Hudugaru Tumba Ollevru ಹುಡುಗರು ತುಂಬಾ ಒಳ್ಳೆಯವ್ರು ಎಂದು ಹಾಡಿ ಹೊಗಳಿದ ಚೈತ್ರಾ ಕೋಟೂರು

Hudugaru Tumba Ollevru ಆನಂದ್ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾದ ಹುಡುಗರು ತುಂಬಾ ಒಳ್ಳೆಯವ್ರು ಹಾಡು ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಎಲ್ಲರೂ ನಮಗೆ ಬೈಯ್ಯುತ್ತಿರುವಾಗ ನೀವು ಮಾತ್ರ ನಮ್ಮನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Hudugaru Tumba Ollevru ಹುಡುಗರು ತುಂಬಾ ಒಳ್ಳೆಯವ್ರು ಎಂದು ಹಾಡಿ ಹೊಗಳಿದ ಚೈತ್ರಾ ಕೋಟೂರು
ಹುಡುಗರು ತುಂಬಾ ಒಳ್ಳೆಯವ್ರು ಹಾಡಿನಲ್ಲಿ ಚೈತ್ರಾ ಕೋಟೂರು
Skanda

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 04, 2021 | 7:06 PM

ನಟಿ ಚೈತ್ರಾ ಕೋಟೂರು ಆಗಾಗ ಸುದ್ದಿಯಲ್ಲಿರುತ್ತಾರೆ. ಬಿಗ್​ಬಾಸ್​ ಶೋಗೆ ಹೋದ ನಂತರವಂತೂ ಕರ್ನಾಟಕದ ಬಹುತೇಕ ಜನರಿಗೆ ಚೈತ್ರಾ ಅವರ ಪರಿಚಯ ಆಗಿಬಿಟ್ಟಿದೆ. ಬಿಗ್​ಬಾಸ್​ ನಂತರ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಂಡಿದ್ದ ನಟಿ ಸ್ವಲ್ಪ ಕಾಲ ಕಣ್ಮರೆಯಾಗಿದ್ದರು. ಆದರೆ, ಇದೀಗ ಚೈತ್ರಾ ಮತ್ತೆ ಮುನ್ನೆಲೆಗೆ ಬಂದಿದ್ದು, ಹುಡುಗರು ತುಂಬಾ ಒಳ್ಳೆಯವ್ರು ಅಂತ ಹಾಡಿ ಹೊಗಳೋಕೆ ಶುರುಮಾಡಿದ್ದಾರೆ.

ಹುಡುಗರು ಸರಿಯಿಲ್ಲ ಅಂತ ಬೈಯೋ ಹುಡುಗಿಯರೇ ಜಾಸ್ತಿ ಇರೋ ಕಾಲದಲ್ಲಿ, ಹುಡುಗರು ತುಂಬಾ ಒಳ್ಳೆಯವ್ರು ಅನ್ನೋ ಪಟ್ಟ ಕೊಟ್ಟು ಹಾಡಿ ಹೊಗಳಿದ ಚೈತ್ರಾ ಕೋಟೂರು ಅಚ್ಚರಿ ಮೂಡಿಸಿದ್ದಾರೆ. ಅದೂ ಪ್ರೇಮಿಗಳ ದಿನಾಚರಣೆ ಹತ್ತಿರಾಗುತ್ತಿರುವ ಹೊತ್ತಲ್ಲೇ ಚೈತ್ರಾ ತಾನೇ ಬರೆದು, ಹಾಡಿ, ನಟಿಸಿ, ನಿರ್ಮಾಣ ಮಾಡಿರುವ ಮ್ಯೂಸಿಕಲ್​ ವಿಡಿಯೋ ಬಿಡುಗಡೆ ಮಾಡಿರುವುದು ಕುತೂಹಲವನ್ನೂ ಮೂಡಿಸಿದೆ.

ಆನಂದ್ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಇಂದು ಬಿಡುಗಡೆಯಾದ ಹುಡುಗರು ತುಂಬಾ ಒಳ್ಳೆಯವ್ರು ಹಾಡು ಉತ್ತಮ ಪ್ರತಿಕ್ರಿಯೆಯನ್ನೇ ಗಳಿಸಿದೆ. ಎಲ್ಲರೂ ನಮಗೆ ಬೈಯ್ಯುತ್ತಿರುವಾಗ ನೀವು ಮಾತ್ರ ನಮ್ಮನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರಂತೂ ಗಂಡು ಜನ್ಮಕ್ಕೂ ಒಂದು ಹಾಡು ಮಾಡೋಣ ಅಂದುಕೊಂಡ ನಿಮ್ಮ ದೊಡ್ಡ ಮನಸ್ಸಿಗೆ ದೊಡ್ಡ ನಮಸ್ಕಾರ ಎಂದು ಹೇಳಿದ್ದಾರೆ.

ಚೈತ್ರಾ ಕೋಟೂರು ಬ್ಯಾನರ್​ ಅಡಿಯಲ್ಲಿಯೇ ಮೂಡಿಬಂದಿರುವ ಈ ಹಾಡಿಗೆ ಸ್ವತಃ ಅವರೇ ಸಾಹಿತ್ಯ ಬರೆದಿದ್ದು, ಸಂಗೀತ ಸಂಯೋಜನೆ, ಗಾಯನ, ನಿರ್ಮಾಣ, ನಿರ್ದೇಶನವನ್ನೂ ಮಾಡಿದ್ದಾರೆ. ಹಾಡಿಗೆ ಚೈತ್ರಾ ಜೊತೆ ಶ್ವೇತಾ ಪ್ರಭು ದನಿಗೂಡಿಸಿದ್ದಾರೆ. ಇದರ ಛಾಯಾಗ್ರಹಣವನ್ನು ರಾಜ್​ ರೋಹಿತ್​ ಎಂಬುವವರು ಮಾಡಿದ್ದು, ಕಾವ್ಯ ಶಿವಮೊಗ್ಗ ಅವರ ನೃತ್ಯ ನಿರ್ದೇಶನದಲ್ಲಿ ಚೈತ್ರಾ ಹೆಜ್ಜೆ ಹಾಕಿದ್ದಾರೆ.

https://tv9kannada.com/garudagamana-vrishabhavahana-raj-b-shetty-starrer-movie-release-on-4th-june-2021

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada