​ ಮತ್ತು ಟರ್ನ್​ಗಳು ಇವೆ. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಅದರಲ್ಲೂ ಚಿತ್ರದ ಕೊನೆಯ 20 ನಿಮಿಷ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ತ್ರಿಬಲ್ ರೈಡಿಂಗ್ ಹೋದರೆ ಏನೆಲ್ಲಾ ತೊಂದರೆ ಆಗಬಹುದು ಎನ್ನುವುದನ್ನ ಈ ಚಿತ್ರದಲ್ಲಿ ನೋಡಬಹುದು’ ಎಂದಿದ್ದಾರೆ ಗಣೇಶ್​.

ಮೇಘಾ ಶೆಟ್ಟಿ ಅವರು ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದಾರೆ. ‘ಲವ್ ಮಾಕ್ಟೇಲ್’ ಖ್ಯಾತಿಯ ನಟಿ ರಚನಾ ಇಂದರ್​ ಅವರು ಹಠಮಾರಿ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಣೇಶ್​ ಜೊತೆ ನಟಿಸಿರುವುದು ಅವರಿಬ್ಬರಿಗೂ ಖುಷಿ ನೀಡಿದೆ.

ಗಣೇಶ್ ಮತ್ತು ಚಂದನ್​ ಶೆಟ್ಟಿ ಕಾಂಬಿನೇಷನ್​ನಲ್ಲಿ ಬರುತ್ತಿರುವ ಮೂರನೇ ಹಾಡು ಇದು. ಈ ಹಾಡಿನ ರೀತಿ ಸಿನಿಮಾ ಕೂಡ ಸೂಪರ್​ ಹಿಟ್​ ಆಗಲಿ ಎಂದು ಚಂದನ್​ ಶೆಟ್ಟಿ ಹಾರೈಸಿದ್ದಾರೆ. ಸಾಯಿ ಕಾರ್ತಿಕ್ ಸಂಗೀತದ ಬಗ್ಗೆಯೂ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada