ಹಾಡು: ಕರಾಬು, ಚಿತ್ರ: ಪೊಗರು
ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಾಗಿ ಕಾಣಿಸಿಕೊಂಡಿರುವ ‘ಪೊಗರು’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದ ‘ಕರಾಬು…’ ಸಾಂಗು 2020ರಲ್ಲಿ ಧೂಳೆಬ್ಬಿಸಿದೆ. ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಈ ಹಾಡನ್ನು ಹಾಡಿದ್ದಾರೆ. ಈ ಸಾಂಗ್ ಯೂಟ್ಯೂಬ್ನಲ್ಲಿ 18.3 ಕೋಟಿ ಬಾರಿ ವೀಕ್ಷಣೆ ಕಂಡು ದಾಖಲೆ ಬರೆದಿದೆ.
ಹಾಡು: ಮರಳಿ ಮನಸಾಗಿದೆ, ಚಿತ್ರ: ಜಂಟಲ್ಮನ್
ವರ್ಷದ ಆರಂಭದಲ್ಲಿ ತೆರೆಕಂಡ ಜಂಟಲ್ಮನ್ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾದ ‘ಮರಳಿ ಮನಸಾಗಿದೆ…’ ಹಾಡೂ ಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿತ್ತು. ಅದ್ಭುತ ಸಂಗೀತ ಸಂಯೋಜನೆ, ಕಾಡುವ ಸಾಹಿತ್ಯದಿಂದ ಈ ಹಾಡು ಎಲ್ಲರ ಗಮನ ಸೆಳೆದಿದೆ. ಸಂಜಿತ್ ಹೆಗಡೆ, ಸಿ.ಆರ್. ರಾಬಿ ಈ ಹಾಡನ್ನು ಹಾಡಿದ್ದರು.
ಹಾಡು: ಲವ್ ಯು ಚಿನ್ನಾಮ ಚಿತ್ರ: ಲವ್ ಮಾಕ್ಟೇಲ್
ಈ ಬಾರಿಯ ಅತಿ ರೊಮ್ಯಾಂಟಿಕ್ ಸಿನಿಮಾಗಳ ಸಾಲಿನಲ್ಲಿ ಮೊದಲಿಗೆ ನಿಲ್ಲೋದು ‘ಲವ್ ಮಾಕ್ಟೇಲ್’ ಚಿತ್ರ. ಕೃಷ್ಣ ಹಾಗೂ ಮಿಲನಾ ನಾಗರಾಜ್ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ‘ಲವ್ ಯು ಚಿನ್ನ’ ಹಾಡು ಎಲ್ಲರ ಕಿವಿಯಲ್ಲಿ ಗುನುಗುವಂತೆ ಮಾಡಿತ್ತು. ರಘು ದೀಕ್ಷಿತ್ ಸಂಗೀತ ಸಂಯೋಜನೆ ಇರುವ ಈ ಹಾಡನ್ನು ಶ್ರುತಿ ವಿ.ಎಸ್. ಹಾಗೂ ನಕುಲ್ ಅಭಯಂಕರ್ ಹಾಡಿದ್ದರು.
ಹಾಡು: ಸೋಲ್ ಆಫ್ ದಿಯಾ ಚಿತ್ರ ದಿಯಾ
ಈ ಬಾರಿ ಕನ್ನಡದಲ್ಲಿ ತೆರೆಗೆ ಬಂದ ಅತ್ಯಂತ ಟ್ರ್ಯಾಜಡಿ ಸಿನಿಮಾಗಳ ಸಾಲಿನಲ್ಲಿ ‘ದಿಯಾ’ ಮೊದಲಿದೆ. ಈ ಚಿತ್ರದ ‘ಸೋಲ್ ಆಫ್ ದಿಯಾ’ ಹಾಡು ಎಲ್ಲರ ಕಿವಿಯಲ್ಲಿ ಗುನುಗುಟ್ಟಿತ್ತು. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಈ ಹಾಡಿಗೆ ಹೊಸ ಬಲ ತುಂಬಿತ್ತು.
