ಫ್ಯಾಂಟಮ್ ಕಿಚ್ಚ ಎದುರು ಸೊಂಟ ಬಳುಕಿಸಿ.. ಕಿಚ್ಚು ಹಚ್ಚಲು ಬರ್ತಿದ್ದಾರೆ ಬಾಲಿವುಡ್‌ನ ಈ ನಟಿ..!
ಅಂದ್ಹಾಗೆ ಸದ್ಯ ಫ್ಯಾಂಟಮ್ ಸಿನಿಮಾದಲ್ಲಿ ಸುದೀಪ್ ಜೊತೆ ಒಂದು ಸ್ಪೆಷಲ್ ಹಾಡಿಗೆ ಕತ್ರಿನಾ ಕೈಫ್ ಹೆಜ್ಜೆ ಹಾಕ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದ್ರೆ ಚಿತ್ರತಂಡದ ಮೂಲಗಳ ಪ್ರಕಾರ ಕತ್ರಿನಾ ಡೇಟ್ ಸಿಗದ ಕಾರಣ ನಟಿ ನೂರಾ ಫತೇಹಿ ಸುದೀಪ್ ಜತೆ ಸೊಂಟ ಬಳುಕಿಸ್ತಾರೆ ಅನ್ನೋ ಸುದ್ದಿ ಬಲವಾಗಿ ಹರಿದಾಡಿತ್ತು.
ಬಾಲಿವುಡ್‌ನ ಸ್ಟಾರ್ ನಟಿ ಸ್ಯಾಂಡಲ್‌ವುಡ್‌ನ ಮಾಣಿಕ್ಯ ಸುದೀಪ್ ಜತೆ ಸೊಂಟ ಬಳುಕಿಸ್ತಾರೆ ಅನ್ನೋ ಸುದ್ದಿ ಸಂಚಲನ ಮೂಡಿಸಿದೆ. ಈಗಾಗ್ಲೇ ಕತ್ರಿನಾ ಕೈಫ್, ನೂರಾ ಫತೇಹಿ ಇಬ್ಬರಲ್ಲಿ ಒಬ್ಬರು ಫ್ಯಾಂಟಮ್‌ನಲ್ಲಿ ಹೆಜ್ಜೆ ಹಾಕೋದು ಕನ್ಫರ್ಮ್ ಎನ್ನಲಾಗಿತ್ತು. ಆದ್ರೀಗ ಇಬ್ಬರನ್ನೂ ಬಿಟ್ಟು ಮತ್ತೊಬ್ಬ ಸ್ಟಾರ್ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ಲಾಕ್‌ಡೌನ್ ನಂತ್ರ ಒಂದಿಷ್ಟು ಮುಂಜಾಗ್ರತೆ ಕ್ರಮಗಳೊಂದಿಗೆ ಶೂಟಿಂಗ್ ಆರಂಭಿಸಿದ್ದ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರತಂಡ ಇತ್ತೀಚೆಗೆ ಚಿತ್ರದ ಸೆಕೆಂಡ್ ಶೆಡ್ಯೂಲ್ ಕಂಪ್ಲೀಟ್ ಮಾಡಿರೋ ಸಂಭ್ರಮದಲ್ಲಿದೆ. ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ಮುಗಿಸಿರೋ ಸಂಭ್ರಮದ ಜೊತೆಗೆ ಈಗ ಸುದೀಪ್ ಜೊತೆ ಬಾಲಿವುಡ್ ಬೆಡಗಿ ಕತ್ರಿನಾ ಹೆಜ್ಜೆ ಹಾಕ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದ್ರೀ ಅದು ಸುಳ್ಳಾಗಿದೆ.
ಕತ್ರಿನಾ ಕೈಫ್ ಹೆಜ್ಜೆ ಹಾಕ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು ಅಂದ್ಹಾಗೆ ಸದ್ಯ ಫ್ಯಾಂಟಮ್ ಸಿನಿಮಾದಲ್ಲಿ ಸುದೀಪ್ ಜೊತೆ ಒಂದು ಸ್ಪೆಷಲ್ ಹಾಡಿಗೆ ಕತ್ರಿನಾ ಕೈಫ್ ಹೆಜ್ಜೆ ಹಾಕ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದ್ರೆ ಚಿತ್ರತಂಡದ ಮೂಲಗಳ ಪ್ರಕಾರ ಕತ್ರಿನಾ ಡೇಟ್ ಸಿಗದ ಕಾರಣ ನಟಿ ನೂರಾ ಫತೇಹಿ ಸುದೀಪ್ ಜತೆ ಸೊಂಟ ಬಳುಕಿಸ್ತಾರೆ ಅನ್ನೋ ಸುದ್ದಿ ಬಲವಾಗಿ ಹರಿದಾಡಿತ್ತು. ಆದ್ರೀಗ ನೂರಾ ಫತೇಹಿ ಬದಲಿಗೆ ನಟಿ ಜಾಕ್ವಲಿನ್ ಫರ್ನಾಂಡಿಸ್ ಸೊಂಟ ಬಳುಕಿಸೋದು ಕನ್ಫರ್ಮ್ ಆಗಿದೆ.
ರೇಸ್ 3, ಕಿಕ್, ಹೌಸ್‌ಫುಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರೋ ನಟಿ ಜಾಕ್ವಲಿನ್ ಫರ್ನಾಂಡಿಸ್ ಸದ್ಯ ಏಪ್ರಿಲ್‌ನಲ್ಲಿ ಫ್ಯಾಂಟಮ್ ತಂಡ ಸೇರಲಿದ್ದಾರೆ. ಹಾಗಿದ್ರೆ ಮುಂದಿನ ದಿನಗಳಲ್ಲಿ ಜಾಕ್ವಲಿನ್ ಹೇಗೆ ಕನ್ನಡಿಗರನ್ನ ಮೋಡಿ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.
Published On - 1:37 pm, Wed, 30 December 20