ಬೆಂಗಳೂರು: ದುಬೈಗೆ ವಿಕ್ರಾಂತ್ ರೋಣ ಟೈಟಲ್ ಟೀಸರ್ ರಿಲೀಸ್ಗಾಗಿ ತೆರಳಿದ್ದ ಸುದೀಪ್ಗೆ ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಸನ್ಮಾನ ಮಾಡುವ ಮೂಲಕ ‘ಕನ್ನಡ ಕಲಾ ತಿಲಕ’ ಎಂಬ ಬಿರುದನ್ನು ಪ್ರದಾನ ಮಾಡಲಾಗಿದೆ.
ಫೆಬ್ರವರಿ 1ರಂದು ಅತ್ಯಂತ ಎತ್ತರದ ವಾಸ್ತು ಶಿಲ್ಪ ಬುರ್ಜ್ ಖಲೀಫಾದ ಮೇಲೆ ಟೈಟಲ್ ಲೋಗೋ ಲಾಂಚ್ ಆಗಿತ್ತು. ಜೊತೆಗೆ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಸನ್ಮಾನಿಸಿ ಗೌರವಿಸಿದ್ದಾರೆ. ಅಲ್ಲದೇ ಕಿಚ್ಚನ 25 ವರ್ಷಗಳ ಸಿನಿ ಸಾಧನೆಗಳನ್ನು ಅಭಿನಂದಿಸಿ ಕನ್ನಡ ಕಲಾ ತಿಲಕ ಬಿರುದು ನೀಡಿ ಸನ್ಮಾನಿಸಿದ್ದಾರೆ.