ಹಾಡು: ಪಟಾಕಿ ಪೊರಿಯೋ, ಚಿತ್ರ: ಕೋಟಿಗೊಬ್ಬ 3
ಸುದೀಪ್ ನಟನೆಯ ಕೋಟಿಗೊಬ್ಬ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಈ ಸಿನಿಮಾದ ಪಟಾಕಿ ಪೊರಿಯೋ ಹಾಡು ಸಖತ್ ವೈರಲ್ ಆಗಿತ್ತು. ಈ ವಿಶೇಷ ಹಾಡಿನಲ್ಲಿ ಆಶಿಕಾ ಸ್ಟೆಪ್ ಹಾಕಿದ್ದಾರೆ.
ಹಾಡು: ಬಾ ಬಾ ನಾ ರೆಡಿ, ಚಿತ್ರ: ರಾಬರ್ಟ್
ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದ ಬಾ ಬಾ ನಾ ರೆಡಿ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ಈಗಾಗಲೇ ತೆರೆಕಾಣಬೇಕಿತ್ತು.
ಹಾಡು: ಮಾದೇವ ಚಿತ್ರ: ಪಾಪ್ಕಾರ್ನ್ ಮಂಕಿ ಟೈಗರ್
ಸುಕ್ಕಾ ಸೂರಿ ನಿರ್ದೇಶನದ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾ ರಾ ಶೈಲಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರದ ‘ಮಾದೇವ’ ಹಾಡು ಎಲ್ಲರನ್ನು ಹೊಸ ನಶೆಯಲ್ಲಿ ತೇಲಿಸಿಬಿಟ್ಟಿತ್ತು. ಸಂಜಿತ್ ಹೆಗಡೆ ಕಂಠದಿಂದ ಮೂಡಿ ಬಂದ ಈ ಹಾಡಿಗೆ ಎಲ್ಲರೂ ತಲೆದೂಗಿದ್ದರು.
ಹಾಡು: ಸೂರಿ ಅಣ್ಣ, ಚಿತ್ರ: ಸಲಗ
ಸಲಗ ಸಿನಿಮಾ ಮೂಲಕ ಇದೇ ಮೊದಕ ಬಾರಿಗೆ ದುನಿಯಾ ವಿಜಿ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರದ ಹಾಡು ಸೂರಿ ಅಣ್ಣ ಪಕ್ಕಾ ರಾ ಶೈಲಿಯಲ್ಲಿ ಮೂಡಿ ಬಂದಿದೆ. ಕಳೆದ ವರ್ಷ ಜನವರಿಯಲ್ಲಿ ರಿಲೀಸ್ ಆಗಿದ್ದ ಈ ಹಾಡು ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ.
ಹಾಡು: ಹೋಗ್ಬಿಟ್ಟಾ ಚಾರ್ಲ್ಸ್ ಹೋಗ್ಬಿಟ್ಟಾ, ಬೆಂಗಳೂರು ಸಾಂಗ್ ಚಿತ್ರ: ಫ್ರೆಂಚ್ ಬಿರಿಯಾನಿ
ಡ್ಯಾನಿಶ್ ಸೇಟ್ ನಟನೆಯ ಫ್ರೆಂಚ್ ಬಿರಿಯಾನಿ ಚಿತ್ರ ಒಟಿಪಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರದ ಹೋಗ್ಬಿಟ್ಟಾ ಚಾರ್ಲ್ಸ್ ಹೋಗ್ಬಿಟ್ಟಾ ಹಾಗೂ ಬೆಂಗಳೂರು ಸಾಂಗ್ ತುಂಬಾನೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದರಲ್ಲೂ ಚಾರ್ಲ್ಸ್ ಹಾಡುಗಳು ಮೀಮ್ ವಲಯದಲ್ಲಿ ಹೆಚ್ಚು ಬಳಕೆ ಆಗಿತ್ತು.
Published On - 7:26 pm, Wed, 30 December 20