
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಅಭಿನಯದ ರಾಬರ್ಟ್ ಸಿನಿಮಾ ಟ್ರೇಲರ್ ಸಹ ಬಿಡುಗಡೆಯಾಗಿದ್ದು ಮತ್ತಷ್ಟು ಮೆರಗು ನೀಡಿದೆ. ದರ್ಶನ್ ಹುಟ್ಟುಹಬ್ಬಕ್ಕೆ ದರ್ಶನ್ ಅಭಿಮಾನಿಗಳು ಕಾಮನ್ ಡಿಪಿ ತಯಾರಿಸಿ ಈಗಾಗಲೇ ವೈರಲ್ ಮಾಡಿದ್ದರು. ಅದನ್ನೀಗ ಜಗ್ಗೇಶ್, ರಿಷಬ್ ಶೆಟ್ಟಿ, ಪವನ್ ಒಡೆಯರ್ ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.
ನವರಸ ನಾಯಕ ಜಗ್ಗೇಶ್ ಮತ್ತು ದರ್ಶನ್ ಮಧ್ಯೆ ಕಳೆದ ವಾರವಷ್ಟೇ ಕಿಡಿ ಹೊತ್ತಿಸುವ ಪ್ರಯತ್ನವಾಗಿತ್ತು. ಆದರೆ, ಅದನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಿದ ಇಬ್ಬರೂ ನಟರು ವಿವಾದವನ್ನು ಅಲ್ಲೇ ತಣ್ಣಗಾಗಿಸಿದ್ದಾರೆ. ಇತ್ತ ಜಗ್ಗೇಶ್ ಎರಡು ದಿನ ಹಿಂದೆಯೇ ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದು, ದರ್ಶನ್ ಸಹ ಅದಕ್ಕೆ ಪ್ರತ್ಯುತ್ತರಿಸಿ ಧನ್ಯವಾದ ತಿಳಿಸಿದ್ದಾರೆ.
ಸದ್ಯ ದರ್ಶನ್ ಅವರ ಟ್ವಿಟರ್ ಅಕೌಂಟ್ನಲ್ಲಿ ಶುಭಾಶಯಗಳ ಮಹಾಪೂರವೇ ಇದ್ದು, ಸ್ಯಾಂಡಲ್ವುಡ್ನ ಬಹುತೇಕ ಗಣ್ಯರು ದರ್ಶನ್ಗೆ ಶುಭಕೋರಿ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಟ್ವಿಟರ್ನಲ್ಲಿ #Dboss #Darshan #HappyBirthdayDBoss ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗಿವೆ.
ಇದನ್ನೂ ಓದಿ: ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇ ಬೇಕು, ರಾಬರ್ಟ್ನಲ್ಲಿ ಅಬ್ಬರಿಸಿದ ದರ್ಶನ್