ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ; ಧನ್ಯವಾದ ತಿಳಿಸಿದ ನಟ ಧ್ರುವ
ನಿನ್ನೆ ಮನಸ್ಸಲ್ಲಿದ್ದ ಆತಂಕ ಟ್ವೀಟರ್ ಮೂಲಕ ಹೇಳಿದ್ದೆ. ನಿಮ್ಮೆಲ್ಲರಿಗೂ ಹೇಗೆ ಧನ್ಯವಾದಗಳನ್ನು ಹೇಳಬೇಕು ಎಂದು ತಿಳಿಯುತ್ತಿಲ್ಲ ಎಂದು ಧ್ರುವ ಸರ್ಜಾ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದ್ದಕ್ಕೆ ನಟ ಧ್ರುವ ಸರ್ಜಾ ಇನ್ಸ್ಟಾಗ್ರಾಂಮ್ನಲ್ಲಿ ಧನ್ಯವಾದ ತಿಳಿಸಿದ್ದಾರೆ.
ನಿನ್ನೆ ಮನಸ್ಸಲ್ಲಿದ್ದ ಆತಂಕ ಟ್ವೀಟರ್ ಮೂಲಕ ಹೇಳಿದ್ದೆ. ನಿಮ್ಮೆಲ್ಲರಿಗೂ ಹೇಗೆ ಧನ್ಯವಾದಗಳನ್ನು ಹೇಳಬೇಕು ಎಂದು ತಿಳಿಯುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದ ಧ್ರುವ ಸರ್ಜಾ, ಥಿಯೇಟರ್ ಓಪನ್ ಆಗಿ 100% ಪ್ರೇಕ್ಷಕರಿಗೆ ಅವಕಾಶ ವಿಚಾರಕ್ಕೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಜೊತೆಗೆ ಶ್ಯಾಡೊ, ಇನ್ಸ್ ಪೆಕ್ಟರ್ ವಿಕ್ರಮ್, ರಾಬರ್ಟ್, ಯುವರತ್ನ, ಕೋಟಿಗೊಬ್ಬ 3, ಕೆಜಿಎಫ್ ಸೇರಿ ಬಿಡುಗಡೆಯಾಗುತ್ತಿರುವ ಸಿನಿಮಾಗಳೆಲ್ಲವನ್ನೂ ಚಿತ್ರಮಂದಿರಕ್ಕೆ ಹೋಗಿ ನೋಡಿ ಎಂದು ಹೇಳಿದರು.
View this post on Instagram