Darling Krishna Birthday: ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬದ ದಿನ ಮಿಲನಾ ನಾಗರಾಜ್​ ನೀಡಿದ ಗಿಫ್ಟ್​ ಏನು?

Love Mocktail 2: ‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲಿ ಕೃಷ್ಣ ಅವರ ಒಂದು ಗೆಟಪ್​ ಹೇಗಿರಲಿದೆ ಎಂಬುದು ಈಗಾಗಲೇ ಗೊತ್ತಾಗಿತ್ತು. ಅದೇ ಗೆಟಪ್​ನ ಇನ್ನೊಂದು ಪೋಸ್ಟರ್​ ಅನ್ನು ಮಿಲನಾ ಶೇರ್​ ಮಾಡಿಕೊಂಡು ಕೃಷ್ಣಗೆ ವಿಶ್​ ಮಾಡಿದ್ದಾರೆ.

Darling Krishna Birthday: ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬದ ದಿನ ಮಿಲನಾ ನಾಗರಾಜ್​ ನೀಡಿದ ಗಿಫ್ಟ್​ ಏನು?
ಡಾರ್ಲಿಂಗ್​ ಕೃಷ್ಣ - ಮಿಲನಾ ನಾಗರಾಜ್​

Updated on: Jun 12, 2021 | 9:36 AM

ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟರಲ್ಲಿ ಡಾರ್ಲಿಂಗ್ ಕೃಷ್ಣ ಹೆಸರು ಕೂಡ ಮುಂಚೂಣಿಯಲ್ಲಿದೆ. 2020ರ ಆರಂಭದಲ್ಲಿ ತೆರೆಕಂಡ ‘ಲವ್​ ಮಾಕ್ಟೇಲ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಿದೆ. ಆ ಚಿತ್ರದ ಯಶಸ್ಸಿನ ಬಳಿಕ ಬಹುಕಾಲದ ಪ್ರೇಯಸಿ ಮಿಲನಾ ನಾಗರಾಜ್​ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು (ಜೂ.12) ಡಾರ್ಲಿಂಗ್​ ಕೃಷ್ಣ ಅವರ ಜನ್ಮದಿನ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಕೃಷ್ಣ ಅವರಿಗೆ ಶುಭ ಕೋರುತ್ತಿದ್ದಾರೆ.

ಕೊವಿಡ್​ ಹಾವಳಿ ಇರುವುದರಿಂದ ಕೃಷ್ಣ ಹುಟ್ಟುಹಬ್ಬವನ್ನು ಜೋರಾಗಿ ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ. ‘ಲವ್​ ಮಾಕ್ಟೇಲ್​’ ಯಶಸ್ಸಿನ ಬಳಿಕ ಆ ಚಿತ್ರದ ಸೀಕ್ವೆಲ್​ ಮಾಡುವುದಾಗಿ ಚಿತ್ರತಂಡ ಘೋಷಿಸಿಕೊಂಡಿತ್ತು. ಅದರಂತೆ ಆ ಸಿನಿಮಾದ ಕೆಲಸಗಳು ಪ್ರಗತಿಯಲ್ಲಿವೆ. ಡಾರ್ಲಿಂಗ್​ ಕೃಷ್ಣ ಜನ್ಮದಿನದ ವಿಶೇಷ ದಿನದಂದು ‘ಲವ್​ ಮಾಕ್ಟೇಲ್​ 2’ ಚಿತ್ರದ ಒಂದು ಹೊಸ ಪೋಸ್ಟರ್​ ಅನ್ನು ಗಿಫ್ಟ್​ ರೂಪದಲ್ಲಿ ಹಂಚಿಕೊಂಡಿದ್ದಾರೆ ನಟಿ ಮಿಲನಾ ನಾಗರಾಜ್​.

‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲಿ ಕೃಷ್ಣ ಅವರ ಒಂದು ಗೆಟಪ್​ ಹೇಗಿರಲಿದೆ ಎಂಬುದು ಈಗಾಗಲೇ ಗೊತ್ತಾಗಿತ್ತು. ಅದೇ ಗೆಟಪ್​ನ ಇನ್ನೊಂದು ಪೋಸ್ಟರ್​ ಅನ್ನು ಮಿಲನಾ ಶೇರ್​ ಮಾಡಿಕೊಂಡು ಕೃಷ್ಣಗೆ ವಿಶ್​ ಮಾಡಿದ್ದಾರೆ. ಈ ವರ್ಷ ಫೆಬ್ರವರಿ 14ರಂದು ಮಿಲನಾ ಮತ್ತು ಕೃಷ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ಮದುವೆ ದಿನವೇ ‘ಲವ್​ ಮಾಕ್​ಟೇಲ್​ 2’ ಚಿತ್ರದ ಮೊದಲ ಸಾಂಗ್ ಬಿಡುಗಡೆ ಆಗಿತ್ತು. ಆ ಗೀತೆಗೆ ಜನಮೆಚ್ಚಿಗೆ ಸಿಕ್ಕಿದೆ.

ಸದ್ಯ ಮಿಸ್ಟರ್​ ಬ್ಯಾಚುಲರ್​, ಶುಗರ್​ ಫ್ಯಾಕ್ಟರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಡಾರ್ಲಿಂಗ್​ ಕೃಷ್ಣ ನಟಿಸುತ್ತಿದ್ದಾರೆ. ಬರ್ತ್​ಡೇ ಪ್ರಯುಕ್ತ ಇಂದು ಬೆಳಗ್ಗೆ 11.30ಕ್ಕೆ ಶುಗರ್​ ಫ್ಯಾಕ್ಟರಿ ತಂಡದಿಂದ ಟೀಸರ್​ ಬಿಡುಗಡೆ ಆಗಲಿದೆ.

ಹುಟ್ಟುಹಬ್ಬದ ದಿನವೇ ‘ನಾರಾಯಣ ಮಹಾದೇವ ಧೋನಿ’ ಎಂದು ಹೊಸ ಸಿನಿಮಾ ಪೋಸ್ಟರ್​ ಅನ್ನು ಕೃಷ್ಣ ಬಿಡುಗಡೆ ಮಾಡಿದ್ದು, ಹೊಸಬರ ತಂಡದ ಬೆನ್ನು ತಟ್ಟಿದ್ದಾರೆ.

ಇದನ್ನೂ ಓದಿ:

ಕೊವಿಡ್​ ಪಾಸಿಟಿವ್​ ಆದರೂ ಅಭಿಮಾನ ಮರೆಯದ ಕೃಷ್ಣ-ಮಿಲನಾ!

ಪತಿಯ ನಿರ್ದೇಶನದಲ್ಲಿ ಕನಸಿನ ಸಿನಿಮಾ ಮಾಡಲಿದ್ದಾರೆ ನಟಿ ಮಿಲನಾ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us