Kichcha sudeep: ಅಮೆರಿಕಾ ಅಮೆರಿಕಾ ಸಿನಿಮಾ ಕಿಚ್ಚ ಸುದೀಪ್​ ಕೈ ತಪ್ಪಿದ್ದೇಕೆ?
ಅಮೆರಿಕಾ ಅಮೆರಿಕಾ ಸಿನಿಮಾ ಕಿಚ್ಚ ಸುದೀಪ್​ ಕೈ ತಪ್ಪಿದ್ದೇಕೆ?

Kichcha sudeep: ಅಮೆರಿಕಾ ಅಮೆರಿಕಾ ಸಿನಿಮಾ ಕಿಚ್ಚ ಸುದೀಪ್​ ಕೈ ತಪ್ಪಿದ್ದೇಕೆ?

| Updated By: ಮದನ್​ ಕುಮಾರ್​

Updated on: Jun 18, 2021 | 10:03 AM

1996ರಲ್ಲಿ ಸಿನಿಮಾ ತೆರೆಕಂಡರೂ ಈಗಲೂ ಇದರ ಬಗ್ಗೆ ಸಾಕಷ್ಟು ಜನರು ಮಾತನಾಡಿಕೊಳ್ಳುತ್ತಾರೆ. ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರವಾದರೆ ಅನೇಕರಿ ಈ ಸಿನಿಮಾ ವೀಕ್ಷಣೆ ಮಾಡುತ್ತಾರೆ.

 

ನಾಗತಿಹಳ್ಳಿ ಚಂದ್ರಶೇಖರ್​ ನಿರ್ದೇಶನ ಮಾಡಿದ್ದ ‘ಅಮೆರಿಕಾ ಅಮೆರಿಕಾ’ ಸಿನಿಮಾ ಅಂದಿನ ಕಾಲದಲ್ಲಿ ದೊಡ್ಡಮಟ್ಟದಲ್ಲಿ ಹಿಟ್​ ಆಗಿತ್ತು. ರಮೇಶ್​ ಅರವಿಂದ್, ಅಕ್ಷಯ್​ ಆನಂದ್ ಹಾಗೂ ಹೇಮಾ ಪಂಚಮುಖಿ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಟ್ರಯಾಂಗಲ್​ ಲವ್​ಸ್ಟೋರಿ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ಅಲ್ಲದೆ, ಅಮೆರಿಕದ ಸಂಸ್ಕೃತಿ ಹಾಗೂ ಭಾರತದ ಸಂಸ್ಕೃತಿಗೆ ಇರುವ ವ್ಯತ್ಯಾಸವನ್ನು ಅದ್ಭುತವಾಗಿ ವಿವರಿಸಿದ್ದರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.

1996ರಲ್ಲಿ ಸಿನಿಮಾ ತೆರೆಕಂಡರೂ ಈಗಲೂ ಇದರ ಬಗ್ಗೆ ಸಾಕಷ್ಟು ಜನರು ಮಾತನಾಡಿಕೊಳ್ಳುತ್ತಾರೆ. ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರವಾದರೆ ಅನೇಕರಿ ಈ ಸಿನಿಮಾ ವೀಕ್ಷಣೆ ಮಾಡುತ್ತಾರೆ. ಈ ಸಿನಿಮಾಗೆ ಕಿಚ್ಚ ಸುದೀಪ್​ ಆಯ್ಕೆಯಾಗಬೇಕಿತ್ತಂತೆ. ಆದರೆ, ಅದು ಏಕೆ ಸಾಧ್ಯವಾಗಿಲ್ಲ ಎನ್ನುವ ಬಗ್ಗೆ ನಾಗತಿಹಳ್ಳಿ ಮಾತನಾಡಿದ್ದಾರೆ. ಆ ವಿಶೇಷ ಸಂದರ್ಶನ ಇಲ್ಲಿದೆ.

Published on: Jun 17, 2021 10:07 PM