ಅಭಿಮಾನಿಯ ಬಾಳಲ್ಲಿ ಮಿರಾಕಲ್ ಮಾಡಿದ್ದ ಗೋಲ್ಡನ್ ಸ್ಟಾರ್ ಗಣೇಶ್​; ಇಲ್ಲಿದೆ ಅಚ್ಚರಿಯ ವಿಚಾರ

Ganesh Birthday: ಗಣೇಶ್​ಗೆ ಅಭಿಮಾನಿಗಳನ್ನು ಕಂಡರೆ ಸಖತ್ ಪ್ರೀತಿ. ಅವರು ತೋರಿದ ಪ್ರೀತಿಯಿಂದ ಅಭಿಮಾನಿಯ ಜೀವ ಉಳಿದಿತ್ತು. ಈ ವಿಚಾರ ಜೀ ಕನ್ನಡ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ರಿವೀಲ್ ಆಗಿತ್ತು.

ಅಭಿಮಾನಿಯ ಬಾಳಲ್ಲಿ ಮಿರಾಕಲ್ ಮಾಡಿದ್ದ ಗೋಲ್ಡನ್ ಸ್ಟಾರ್ ಗಣೇಶ್​; ಇಲ್ಲಿದೆ ಅಚ್ಚರಿಯ ವಿಚಾರ
ಗಣೇಶ್
TV9kannada Web Team

| Edited By: Rajesh Duggumane

Jul 02, 2022 | 11:44 AM

ಗೋಲ್ಡನ್ ಸ್ಟಾರ್ ಗಣೇಶ್ (Ganesh Birthday)​ ಅವರಿಗೆ ಇಂದು (ಜುಲೈ 2) ಬರ್ತ್​​​ಡೇ ಸಂಭ್ರಮ. ಈ ವಿಶೇಷ ದಿನದಂದು ಅವರಿಗೆ ಎಲ್ಲ ಕಡೆಯಿಂದ ಶುಭಾಶಯಗಳು ಬರುತ್ತಿವೆ. ಈ ವರ್ಷ ಗಣೇಶ್ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಫ್ಯಾನ್ಸ್​ಗೆ ಸ್ವಲ್ಪ ಬೇಸರ ಇದೆ. ಸಾಮಾನ್ಯ ಕುಟುಂಬದಿಂದ ಬಂದ ಗಣೇಶ್ ಈಗ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರಿಗೆ ಕೋಟ್ಯಂತರ ಮಂದಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಗಣೇಶ್​ ಅವರನ್ನು ಕಂಡರೆ ಅನೇಕರಿಗೆ ಅಚ್ಚುಮೆಚ್ಚು. ಗೋಲ್ಡನ್ ಸ್ಟಾರ್ (Golden Star Ganesh)​ ಅಭಿಮಾನಿಯ ಬಾಳಲ್ಲಿ ಮಿರಾಕಲ್ ಮಾಡಿದ್ದರು ಅನ್ನೋದು ವಿಶೇಷ.

2003ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ‘ಕಾಮಿಡಿ ಟೈಮ್’ ಮೂಲಕ ಗಣೇಶ್​ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. 2006ರಲ್ಲಿ ತೆರೆಗೆ ಬಂದ ‘ಚೆಲ್ಲಾಟ’ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹೀರೋ ಆಗಿ ಕಾಣಿಸಿಕೊಂಡರು. ಅದೇ ವರ್ಷ ರಿಲೀಸ್ ಆದ ‘ಮುಂಗಾರು ಮಳೆ’ ಸಿನಿಮಾ ಗಣೇಶ್ ಅವರ ಅದೃಷ್ಟ ಬದಲಿಸಿತು. ಆ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ಗಣೇಶ್​ಗೆ ಅಭಿಮಾನಿಗಳನ್ನು ಕಂಡರೆ ಸಖತ್ ಪ್ರೀತಿ. ಅವರು ತೋರಿದ ಪ್ರೀತಿಯಿಂದ ಅಭಿಮಾನಿಯ ಜೀವ ಉಳಿದಿತ್ತು. ಈ ವಿಚಾರ ಜೀ ಕನ್ನಡ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ರಿವೀಲ್ ಆಗಿತ್ತು.

