ಚಿಕ್ಕಣ್ಣ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ; ಸ್ಪಷ್ಟನೆ ನೀಡಿದ ಹಾಸ್ಯ ನಟ
ದೀಪ್, ಯಶ್ ಸೇರಿ ಅನೇಕ ಸ್ಟಾರ್ಗಳ ಜತೆ ಚಿಕ್ಕಣ್ಣ ನಟಿಸಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಆರೋಗ್ಯದ ಕುರಿತು ವದಂತಿ ಹುಟ್ಟಿಕೊಂಡಿತ್ತು. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.
ಸೆಲೆಬ್ರಿಟಿಗಳ ಕುರಿತಾಗಿ ನಿತ್ಯ ಹಲವು ವದಂತಿಗಳು ಹುಟ್ಟಿಕೊಳ್ಳುತ್ತವೆ. ಈಗ ಸ್ಯಾಂಡಲ್ವುಡ್ನ (Sandalwood) ಹಾಸ್ಯನಟ ಚಿಕ್ಕಣ್ಣ (Chikkanna) ಬಗ್ಗೆ ವದಂತಿ ಒಂದು ಹುಟ್ಟಿಕೊಂಡಿತ್ತು. ಅವರ ಆರೋಗ್ಯ ಹದಗೆಟ್ಟಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ತಾವು ಆರೋಗ್ಯವಾಗಿರುವ ಬಗ್ಗೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ಚಿಕ್ಕಣ್ಣ ಅವರು ಕರ್ನಾಟಕದಲ್ಲಿ ಚಿರಪರಿಚಿತರು. ಅವರು ತೆರೆಮೇಲೆ ಬಂದರೆ ಸಾಕು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ. ಸುದೀಪ್, ಯಶ್ ಸೇರಿ ಅನೇಕ ಸ್ಟಾರ್ಗಳ ಜತೆ ಚಿಕ್ಕಣ್ಣ ನಟಿಸಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಆರೋಗ್ಯದ ಕುರಿತು ವದಂತಿ ಹುಟ್ಟಿಕೊಂಡಿತ್ತು. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.
ವಿಡಿಯೋ ಮೂಲಕ ಚಿಕ್ಕಣ್ಣ ಸ್ಪಷ್ಟನೆ ನೀಡಿದ್ದಾರೆ. ‘ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಹರಡಿರುವ ಸುದ್ದಿ ಸುಳ್ಳು. ಯಾರೋ ಕಿಡಿಗೇಡಿಗಳು ಆ ರೀತಿ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ನಲ್ಲಿದ್ದೇನೆ. ಅದೇ ಸ್ಥಳದಿಂದಲೇ ಈಗ ಮಾತನಾಡುತ್ತಿದ್ದೇನೆ’ ಎಂದು ಚಿಕ್ಕಣ್ಣ ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಖ್ಯಾತಿ ಪಡೆದಿರುವ ಚಿಕ್ಕಣ್ಣ ಅವರು ಇತ್ತೀಚೆಗೆ ಹೊಸ ಹೆಜ್ಜೆ ಇಟ್ಟಿದ್ದರು. ಇದೇ ಮೊದಲ ಬಾರಿಗೆ ಅವರು ಹೀರೋ ಆಗಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾ ಮೂಲಕ ಅವರು ನಾಯಕನ ಪಟ್ಟ ಅಲಂಕರಿಸುತ್ತಿದ್ದಾರೆ. ಈ ಚಿತ್ರಕ್ಕೆ ಜೂನ್ 16ರಂದು ಮುಹೂರ್ತ ನೆರವೇರಿದೆ. ಈ ಖುಷಿಯ ಸಂದರ್ಭದಲ್ಲಿ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದರು. ಇಷ್ಟು ವರ್ಷಗಳ ಕಾಲ ತಮ್ಮ ಸಿನಿಮಾ ಜರ್ನಿ ಯಾವ ರೀತಿ ಸಾಗಿಬಂತು ಎಂಬುದನ್ನು ಅವರು ಮೆಲುಕು ಹಾಕಿದ್ದರು. ಉಮಾಪತಿ ಶ್ರೀನಿವಾಸ್ ಗೌಡ ಅವರ ಬ್ಯಾನರ್ ಮೂಲಕ ‘ಉಪಾಧ್ಯಕ್ಷ’ ಚಿತ್ರ ನಿರ್ಮಾಣ ಆಗುತ್ತಿದೆ. ಒಮ್ಮೆ ಹೀರೋ ಆದ ಬಳಿಕ ಸ್ಯಾಂಡಲ್ವುಡ್ನಲ್ಲಿ ಚಿಕ್ಕಣ್ಣ ಅವರು ಹೀರೋ ಆಗಿಯೇ ಮುಂದುವರಿಯುತ್ತಾರಾ? ಬೇರೆ ಪಾತ್ರಗಳನ್ನೂ ಒಪ್ಪಿಕೊಳ್ಳುತ್ತಾರಾ? ಈ ಎಲ್ಲ ವಿಚಾರಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು.
ಈ ಮೊದಲು ‘ಅಧ್ಯಕ್ಷ’ ಸಿನಿಮಾದಲ್ಲಿ ಶರಣ್ ಜತೆ ಚಿಕ್ಕಣ್ಣ ನಟಿಸಿದ್ದರು. ಆ ಚಿತ್ರದಲ್ಲಿ ಅವರು ಉಪಾಧ್ಯಕ್ಷನ ಪಾತ್ರ ಮಾಡಿದ್ದರು. ಆ ಸಿನಿಮಾ ಸಖತ್ ಫನ್ನಿ ಆಗಿತ್ತು. ಈಗ ಅದೇ ಪಾತ್ರದ ಹೆಸರಲ್ಲಿ ಸಿನಿಮಾ ತೆರೆಗೆ ಬರುತ್ತಿರುವುದು ವಿಶೇಷ.
ಇದನ್ನೂ ಓದಿ: Rajkumari Song: ‘ವಿಕ್ರಾಂತ್ ರೋಣ’ ಚಿತ್ರದ ಎರಡನೇ ಸಾಂಗ್ ರಿಲೀಸ್; ಹೇಗಿದೆ ನೋಡಿ ಹೊಸ ಹಾಡು
‘ಈ ಥರ ಪ್ರಚಾರ ಯಾವ ಕಲಾವಿದರ ಜೀವನದಲ್ಲೂ ಬರಬಾರದು’: ‘ಜೇಮ್ಸ್’ ಬಗ್ಗೆ ಚಿಕ್ಕಣ್ಣ ನೋವಿನ ನುಡಿ