AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಮೆರಾ ಮುಂದೆ ಟವೆಲ್​ ಕಿತ್ತೆಸೆಯಲು ಮುಂದಾದ ನಿವೇದಿತಾ ಗೌಡ;​ ಕಮೆಂಟ್​ ಮೂಲಕ ನೆಟ್ಟಿಗರ ಛಾಟಿ

Niveditha Gowda Instagram: ನಿವೇದಿತಾ ಗೌಡ ತುಂಬ ಬಾಲಿಶವಾಗಿ ವರ್ತಿಸುತ್ತಾರೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಇದೆಲ್ಲ ಅತಿಯಾಯ್ತು ಅಂತ ಕೆಲವು ಮಂದಿ ಟೀಕಿಸಿದ್ದಾರೆ.

ಕ್ಯಾಮೆರಾ ಮುಂದೆ ಟವೆಲ್​ ಕಿತ್ತೆಸೆಯಲು ಮುಂದಾದ ನಿವೇದಿತಾ ಗೌಡ;​ ಕಮೆಂಟ್​ ಮೂಲಕ ನೆಟ್ಟಿಗರ ಛಾಟಿ
ನಿವೇದಿತಾ ಗೌಡ, ಚಂದನ್ ಶೆಟ್ಟಿ
TV9 Web
| Edited By: |

Updated on: Jan 13, 2022 | 9:27 AM

Share

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ (Niveditha Gowda) ಅವರು ತುಂಬ ಆ್ಯಕ್ಟೀವ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಪತಿ ಚಂದನ್​ ಶೆಟ್ಟಿ (Chandan Shetty) ಜೊತೆಗೂಡಿ ಅವರು ಅನೇಕ ರೀಲ್ಸ್​ ಮಾಡುತ್ತಾರೆ. ಅವುಗಳಿಗೆ ಅಭಿಮಾನಿಗಳಿಂದ ಸಖತ್​ ಮೆಚ್ಚುಗೆ ಕೂಡ ವ್ಯಕ್ತವಾಗುತ್ತದೆ. ಆದರೆ ಕೆಲವೊಮ್ಮೆ ನೆಟ್ಟಿಗರು ಗರಂ ಆಗುತ್ತಾರೆ. ಹೌದು, ನಿವೇದಿತಾ ಗೌಡ ಹಂಚಿಕೊಂಡಿರುವ ಹೊಸ ರೀಲ್ಸ್​ (Niveditha Gowda Reels) ಬಗ್ಗೆ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ (Niveditha Gowda Instagram) ಇದಕ್ಕೆ ಒಂದಷ್ಟು ನೆಗೆಟಿವ್​ ಕಮೆಂಟ್​ಗಳು ಬಂದಿವೆ. ಅಷ್ಟಕ್ಕೂ ಈ ರೀಲ್ಸ್​ನಲ್ಲಿ ನಿವೇದಿತಾ ಮಾಡಿದ್ದೇನು? ಧರಿಸಿದ್ದ ಟವೆಲ್​ ಅನ್ನು ಕ್ಯಾಮೆರಾ ಎದುರಲ್ಲೇ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ. ಇದೆಲ್ಲವೂ ನಡೆದಿರುವುದು ತಮಾಷೆಗಾಗಿ. ಆದರೆ ಕೆಲವು ಮಂದಿ ಯಾಕೋ ಇದನ್ನು ಕೊಂಚ ಸೀರಿಯಸ್​ ಆಗಿ ಪರಿಗಣಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಬಗೆಯ ಪ್ರ್ಯಾಂಕ್​ ವಿಡಿಯೋಗಳು ವೈರಲ್​ ಆಗುತ್ತವೆ. ನಿವೇದಿತಾ ಗೌಡ ಕೂಡ ಅಂಥದ್ದೊಂದು ಪ್ರ್ಯಾಂಕ್​ ಮಾಡಲು ಪ್ರಯತ್ನಿಸಿದ್ದಾರೆ. ‘ನನ್ನ ಗಂಡನಿಗೆ ಪ್ರ್ಯಾಂಕ್​ ಮಾಡುತ್ತೇನೆ’ ಎಂಬ ಕ್ಯಾಪ್ಷನ್​ನೊಂದಿಗೆ ಈ ವಿಡಿಯೋ ಆರಂಭ ಆಗುತ್ತದೆ. ತಾವು ಧರಿಸಿದ್ದ ಟವೆಲ್​ ಅನ್ನು ಕ್ಯಾಮೆರಾ ಎದುರಿನಲ್ಲಿಯೇ ಕಿತ್ತು ಎಸೆಯುವಂತೆ ನಿವೇದಿತಾ ಗೌಡ ನಟಿಸುತ್ತಾರೆ. ಅದನ್ನು ನಿಜವೆಂದು ನಂಬಿ, ಪತ್ನಿಯ ಮಾನ ಕಾಪಾಡಲು ಚಂದನ್​ ಶೆಟ್ಟಿ ಓಡೋಡಿ ಬರುತ್ತಾರೆ. ಇಂಥದ್ದೊಂದು ನಾಟಕೀಯ ಪ್ರಸಂಗ ಈ ರೀಲ್ಸ್​ನಲ್ಲಿ ಇದೆ.

ಪೋಸ್ಟ್​ ಮಾಡಿ ಒಂದು ದಿನ ಕಳೆಯುವುದರೊಳಗೆ ಅಂದಾಜು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಕಮೆಂಟ್​ ಮಾಡಿದ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿವೇದಿತಾ ಗೌಡ ತುಂಬ ಬಾಲಿಶವಾಗಿ ವರ್ತಿಸುತ್ತಾರೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಇದೆಲ್ಲ ಅತಿಯಾಯ್ತು ಅಂತ ಕೆಲವು ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದು ಪ್ರ್ಯಾಂಕ್​ ಅಲ್ಲ, ಸ್ಕ್ರಿಪ್ಟೆಡ್​ ವಿಡಿಯೋ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಇಂಥ ನೆಗೆಟಿವ್​ ಕಮೆಂಟ್​ಗಳ ಬಗ್ಗೆ ಚಂದನ್​ ಶೆಟ್ಟಿ ಅವರಾಗಲಿ, ನಿವೇದಿತಾ ಗೌಡ ಅವರಾಗಲಿ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ.

ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ನಿವೇದಿತಾ ಗೌಡ ಅವರ ಖ್ಯಾತಿ ಹೆಚ್ಚಿತು. ಆ ನಂತರ ಅವರು ಕಿರುತೆರೆಯ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಂದನ್​ ಶೆಟ್ಟಿ ಜತೆ ಅವರು ‘ರಾಜಾ ರಾಣಿ’ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಫಾಲೋ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರಸ್ತುತ ಅವರನ್ನು 14 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಹೊಸಹೊಸ ಫೋಟೋಶೂಟ್​ ಮೂಲಕವೂ ನಿವೇದಿತಾ ಗೌಡ ಮಿಂಚುತ್ತಾರೆ.

ಇದನ್ನೂ ಓದಿ:

ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

ಅಮ್ಮ ಮತ್ತು ಅಜ್ಜಿ ಜತೆ ನಿವೇದಿತಾ ಗೌಡ ರೀಲ್ಸ್​; ಕಮೆಂಟ್​ ಮೂಲಕ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್​

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!