‘ವೀಕೆಂಡ್ ವಿತ್​ ರಮೇಶ್​’ ವೇದಿಕೆ ಏರಿದ್ದ ತಂದೆ-ಮಕ್ಕಳು ಗಣೇಶ್ ಮಾಡಿದ ಸಹಾಯದ ಕಥೆ ಹೇಳಿದ್ದರು. ‘ಇವನು ನನ್ನ ಮಗ ಶಶಾಂಕ್. ಗೋಲ್ಡನ್ ಸ್ಟಾರ್ ಗಣೇಶ್ ಎಂದರೆ ಪಂಚಪ್ರಾಣ. ಜ್ವರ ಬಂದು 25 ದಿನ ಆಸ್ಪತ್ರೆಯಲ್ಲೇ ಇದ್ದ. ಜ್ವರ ಕಡಿಮೆಯೇ ಆಗುತ್ತಿರಲಿಲ್ಲ. ಮಗನಿಗೆ ರಕ್ತದ ಕ್ಯಾನ್ಸರ್ ಇದೆ ಎಂಬ ವಿಚಾರ ಆ ಬಳಿಕ ತಿಳಿಯಿತು. ಮಗನ ಸ್ಥಿತಿ ತುಂಬಾ ಗಂಭೀರ ಆಗಿತ್ತು. ಗಣೇಶ್ ಅವರನ್ನು ನೋಡಬೇಕು ಎಂದು ಹೇಳುತ್ತಿದ್ದ. ಗಣೇಶ್ ಆ ದಿನ ಆಸ್ಪತ್ರೆಗೆ ಬಂದರು’ ಎಂದು ಶಶಾಂಕ್ ತಂದೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

‘ನನ್ನ ಮಗನಿಗೆ ಎಷ್ಟೇ ಚಿಕಿತ್ಸೆ ಕೊಟ್ಟರೂ ಜ್ವರ ಕಡಿಮೆ ಆಗುತ್ತಿರಲಿಲ್ಲ. ಆರೋಗ್ಯಯುತ ವ್ಯಕ್ತಿಯ ದೇಹದಲ್ಲಿ ಪ್ಲೇಟ್​ಲೆಟ್​ಗಳು 1.50 ಲಕ್ಷ ಇರಬೇಕು. ಆದರೆ, ನನ್ನ ಮಗ ಡೇಂಜರ್​ಜೋನ್​ನಲ್ಲಿದ್ದ. ಅಂದು ಗಣೇಶ್ ಬಂದು ಮಗನನ್ನು ಮುಟ್ಟಿದರು. 3 ಗಂಟೆಗಳ ಕಾಲ ನನ್ನ ಮಗನ ಜತೆ ಇದ್ದರು. ಮರುದಿನದಿಂದ ಮಿರಾಕಲ್ ಆಯ್ತು. ಪ್ಲೇಟ್​ಲೆಟ್ ಸಮ ಪ್ರಮಾಣಕ್ಕೆ ಬಂತು. ನನ್ನ ಮಗ ಬದುಕೋಕೆ ಗಣೇಶ್ ಕಾರಣ’ ಎಂದು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: Ganesh Birthday: ಜನ್ಮದಿನದ ಸಲುವಾಗಿ ಅಭಿಮಾನಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡ ‘ಗೋಲ್ಡನ್​ ಸ್ಟಾರ್​’ ಗಣೇಶ್​

ಇದನ್ನೂ ಓದಿ

ಮತ್ತೆ ಕಿರುತೆರೆ ಕದ ತಟ್ಟಿದ ನಟ ಗಣೇಶ್; ‘ಇಸ್ಮಾರ್ಟ್​’ ಜೋಡಿಗಳ ಜತೆ ಬರಲಿದ್ದಾರೆ ‘ಗೋಲ್ಡನ್​ ಸ್ಟಾರ್​’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada