ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರು ಇಂದು ನಮ್ಮ ಜೊತೆಗೆ ಇಲ್ಲ. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುರುಪ್ರಸಾದ್ ಅವರು ಗಡ್ಡವಿಲ್ಲದೆ ಯಾವಾಗಲೂ ಕಾಣಿಸಿಕೊಂಡಿಲ್ಲ. ಗುರುಪ್ರಸಾದ್ ಅವರು ಈ ರೀತಿ ಗಡ್ಡ ಬಿಡಲು ಒಂದು ಕಾರಣ ಇತ್ತು. ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.
ರಾಜ್‌ಕುಮಾರ್ ಅವರನ್ನು ಹತ್ತಿರದಿಂದ ಕಂಡವರು ಗುರುಪ್ರಸಾದ್. ಅವರನ್ನು ಗುರುಪ್ರಸಾದ್ ಭೇಟಿ ಮಾಡಿದ್ದರು. ಆಗ ಗುರುಪ್ರಸಾದ್ ಅವರು ಗಡ್ಡ ಬಿಟ್ಟಿದ್ದರು. ಈ ಗಡ್ಡವನ್ನು ಮುಟ್ಟಿದ್ದ ರಾಜ್‌ಕುಮಾರ್ ಅವರು, ‘ಗಡ್ಡ ಚೆನ್ನಾಗಿದೆ. ನಿಮಗೆ ಚೆನ್ನಾಗಿ ಕಾಣುತ್ತದೆ’ ಎಂದು ಹೇಳಿದ್ದರು. ಅದರಿಂದ ಖುಷಿಪಟ್ಟಿದ್ದ ಗುರುಪ್ರಸಾದ್ ಅವರು, ‘ರಾಜ್‌ಕುಮಾರ್ ಅವರೇ ನನ್ನ ಗಡ್ಡ ಮುಟ್ಟಿರುವಾಗ ಇದನ್ನೇಕೆ ಶೇವ್ ಮಾಡಬೇಕು’ ಎಂದು ಅವರು ನಿರ್ಧರಿಸಿದರು.
ಇದಾದ ಬಳಿಕ ಗುರುಪ್ರಸಾದ್ ಅವರು ಎಂದಿಗೂ ಗಡ್ಡವನ್ನು ಶೇವ್ ಮಾಡಲೇ ಇಲ್ಲ. ಆಗಾಗ, ಗುರುಪ್ರಸಾದ್ ಅವರು ಗಡ್ಡಕ್ಕೆ ಕತ್ತರಿ ಹಾಕುತ್ತಿದ್ದರು ಅಷ್ಟೇ. ಈ ವಿಚಾರವನ್ನು ಅವರೇ ಈ ಮೊದಲು ಹೇಳಿಕೊಂಡಿದ್ದರು.
ಗುರುಪ್ರಸಾದ್ ಅವರ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಮೂಡಿವೆ. ಮೇಲ್ನೋಟಕ್ಕೆ ಗುರುಪ್ರಸಾದ್ ಅವರದ್ದು ಆತ್ಮಹತ್ಯೆ ರೀತಿಯೇ ಕಾಣಿಸಿದೆ. ಆದರೆ, ಸೂಕ್ತ ತನಿಖೆ ಬಳಿಕ ಅಸಲಿ ವಿಷಯ ತಿಳಿಯಲಿದೆ. ಅವರ ಸಾವಿನ ಬಗ್ಗೆ 4 ಪ್ರಮುಖ ಅನುಮಾನಗಳು ಮೂಡಿವೆ.
ಇದನ್ನೂ ಓದಿ: ‘ಆನ್ಲೈನ್ ಗೇಮ್ನಲ್ಲಿ ಗುರುಪ್ರಸಾದ್ 70 ಲಕ್ಷ ರೂಪಾಯಿ ಕಳೆದುಕೊಂಡಿದ್ದ’: ಜಗ್ಗೇಶ್
ಗುರುಪ್ರಸಾದ್ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದರು ಎನ್ನಲಾಗಿದೆ. ಅವರ ಸಿನಿಮಾಗಳು ಇತ್ತೀಚೆಗೆ ಗೆಲುವು ಕಂಡಿರಲಿಲ್ಲ. ಇದರಿಂದ ಅವರು ಬೇಸರಕ್ಕೆ ಒಳಗಾದರೇ ಎನ್ನುವ ಪ್ರಶ್ನೆಯೂ ಮೂಡಿದೆ. ಹಣ ನೀಡದ ಕಾರಣಕ್ಕೆ ಅವರಿಗೆ ಬಂಧನದ ಭಯ ಇತ್ತು. ಅವರು ಎರಡೆರಡು ಮದುವೆ ಆಗಿದ್ದರು. ಹೀಗಾಗಿ, ಕೌಟುಂಬಿಕ ಕಲಹವೂ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.