15 ವರ್ಷದ ಬಳಿಕ ’ಮೈ ಆಟೋಗ್ರಾಫ್’ ನೆನಪು ಹಂಚಿಕೊಂಡ ಕಿಚ್ಚ ಸುದೀಪ್
ಕೇರಳಕ್ಕೆ ಸಿನಿಮಾ ಚಿತ್ರೀಕರಣಕ್ಕೆಂದು ತೆರಳಿದ್ದ ಕಿಚ್ಚಾ ಸುದೀಪ್ ಮೈ ಆಟೋಗ್ರಾಫ್ ಚಿತ್ರೀಕರಣ ನಡೆದ ಮನೆಗೆ ತೆರಳಿ ಹಳೆಯ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಭಿನಯ ಚಕ್ರವರ್ತಿ ಸುದೀಪ್
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಎಂದೇ ಹೆಸರು ಪಡೆದಿರುವ ಸುದೀಪ್ 15 ವರ್ಷ ದಾಟಿದ ಮೈ ಆಟೋಗ್ರಾಫ್ ಚಿತ್ರದ ನೆನಪನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಕೇರಳದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಫ್ಯಾಂಟಮ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಮೈ ಆಟೋಗ್ರಾಫ್ ಸಿನಿಮಾ ಚಿತ್ರೀಕರಣಗೊಂಡ ಮನೆಗೆ ಭೇಟಿ ನೀಡಿದ್ದಾರೆ.
ಚಿತ್ರದ ಪ್ರಮುಖ ಭಾಗವನ್ನು ಈ ಮನೆಯಲ್ಲಿಯೇ ಚಿತ್ರೀಕರಿಸಲಾಗಿದೆ ಎಂದು ಮೈ ಆಟೋಗ್ರಾಫ್ ಚಿತ್ರದ ನೆನಪುಗಳನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ ಸುದೀಪ್.
View this post on Instagram



