ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲ್ ಚಲ್ ಎಬ್ಬಿಸಿರುವ, ಅನೇಕ ತಿರುವುಗಳನ್ನು ಪಡೆಯುತ್ತಿರುವ ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಟಿವಿ9ಗೆ ನಟಿ ಸಂಜನಾ ಗಲ್ರಾನಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ನನಗೆ ಸಹೋದರನಿದ್ದಂತೆ ಅಷ್ಟೇ. ರಾಹುಲ್‌ನನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಹಾಗಂತ ಅದು ಅಪರಾಧವಲ್ಲ, ಅದಕ್ಕೂ ನನಗೆ ಸಂಬಂಧವಿಲ್ಲ. ನನಗೆ ಸಿಸಿಬಿಯಿಂದ ಕರೆ ಬಂದಿಲ್ಲ, ಬರುವುದೂ ಇಲ್ಲ ಎಂದು ಟಿವಿ9ಗೆ ನಟಿ ಸಂಜನಾ ಗಲ್ರಾನಿ ತಿಳಿಸಿದ್ದಾರೆ. ಸದ್ಯ ಗಲ್ರಾನಿ ತಮ್ಮ ಹೈದರಾಬಾದ್ ನಿವಾಸದಲ್ಲಿದ್ದಾರೆ.