ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ.. ವಿಪ್ರೋದಲ್ಲಿ ಕೆಲಸ ಮಾಡುವವರನ್ನು ಬಂಧಿಸಲಾಗಿದೆ: ಸಿ.ಎಂ.ಇಬ್ರಾಹಿಂ
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ 72 ಪ್ರಕರಣಗಳು ದಾಖಲಾಗಿದೆ. 426 ಜನರನ್ನ ಈವರೆಗೆ ದಸ್ತಗಿರಿ ಮಾಡಲಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯ ಎರಡು ಪ್ರಕರಣಗಳನ್ನ ಎನ್.ಐ.ಎ ತಂಡಕ್ಕೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ನಲ್ಲಿ ಸಿ.ಎಂ.ಇಬ್ರಾಹಿಂ ಮಾಡಿದ ಆರೋಪಗಳಿಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ 72 ಪ್ರಕರಣಗಳು ದಾಖಲಾಗಿದೆ. 426 ಜನರನ್ನ ಈವರೆಗೆ ದಸ್ತಗಿರಿ ಮಾಡಲಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯ ಎರಡು ಪ್ರಕರಣಗಳನ್ನ ಎನ್.ಐ.ಎ ತನಿಖೆಗೆ ವರ್ಗಾವಣೆ ಮಾಡಲಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ಪ್ರಕರಣ ಸಿಸಿಬಿಗೆ ವಹಿಸಲಾಗಿದೆ.
ಪ್ರಕರಣ ಸಂಬಂಧ 63 ಜನರನ್ನ ಅರೆಸ್ಟ್ ಮಾಡಲಾಗಿದೆ. ಗಲಭೆ ಸಂಬಂಧಿಸಿದಂತೆ ಮೊಕದ್ದಮೆ ಸಂಬಂಧ 72 ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಕ್ರಮವಹಿಸಲಾಗಿದೆ. ಈಗಾಗಲೇ ನಷ್ಟ ಅಂದಾಜು ಮಾಡಲು ಕ್ಲೈಮ್ ಕಮೀಷನ್ ನೇಮಕ ಮಾಡಲಾಗಿದೆ ಎಂದು ಸಿ.ಎಂ. ಇಬ್ರಾಹಿಂ ಪ್ರಶ್ನೆಗೆ ಸಚಿವ ಬೊಮ್ಮಾಯಿ ಉತ್ತರ ನೀಡಿದರು.
ಅಮಾಯಕರನ್ನ ಬಂಧನ ಮಾಡಲಾಗಿದೆ. ವಿಪ್ರೋದಲ್ಲಿ ಕೆಲಸ ಮಾಡೋರನ್ನು ಅರೆಸ್ಟ್ ಮಾಡಿದ್ದಾರೆ. ಅಮಾಯಕರನ್ನ ಬಿಡುಗಡೆ ಮಾಡಿ ಎಂಬ ಸಿ.ಎಂ. ಇಬ್ರಾಹಿಂ ಆಗ್ರಹಕ್ಕೆ ಉತ್ತರಿಸಿದ ಬೊಮ್ಮಾಯಿ, ಪ್ರಾಥಮಿಕ ತನಿಖೆಯಲ್ಲಿ ಅನೇಕ ಜನರನ್ನ ಬಂಧಿಸಲಾಗಿತ್ತು. ಇದ್ರಲ್ಲಿ 84-90 ಜನರನ್ನ ಬಿಡಲಾಗಿದೆ. ಅಮಾಯಕರು ಯಾರನ್ನೂ ಬಂಧನ ಮಾಡಿಲ್ಲ. ಪೊಲೀಸರ ತನಿಖೆಯಲ್ಲಿ ಹಸ್ತಕ್ಷೇಪ ಮಾಡೊಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್ ಜಾಕೀರ್ ಅರೆಸ್ಟ್
Published On - 4:52 pm, Thu, 4 February 21